ಪುಟ್ಟ ಮಳಿಗೆಯಲ್ಲೇ ವಾಚನಾಲಯ
Team Udayavani, Oct 29, 2019, 12:39 PM IST
ರೋಣ: ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ, ಸುಮಾರು ನಾಲ್ಕುವರೆ ಸಾವಿರ ಜನಸಂಖ್ಯೆ ಹೊಂದಿರುವ ಹಿರೇಹಾಳ ಗ್ರಾಮದಲ್ಲಿನ ವಾಚನಾಲಯಕ್ಕೆ ಸ್ವಂತ ಕಟ್ಟಡ, ಸೂಕ್ತ ಆಸನ, ಸಮರ್ಪಕ ವಾತಾವರಣ, ಗಾಳಿ ಬೆಳಕು ಸೇರಿದಂತೆ ಮೂಲ ಸೌಕರ್ಯಗಳಿಲ್ಲದೇ ಓದುಗರಿಗೆ ಗ್ರಂಥಾಲಯ ಇದ್ದು ಇಲ್ಲದಂತಾಗಿದೆ.
1994ರಲ್ಲಿ ಈ ಗ್ರಂಥಾಲಯ ಸ್ಥಾಪನೆಯಾಗಿದೆ. ಅಲ್ಲಿಂದ ಇಲ್ಲಿಯವರೆ ಸ್ವಂತ ಕಟ್ಟಡ ನೀಡುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಈ ಗ್ರಾಮಕ್ಕೆ ರಾಜ್ಯಹೆದ್ದಾರಿ ಹಾದು ಹೋಗುವುದರಿಂದ ಏಳೇಂಟು ಗ್ರಾಮಗಳಿಗೆ ಕೇಂದ್ರವಾಗಿದೆ. ಆದರೆ ಇಲ್ಲಿ ಒಂದು ಸುವ್ಯವಸ್ಥಿತವಾದ ಗ್ರಂಥಾಲಯವಿಲ್ಲದೆ ಇರುವುದು ಇಲ್ಲಿನ ಓದುಗರಿಗೆ ತೀವ್ರ ಹಿನ್ನಡೆಯಾಗಿದೆ. ಗ್ರಾಪಂನ 8 ಅಡಿ ಉದ್ದ 8 ಅಗಲದ ಸಣ್ಣ ಮಳಿಗೆಯಲ್ಲಿ ಗ್ರಂಥಾಲಯವಿದೆ. ಅಲ್ಲದೆ ಅದಕ್ಕೆ ನಾಮಫಲಕವಿಲ್ಲದೆ ಇರುವುದರಿಂದ ವಾಚನಾಲಯ ಇರುವುದೇ ಗೊತ್ತಾಗುತ್ತಿಲ್ಲ.
ಮುಂದೆಯೇ ಮೂತ್ರಾಲಯ-ಚರಂಡಿ: ಗ್ರಂಥಾಲಯದಲ್ಲಿ ಜಾಗದ ಜೊತೆಗೆ ಆಸನಗಳ ಕೊರತೆ ತುಂಬಾ ಇದ್ದು, ಇಲ್ಲಿಗೆ ಬರುವ ಎರಡೋ ಮೂರು ದಿನಪ್ರತಿಕೆಗಳನ್ನು ಓದಲು ಇಲ್ಲಿನ ಯುವಕರು, ಹಿರಿಯರು ಹೊರಗಡೆ ಕುಳಿತುಕೊಳ್ಳುತ್ತಾರೆ. ಆದರೆ ವಾಚನಾಲಯದ ಮುಂದೆಯೇ ಮೂತ್ರಾಲಯವಿರುವುದರಿಂದ ಗಬ್ಬು ನಾರುವ ವಾಸನೆಯಲ್ಲಿ ಪತ್ರಿಕೆ ಓದಬೇಕಾದ ಸ್ಥಿತಿ ಇಲ್ಲಿನ ಓದುಗರಿಗಿದೆ. ಅಲ್ಲದೆ ಈ ವಟಾರದ ಜನರು ಇರೋ ಬರೋ ಕಸವನ್ನು ತಂದು ಗ್ರಂಥಾಲಯದ ಮುಂದೆ ರಾಶಿ ಹಾಕಿದ್ದಾರೆ. ಇದರ ಪಕ್ಕದಲ್ಲಿ ಹರಿಯುವ ಚರಂಡಿಗೆ ಕಸಕಡ್ಡಿಗಳು ಬಿದ್ದು ಗಬ್ಬೆದ್ದು ನಾರುತ್ತಿವೆ. ಇದು ಓದುಗರಿಗೆ ಕಿರಿಕಿರಿಯಾಗಿದೆ. ಗ್ರಂಥಾಲಯದ ಗ್ರಂಥಪಾಲಕರು ತಡವಾಗಿ ಬರುವುದರಿಂದ ಓದುಗರಿಗೆ ತೊಂದರೆಯಾಗುತ್ತಿದೆ. ಪತ್ರಿಕೆ ಓದಲು ಬರುವವರಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಬೆಳಗ್ಗೆ 8ಕ್ಕೆ ಗ್ರಂಥಾಲಯ ಪ್ರಾರಂಭವಾಗಬೇಕು ಎನ್ನುವುದು ಇಲ್ಲಿನ ಓದುಗರ ಅಭಿಪ್ರಾಯವಾಗಿದೆ.
ಕಳೆದ 25 ವರ್ಷಗಳಿಂದ ಹಿರೇಹಾಳ ಗ್ರಂಥಾಲಯದ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ಕಟ್ಟಡದ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಲಿಖೀತ ಹಾಗೂ ಮೌಖೀಕ ಮನವಿ ಮಾಡಿಕೊಂಡಿದ್ದೇನೆ. ಇಲ್ಲಿಯವರೆಗೆ ಕಟ್ಟಡ ನೀಡಿಲ್ಲ. ಈಗಿರುವ ಜಾಗ ಚಿಕ್ಕದಾಗಿದೆ. ಇದರಲ್ಲಿ 2000 ಪುಸ್ತಕ ಇಟ್ಟುಕೊಳ್ಳಲು ಜಾಗ ಸಾಲುತ್ತಿಲ್ಲ. ಇದರಿದ ಸರ್ಕಾರ ಹಾಗೂ ಇಲಾಖೆ ಸ್ವಂತ ಅಥವಾ ವ್ಯವಸ್ಥಿತವಾದ ಖಾಸಗಿ ಜಾಗವನ್ನು ಬಾಡಿಗೆ ರೂಪದಲ್ಲಿ ನೀಡಿದರೆ ಓದುಗರಿಗೆ ಅನುಕೂಲಕರವಾದ ವಾತವರಣ ಕಲ್ಪಿಸಲು ಸಹಾಯವಾಗುತ್ತದೆ. –ಜಿ.ವಿ. ಬಾಗೂರಮಠ, ಗ್ರಂಥಪಾಲಕ
25 ವರ್ಷಗಳ ಹಿಂದೆ ಸ್ಥಾಪನೆಯಾದ ನಮ್ಮೂರ ಗ್ರಂಥಾಲಯಕ್ಕೆ ಒಂದು ಸ್ವಂತ ಕಟ್ಟಡವಿಲ್ಲ. ಇರುವ ಕಟ್ಟದಲ್ಲಿ ಕಿಡಕಿ, ಗಾಳಿ ಬೆಳಕಿಲ್ಲ. ಜೊತೆಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಗಳು ಇಲ್ಲದೆ ಇರುವುದರಿಂದ ಓದುಗರಿಗೆ ಇದ್ದು ಇಲ್ಲದಂತಾಗಿದೆ.-ಅಭಿಗಾಣಿಗೇರ,ಗ್ರಾಮದ ಯುವಕ
-ಯಚ್ಚರಗೌಡ ಗೋವಿಂದಗೌಡ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.