ಕುಕ್ಕೆ ಜಲಸಂಗ್ರಹ ಘಟಕದಲ್ಲಿ ಕ್ಲೋರಿನ್‌ ಸೋರಿಕೆ

ದೀಪಾವಳಿ ರಾತ್ರಿ ಮನೆ ಬಿಟ್ಟು ಓಡಿದ ಸ್ಥಳೀಯರು

Team Udayavani, Oct 30, 2019, 5:56 AM IST

r-31

ಸುಬ್ರಹ್ಮಣ್ಯ: ಘಟನೆ ನಡೆದ ಕಲ್ಲಪಣೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ.

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಕಲ್ಲಪಣೆಯ ಜಲಸಂಗ್ರಹ ಘಟಕದಲ್ಲಿ ಕ್ಲೋರಿನ್‌ ಸೋರಿಕೆಯಾಗಿ ಉಸಿರಾಟದ ತೊಂದರೆ ಕಂಡುಬಂದುದರಿಂದ ಸ್ಥಳೀಯರು ಮನೆ ತೊರೆದು ಹೊರಬಂದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ತಡರಾತ್ರಿ 1 ಗಂಟೆ ವೇಳೆಗೆ ಕ್ಲೋರಿನ್‌ ಸೋರಿಕೆಯಾಗುತ್ತಿದ್ದಂತೆ ಪರಿಸರದಲ್ಲಿ ದುರ್ವಾಸನೆ ಪಸರಿಸಿತು. ಉಸಿರಾಟದ ತೊಂದರೆಗೊಳಗಾದ ಜನರು ಭಯದಿಂದ ರಾತೋರಾತ್ರಿ ಮನೆ ತೊರೆದು ಸಂಬಂಧಿಕರಲ್ಲಿ, ಪರಿಚಯಸ್ಥರಲ್ಲಿ ಆಶ್ರಯ ಪಡೆದರು. ಘಟನೆ ವೇಳೆ ಘಟಕದಲ್ಲಿ ಇಬ್ಬರು ಸಿಬಂದಿ ಮಾತ್ರ ಕರ್ತವ್ಯದಲ್ಲಿದ್ದರು. ಕೂಡಲೇ ದೇವಸ್ಥಾನ ಹಾಗೂ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಸುಳ್ಯದಿಂದ ಅಗ್ನಿಶಾಮಕದವರು ಬಂದು ಮುಂಜಾವ 5ರ ಹೊತ್ತಿಗೆ ಸೋರಿಕೆಯನ್ನು ತಡೆಗಟ್ಟಿದರು.

50 ಕುಟುಂಬಗಳಲ್ಲಿ ಭೀತಿ
ದೀಪಾವಳಿ ಸಂಭ್ರಮಾಚರಿಸಿ ನಿದ್ರೆಗೆ ಜಾರಿದ್ದ 50ಕ್ಕೂ ಅಧಿಕ ಕುಟುಂಬಗಳ ಜನರು ಏಕಾಏಕಿ ನಡೆದ ಘಟನೆಯಿಂದ ಆತಂಕಕ್ಕೊಳಗಾಗಿದ್ದರು. ಬೆಳಗ್ಗಿನ ತನಕವೂ ಭಯದಲ್ಲೇ ಇರುವಂತಾಯಿತು.

ದೇವಸ್ಥಾನದ ಸಮಗ್ರ ಅಭಿವೃದ್ಧಿಯ ಯೋಜನೆಯಡಿ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ 26 ಕೋ.ರೂ. ವೆಚ್ಚದ ಪೈಕಿ 12 ಕೋಟಿರೂ. ವೆಚ್ಚದಲ್ಲಿ ನೀರಿನ ಯೋಜನೆ ಜಾರಿಗೆ ತಂದಿದೆ. ಕಲ್ಲಪಣೆಯಲ್ಲಿ 5,000 ಲೀ. ಮತ್ತು 2,500 ಲೀ. ಸಾಮರ್ಥ್ಯದ 2 ಜಲ ಶುದ್ಧೀಕರಣ ಘಟಕಗಳಿವೆ.

ಇದೇ ಮೊದಲಲ್ಲ
ಘಟಕದಲ್ಲಿ ದೇವಸ್ಥಾನದ ಓರ್ವ ಖಾಯಂ ಸಿಬಂದಿ ಸೇರಿದಂತೆ 8 ಮಂದಿ ಗುತ್ತಿಗೆ ಸಿಬಂದಿ ಇದ್ದಾರೆ. ಎಲ್ಲರೂ ಸೂಕ್ತ ತರಬೇತಿ ಪಡೆದವರೇ. ಘಟಕದಲ್ಲಿ ಕ್ಲೋರಿನ್‌ ಸೋರಿಕೆ ಈ ಹಿಂದೆಯೂ ನಡೆದಿತ್ತು. ಓರ್ವ ಸಿಬಂದಿ ಉಸಿರಾಟ ತೊಂದರೆಯಿಂದ ಗಂಭೀರ ಸ್ಥಿತಿಗೆ ತಲುಪಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದ. ಘಟಕದಲ್ಲಿ ಫಯರ್‌ ಗನ್‌, ಮಾಸ್ಕ್ ಹೊರತುಪಡಿಸಿ ಯಾವುದೇ ಜೀವರಕ್ಷಕ ಸಾಧನಗಳಿಲ್ಲ. ಇಂತಹ ಸಂದರ್ಭಗಳಲ್ಲಿ ಸಿಬಂದಿ ಅಸಹಾಯಕರಾಗುತ್ತಾರೆ. ಸ್ಥಳೀಯರು ಭಯದಿಂದಲೇ ದಿನ ಕಳೆಯುವಂತಾಗಿದೆ. ಜಲಮಂಡಳಿ ಮತ್ತು ದೇವಸ್ಥಾನದ ಮಧ್ಯೆ ಹೊಂದಾಣಿಕೆ ಕೊರತೆಯೂ ಇದಕ್ಕೆಲ್ಲ ಅವಕಾಶ ಮಾಡಿಕೊಡುತ್ತಿದೆ ಎನ್ನಲಾಗಿದೆ. ಜಲಮಂಡಳಿಯು ನುರಿತ ತಂತ್ರಜ್ಞರನ್ನು ನಿಯೋಜಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಸ್ಥಳಕ್ಕೆ ಎಇಒ ಚಂದ್ರಶೇಖರ ಪೆರಾಲ್‌, ದೇಗುಲದ ಎಂಜಿನಿಯರ್‌ ಉದಯ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು.

ತಡರಾತ್ರಿ ನಡೆದದ್ದೇನು?
ಘಟಕದಲ್ಲಿ ಜಲಶುದ್ಧೀಕರಣಕ್ಕೆ ಬಳಸುವ ಮೂರು ಕ್ಲೋರಿನ್‌ ಸಿಲಿಂಡರ್‌ಗಳಿವೆ. ಸಣ್ಣ ಸಿಲಿಂಡರೊಂದಲ್ಲಿದ್ದ ಕ್ಲೋರಿನ್‌ ಮುಗಿಯುತ್ತ ಬಂದಿದ್ದು ಅದನ್ನು ಹೊರಗಿಡಿ ಎಂದು ಇತ್ತೀಚೆಗೆ ಪರಿಶೀಲನೆಗೆ ಬಂದಿದ್ದ ಗುಜರಾತಿನ ತಂತ್ರಜ್ಞರು ಘಟಕದ ಸಿಬಂದಿ ಬಳಿ ಹೇಳಿದ್ದರು. ಅದರಂತೆ ಸಿಬಂದಿ ಸಿಲಿಂಡರನ್ನು ಹೊರಗಿಟ್ಟಿದ್ದರು. ಸಿಲಿಂಡರಿನಲ್ಲಿದ್ದ ಅಲ್ಪ ಪ್ರಮಾಣದ ಅನಿಲವು ರಾತ್ರಿ ವೇಳೆಗೆ ಬಿಸಿಲು-ಮಳೆಯಿಂದ ತುಕ್ಕು ಹಿಡಿದಿದ್ದ ಸಿಲಿಂಡರಿನ ನಳಿಕೆ ಮೂಲಕ ಸೋರಿಕೆಯಾಯಿತು. ಅನಿಲದ ಪ್ರಮಾಣ ಅಲ್ಪವಾಗಿದ್ದರೂ ಅದರ ಭೀಕರತೆ ಎಷ್ಟಿತ್ತೆಂದರೆ ಪರಿಸರದ ಗಿಡ ಬಳ್ಳಿಗಳೆಲ್ಲ ಕರಟಿ ಹೋಗಿವೆ. ಅದೃಷ್ಟವಶಾತ್‌
ಜೀವಹಾನಿ ಸಂಭವಿಸಿಲ್ಲ.

ಘಟನೆ ಸ್ಥಳ ಪರಿಶೀಲಿಸಿದ್ದೇವೆ; ಸೋರಿಕೆಯಾಗಿರುವುದು ನಿಜ. ಖಾಲಿ ಸಿಲಿಂಡರಿನಲ್ಲಿ ಬಾಕಿ ಉಳಿದಿದ್ದ ಅಲ್ಪ ಕ್ಲೋರಿನ್‌ ಸೋರಿಕೆಯಾಗಿದೆ. ರಾತ್ರಿಯೇ ಅಗ್ನಿಶಾಮಕ ದಳವನ್ನು ಕರೆಯಿಸಿ ಸಮಸ್ಯೆ ನಿವಾರಿಸಿದ್ದೇವೆ.
– ಚಂದ್ರಶೇಖರ ಪೆರಾಲ್‌, ಎಇಒ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ಟಾಪ್ ನ್ಯೂಸ್

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

BK-hariprasad

Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್‌

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

BK-hariprasad

Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್‌

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

BK-hariprasad

Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್‌

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.