ಕುವೈಟ್‌ನಲ್ಲಿ ಕಿರುಕುಳ: ತೊಕ್ಕೊಟ್ಟಿನ ಯುವಕನ ರಕ್ಷಣೆ
Team Udayavani, Oct 30, 2019, 4:22 AM IST
ನೆಲ್ಸನ್ ಅವರಿಗೆ ಭಾರತಕ್ಕೆ ವಾಪಸಾಗಲು ದಾಖಲೆ ನೀಡಲಾಯಿತು.
ಮಂಗಳೂರು: ಕುವೈಟ್‌ನಲ್ಲಿ ಚಾಲಕ ವೃತ್ತಿಗಾಗಿ ತೆರಳಿ ಅನಂತರ ಅಲ್ಲಿ ಕಿರುಕುಳಕ್ಕೊಳಗಾಗಿದ್ದ ತೊಕ್ಕೊಟ್ಟಿನ ಯುವಕ ನೆಲ್ಸನ್ ಡಿ’ಸೋಜಾ ಅವರನ್ನು ಅಲ್ಲಿನ ಕನ್ನಡಿಗರ ನೆರವಿನೊಂದಿಗೆ ರಕ್ಷಿಸಿ ಸ್ವದೇಶಕ್ಕೆ ಕಳುಹಿಸಲಾಗಿದೆ.
ತೊಕ್ಕೊಟ್ಟಿನಲ್ಲಿ ಆಟೋರಿಕ್ಷಾ ಚಾಲಕರಾಗಿದ್ದ ನೆಲ್ಸನ್ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಏಜೆಂಟ್ ಮೂಲಕ ವೀಸಾ ಪಡೆದು ಕಳೆದ ವರ್ಷ ಆಗಸ್ಟ್‌ನಲ್ಲಿ ಕುವೈಟ್‌ಗೆ ತೆರಳಿದ್ದರು. ಆದರೆ ಅಲ್ಲಿ ಅವರಿಗೆ ಮನೆಕೆಲಸ ನೀಡಲಾಗಿತ್ತು. ಜತೆಗೆ ಪ್ರತಿದಿನ ಕಿರುಕುಳ ನೀಡಲಾಗುತ್ತಿತ್ತು. ಕೆಲವು ದಿನಗಳ ಬಳಿಕ ಸೌದಿಯ ಗಡಿಪ್ರದೇಶವೊಂದರ ಮರುಭೂಮಿ ಪ್ರದೇಶವಾದ ವಫ್ರಾದಲ್ಲಿ ಮನೆಯಲ್ಲಿರಿಸಿ ಮಾನಸಿಕವಾಗಿ ಕಿರುಕುಳ ನೀಡಲಾಗಿತ್ತು.
ಸೆರೆಯಿಂದ ಮುಕ್ತಿ
ನೆಲ್ಸನ್ ಅವರು ಕುವೈಟ್‌ನಲ್ಲಿದ್ದ ತನ್ನ ಗೆಳೆಯ ದೀಪೆ¤¤àಶ್‌ಗೆ ಕರೆ ಮಾಡಿ ಸಹಾಯ ಯಾಚಿಸಿದ್ದರು. ಆದರೆ ದೀಪೆಶ್‌ಗೆ ಆ ಸಂದರ್ಭದಲ್ಲಿ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ನೆಲ್ಸನ್ ಆ ಮನೆಯಿಂದ ತಪ್ಪಿಸಿಕೊಂಡು ಹೊರಬಂದರು. ಸುಮಾರು 5 ಕಿ.ಮೀ. ನಡೆದುಕೊಂಡು ಬಂದು
ದೀಪೆಶ್ ಅವರನ್ನು ಭೇಟಿ ಮಾಡಿದ್ದರು. ಅನಂತರ ಕಾರ್ಕಳ ಮೂಲದ ಜೇಮ್ಸ್ ಪೌಲ್ ಅವರು ನೆಲ್ಸನ್ ನೆರವಿಗೆ ಬಂದರು. ಜೇಮ್ಸ್ ಪೌಲ್ ಹಾಗೂ ಮೋಹನದಾಸ್ ಕಾಮತ್ ಅವರು ಕುವೈಟ್‌ನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತಾತ್ಕಾಲಿಕ ದಾಖಲೆಗಳನ್ನು ದೊರಕಿಸಿಕೊಟ್ಟಿದ್ದು ಎರಡು ಮೂರು ದಿನಗಳಲ್ಲಿ ನೆಲ್ಸನ್ ಅವರನ್ನು ಊರಿಗೆ ಕಳುಹಿಸುವುದಕ್ಕೆ ಕಾನೂನು ಪ್ರಕಾರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೋಹನ್‌ದಾಸ್ ಕಾಮತ್ “ಉದಯವಾಣಿ’ಗೆ ತಿಳಿಸಿದ್ದಾರೆ.
“ನಾನು ಡ್ರೈವರ್ ವೀಸಾದಲ್ಲಿ ಬಂದಿದ್ದೆ. ಆದರೆ ನನಗೆ ಮನೆಕೆಲಸ ಕೊಟ್ಟು ಹಿಂಸೆ ನೀಡಿದರು. ನರಕ
ಯಾತನೆ ಅನುಭವಿಸಿ ಕೊನೆಗೂ ತಪ್ಪಿಸಿಕೊಂಡು ಬಂದೆ. ಅನಂತರ ಹಲವು ಮಂದಿ ಗೆಳೆಯರು ನೆರವಾದ್ದರಿಂದ ಮರಳಿ ಭಾರತಕ್ಕೆ ಬರಲು ಈಗ ಸಿದ್ಧನಾಗಿದ್ದೇನೆ’ ಎಂದು ನೆಲ್ಸನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.