ಕನಕಪುರವನ್ನು ಡಿಕೆಶಿ ಕರ್ನಾಟಕ ಅಂತಾ ತಿಳಿದಿದ್ದಾರೆ: ಸುಧಾಕರ್ ವಾಗ್ದಾಳಿ
Team Udayavani, Oct 29, 2019, 5:38 PM IST
ಚಿಕ್ಕಬಳ್ಳಾಪುರ : ಡಿ.ಕೆ.ಶಿವಕುಮಾರ್ ಪಾಪ ಮೆಡಿಕಲ್‌ಗಾಗಿ ಪ್ರಾಣ ಬಿಡಿತ್ತೀನಿ ಅಂತ ಹೇಳಿದ್ದಾರೆ. ಪ್ರಾಣ ಉಳಿಸಲಿಕ್ಕೆ ಮೆಡಿಕಲ್ ಕಾಲೇಜು ಇರುವುದು. ಆದರೆ ಡಿ.ಕೆ.ಶಿವಕುಮಾರ್, ಕನಕಪುರವನ್ನು ಕರ್ನಾಟಕ ಅಂತಾ ತಿಳಿದುಕೊಂಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ.ಕೆ.ಸುಧಾಕರ್, ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
2016 – 2017 ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಬಜೆಟ್‌ನಲ್ಲಿ ಮಂಜೂರು ಮಾಡಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಬಂದ ಮೇಲೆ. ಡಿ.ಕೆ.ಶಿವಕುಮಾರ್ ವೈದ್ಯಕೀಯ ಶಿಕ್ಷಣ ಸಚಿವರಾದರು. ಆದರೆ ಅವರು ಕನಕಪುರವನ್ನು ಡಿಕೆಶಿ ಕರ್ನಾಟಕ ಅಂತಾ ತಿಳಿದುಕೊಂಡಿದ್ದಾರೆಂದು ಗೇಲಿ ಮಾಡಿದರು.
ಪ್ರತಿ ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಆಗಬೇಕೆಂದು ಸರ್ಕಾರದ ನಿರ್ಧಾರ. ಅದರನ್ವಯ ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜಿಗೆ ಅವರು ಅನುದಾನ ಕೊಡಬೇಕಿತ್ತು. ಅವರು ಇಡೀ ರಾಜ್ಯಕ್ಕೆ ಮಂತ್ರಿ ಕನಕಪುರಕ್ಕೆ ಮಾತ್ರವಲ್ಲ. ಆದರೆ ಕನಕಪುರಕ್ಕೂ ಮಾಡಿಕೊಂಡು ನಮ್ಮ ಜಿಲ್ಲೆಗೂ ಅನುದಾನ ಕೊಡಬೇಕಿತ್ತು ಎಂದರು. ಅದಕ್ಕಾಗಿಯೆ ಇಂದಿನ ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಮಲತಾಯಿ ಧೋರಣೆ ಮಾಡಿದ್ದು, ಅನುದಾನ ಹಂಚಿಕೆಯಲ್ಲಿ ಆನ್ಯಾಯ ಮಾಡಿದ್ದಕ್ಕೆ ಭೇಸತ್ತು ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದ ಸುಧಾಕರ್, ನಾನು ಕ್ಷೇತ್ರದ ಜನರ ಹಿತಾಸಕ್ತಿಗಾಗಿ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಈ ವಿಚಾರವನ್ನು ಸಿಎಂ ಯಡಿಯೂರಪ್ಪರನ್ನು ಬೇಟಿ ಮಾಡಿ ಎಲ್ಲ ವಿಚಾರ ತಿಳಿಸಿದೆ. ಕನಕಪುರಕ್ಕೆ ಒಂದೇ ಬಾರಿ 450 ಕೋಟಿ ಅನುದಾನ ಕೊಟ್ಟಿದ್ದಾರೆ. ನಮಗೂ ನ್ಯಾಯ ಕೊಡಿಸಬೇಕೆಂದು ಕೇಳಿದೆ. ಅದಕ್ಕಾಗಿ ಯಡಿಯೂರಪ್ಪ ಸ್ಪಂದಿಸಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಿ 670 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.
ಯಡಿಯೂರಪ್ಪ ಕೈಯಲ್ಲಿ ಶಂಕುಸ್ಥಾಪನೆ :
ಉಪ ಚುನಾವಣೆಗೂ ಮೊದಲೇ ಯಡಿಯೂರಪ್ಪ ಕೈಯಲ್ಲಿಯೇ ಶಂಕುಸ್ಥಾಪನೆ ನೆರವೇರಿಸುವುದು ನೂರಕ್ಕೆ ನೂರಷ್ಟು ಸತ್ಯ ಎಂದರು. ಇಲ್ಲದೇ ಹೋದರೆ ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆಂದರು. ರಾಮನಗರದಲ್ಲಿ ಈಗಾಗಲೇ ಆರೋಗ್ಯ ವಿಶ್ವ ವಿದ್ಯಾಲಯ ಇದೆ. ಕನಕಪುರಕ್ಕೆ ಪ್ರತ್ಯೇಕವಾಗಿ ಮೆಡಿಕಲ್ ಕಾಲೇಜು ಏಕೆ ಬೇಕೆಂದರು. ಒಂದು ಜಿಲ್ಲೆಗೆ ಆನ್ಯಾಯ ಮಾಡುವುದು ಡಿ.ಕೆ.ಶಿವಕುಮಾರ್‌ಗೆ ಸರಿಯೆ? ಅನುದಾನ ಇದ್ದರೆ ಪ್ರತಿ ಜಿಲ್ಲೆಗೆ ಮಾಡಲಿ ಒಬ್ಬ ವೈದ್ಯನಾಗಿ ಹೆಚ್ಚು ಖುಷಿ ಪಡುತ್ತೇನೆ. ಆದರೆ ಮೊದಲು ಜಿಲ್ಲೆಗೆ ಆಗಲಿ ಎಂದರು.
ಹೊಡೆಯುವುದು ಬಡಿಯುವುದು ನನ್ನ ಸಂಸ್ಕೃತಿ ಅಲ್ಲ :
ಹೊಡೆಯುವುದು, ಬಡಿಯುವುದು, ನೇಣು ಹಾಕುವುದು, ನೇಣು ಹಾಕಿಸುವುದು ನಮ್ಮ ಸಂಸ್ಕೃತಿ ಅಲ್ಲ. ನಮ್ಮ ತಂದೆ, ತಾಯಿ ಆ ಸಂಸ್ಕೃತಿ ನಮಗೆ ಕಲಿಸಿಲ್ಲ. ಎಲ್ಲರನ್ನು ಪ್ರೀತಿ ಮಾಡುವ ಸಂಸ್ಕೃತಿ ನನ್ನದು ಎಂದರು. ಏಕವಚನದಲ್ಲಿ ಮಾತನಾಡುವುದು ಅವರ ಹುಟ್ಟುಗುಣ, 10 ವರ್ಷದಲ್ಲಿ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ. ರಾಜಕೀಯವಾಗಿ ನಾನು ಅವರಿಂದ ಯಾವುದೇ ಸಹಕಾರ ಪಡೆದಿಲ್ಲ.. ನನ್ನನ್ನು ಏಕವಚನದಲ್ಲಿ ಮಾತನಾಡಲಿಕ್ಕೆ ಡಿಕೆಶಿ ನನ್ನ ಹಿರಿಯಣ್ಣನಾ ಎಂದು ಸುಧಾಕರ್ ಪ್ರಶ್ನೆಸಿದರು. ಮೊದಲು ಸಾರ್ವಜನಿಕ ಬದುಕಿನಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅವರು ಅರಿಯಲಿ ಎಂದು ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದರು. ಅವರ ಬಳಿ ಯಾವ ಕೆಲಸಕ್ಕೆ ನಾನು ಹೋದವನಲ್ಲ. ನನ್ನ ಜಿಲ್ಲೆ, ಕ್ಷೇತ್ರದ ಜನರ ಸಮಸ್ಯೆ ಬಗ್ಗೆ ಕೇಳುವುದು ಅಷ್ಟೇ ನನ್ನ ಹಕ್ಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.