ಕಬ್ಬು ಕಟಾವಿಗೆ ಕೊಡಲಿ ಏಟು ಕೊಟ್ಟ ಮಳೆ


Team Udayavani, Oct 30, 2019, 10:36 AM IST

huballi-tdy-1

ಧಾರವಾಡ: ಧೋ ಎಂದು ಸುರಿಯುವ ಮಳೆ.. ಸೋ ಎಂದು ಬೀಸುವ ಬಿರುಗಾಳಿ.. ಸದ್ಯಕ್ಕೆ ಇವರಿಗೆ ತಾಡಪತ್ರಿಗಳೇ ಮನೆಗಳು.. ದುಡಿಯಲು ಗುಳೇ ಬಂದರೂ ತಪ್ಪುತ್ತಿಲ್ಲ ಇವರ ಬಾಳಿನ ಗೋಳು.. ಒಟ್ಟಿನಲ್ಲಿ ಮಳೆರಾಯನಿಗೆ ಹಿಡಿಶಾಪ..ಇವರ ಬದುಕು ಅಯ್ಯೋ ಪಾಪ.

ಹೌದು, ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದು ವರುಣನ ಆರ್ಭಟದಲ್ಲಿ ಸಿಲುಕಿ ಬದುಕುತ್ತಿರುವುದು ಒಂದು ಕಡೆಯಾದರೆ, 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತ ಕಬ್ಬನ್ನು ಕಟಾವು ಮಾಡದ ಸ್ಥಿತಿನಿರ್ಮಾಣವಾಗಿದ್ದು ಕಿತ್ತೂರು ಕರ್ನಾಟಕ ಭಾಗದ ಕಬ್ಬು ಬೆಳೆಗಾರರು ಮಳೆಗೆ ಹಿಡಿಶಾಪ ಹಾಕುವಂತಾಗಿದೆ.

ಪ್ರತಿವರ್ಷದಂತೆ ಈ ವರ್ಷವೂ ಮಹಾರಾಷ್ಟ್ರದ ನಾಗ್ಪುರ, ಔರಂಗಾಬಾದ್‌, ಸತಾರಾ, ಮರಾಠಾವಾಡ ಪ್ರಾಂತ್ಯಗಳಿಂದ ದಸರಾ-ದೀಪಾವಳಿ ಸಮಯಕ್ಕೆ ಕಬ್ಬು ಕಟಾವು ಗ್ಯಾಂಗ್‌ಗಳು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬಂದು ಬಿಡಾರ ಹೂಡಿದ್ದಾರೆ. 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ಈ ಭಾಗದಲ್ಲಿ ಪ್ರತಿವರ್ಷ ಅಕ್ಟೋಬರ್‌ನಿಂದ ಆರು ತಿಂಗಳ ಕಾಲ ಕಬ್ಬು ಕಟಾವು ಮಾಡುವ ಕೂಲಿ ಅರಸಿ ಇಲ್ಲಿಯೇ ಉಳಿದು ದುಡಿಮೆ ಮಾಡುತ್ತವೆ. ದೊಡ್ಡ ದೊಡ್ಡ ಲಾರಿ ಮತ್ತು ಟ್ರಾಕ್ಟರ್‌ಗಳಲ್ಲಿಯೇಕುಟುಂಬ ಪರಿವಾರದೊಡನೆ ದುಡಿಯಲು ಬರುವ ಇವರಿಗೆ ಈ ವರ್ಷದ ಮಳೆ ಛಡಿ ಏಟು ಕೊಟ್ಟಿದೆ.

ಕೂಲಿ ಮೈಮೇಲೆ: ಅಕಾಲಿಕ ಮಳೆ ಆರ್ಭಟ ಈ ಕೂಲಿ ಕುಟುಂಬಗಳನ್ನುಕಂಗಾಲು ಮಾಡಿದ್ದು, ಸಣ್ಣ ಸಣ್ಣ ಮಕ್ಕಳೊಂದಿಗೆ ಸುರಿಯುವ ಮಳೆಯಲ್ಲಿ ಬದುಕಿದ್ದಾರೆ. ಕೇವಲ ಹತ್ತು ಅಡಿಯಲ್ಲಿ ತಾಡಪತ್ರಿಗಳ ಟೆಂಟ್‌ಗಳನ್ನು ಹಾಕಿಕೊಂಡು ಬದುಕುತ್ತಿರುವ ಈ ಕುಟುಂಬಗಳು ಸದ್ಯಕ್ಕೆ ತಮ್ಮ ಕೈಯಿಂದಲೇ ಹಣ ಹಾಕಿಕೊಂಡು ಇಲ್ಲಿ ಜೀವನ ನಡೆಸುತ್ತಿದ್ದಾರೆ. ಕಬ್ಬು ಕಟಾವು ಆರಂಭಗೊಂಡರೆ ರೈತರು ಲಾರಿಗಳಿಗೆ ಎಂಟ್ರಿ ಹಣ ಕೊಡುತ್ತಾರೆ. ಈ ಹಣದಿಂದಲೇ ಜೀವನಾವಶ್ಯಕ ವಸ್ತುಗಳನ್ನು ಕೊಳ್ಳುತ್ತಾರೆ. ಆದರೆ ಇದೀಗ ಮಳೆಯಿಂದಾಗಿ ಕಬ್ಬು ಕಟಾವು ವಿಳಂಬವಾಗಿದ್ದು, ಕಳೆದ 15 ದಿನಗಳಿಂದ ಕೂಲಿಯೂ ಇಲ್ಲದೇ ಇತ್ತ ಹಣವೂ ಇಲ್ಲದೆಪರದಾಡುತ್ತಿದ್ದಾರೆ.

ಕಬ್ಬು ಬೆಳೆಗಾರರಿಗೂ ನಷ್ಟ: ಕಿತ್ತೂರು ಕರ್ನಾಟಕ ಭಾಗದಲ್ಲಿ ಮಳೆಯಿಂದಾಗಿ ಸದ್ಯಕ್ಕೆ ಇನ್ನೂ 15 ದಿನಗಳ ಕಾಲವಾದರೂ ಕಬ್ಬು ಕಟಾವು ಮಾಡುವಂತಿಲ್ಲ. ಕಬ್ಬಿನ ಗದ್ದೆಗಳಲ್ಲಿ ಒಂದೆರಡು ಅಡಿಯಷ್ಟು ನೀರು ಶೇಖರಣೆಯಾಗಿದ್ದು,  ಸತತ ಬಿಸಿಲು ಬಿದ್ದರೂ ಇನ್ನು ಎರಡು ವಾರಗಳ ಕಾಲವಾದರೂ ಭೂಮಿ ಒಣಗದ ಸ್ಥಿತಿ ತಲುಪಿದೆ. ಕಟಾವು ಮಾಡಿದರೂ ಅದನ್ನು ಸಾಗಿಸಲು ರೈತರ ಹೊಲಗಳಲ್ಲಿ ಲಾರಿ ಅಥವಾ ಟ್ರಾಕ್ಟರ್‌ಗಳು ಚಲಿಸದಷ್ಟು ಕೆಸರು ತುಂಬಿಕೊಂಡಿದೆ.

ಹೀಗಾಗಿ ರೈತರು ಕೂಡ ಕೊಂಚ ಕಂಗಾಲಾಗಿದ್ದಾರೆ. ಮಳೆ ಹೀಗೆ ಮುಂದುವರಿದರೆ ಕಬ್ಬಿನ ಕಾರ್ಖಾನೆಗಳಿಗೆ ನಂತರ ಒಮ್ಮೆ ಅಧಿಕ ಕಬ್ಬು ನುರಿಸುವ ಒತ್ತಡ ಬೀಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ ದಸರಾ ಮರುದಿನಂದಲೇ ಕಿತ್ತೂರು ಕರ್ನಾಟಕ ಭಾಗದ ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿನ ಕಬ್ಬು ಕಟಾವು ಪ್ರತಿವರ್ಷ ಆರಂಭಗೊಳ್ಳುತ್ತದೆ. ಆದರೆ ಈ ವರ್ಷದ ಅಕಾಲಿಕ ಮಳೆಯು ಭತ್ತ ಮತ್ತು ಕಬ್ಬು ಎರಡನ್ನು ನೆಲಕ್ಕುರುಳಿಸಿದೆ.

ವರ್ಷ ಭತ್ತ, ಸೋಯಾಬಿನ್‌, ಗೋವಿನಜೋಳವಂತೂ ಮಳೆಯಿಂದಾಗಿ ಹಾಳಾಗಿ ಹೋದವು. ಇದೀಗ ಕಬ್ಬಿನ ಬೆಳೆ ಒಂದಿಷ್ಟು ಉಳಿದಿತ್ತು. ಈ ಮಳೆ ಅದಕ್ಕೂ ಕಲ್ಲು ಹಾಕಿ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಕಬ್ಬು ಬೆಳೆಹಾನಿಗೂ ಸರ್ಕಾರ ಪರಿಹಾರ ಕೊಡಬೇಕು.-ಶಿವಪ್ಪ ಬಡಿಗೇರ, ರೈತ ಮುಖಂಡ

 

-ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.