ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ತೊಂದರೆ: ಆರೋಪ
ಭೂಮಿ ಕುಸಿದು ಬೃಹತ್ ಗಾತ್ರದ ಮರಗಳು ಧರೆಗುರುಳುವ ಸ್ಥಿತಿ ವಾಹನ ಓಡಾಟಕ್ಕೆ ಸಂಚಕಾರ
Team Udayavani, Oct 30, 2019, 5:53 PM IST
ಎನ್.ಆರ್.ಪುರ: ತಾಲೂಕು ಕೇಂದ್ರದಿಂದ ಶಿವಮೊಗ್ಗಕ್ಕೆ ಹೋಗುವ ಮುಖ್ಯರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ಪ್ರಸ್ತುತ ಧರೆ ಕುಸಿದು ಬೃಹತ್ ಗಾತ್ರದ ಮರಗಳು ಧರೆಗುರುಳುವ ಸ್ಥಿತಿಗೆ ತಲುಪಿವೆ ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಶಿವಮೊಗ್ಗದ ಮುಖ್ಯರಸ್ತೆ ಮಡಬೂರು ಗ್ರಾಮದ ಸಮೀಪ ಉಬ್ಬುತಗ್ಗಿನಿಂದ ಕೂಡಿದೆ ಎಂಬ ಕಾರಣಕ್ಕೆ ಉಬ್ಬುಗಳಿದ್ದ ರಸ್ತೆಯನ್ನು ಸಮತಟ್ಟಾಗಿ ನಿರ್ಮಿಸಲಾಯಿತು. ಹೀಗೆ ರಸ್ತೆಗಳನ್ನು ಸಮತಟ್ಟಾಗಿ ನಿರ್ಮಿಸುವಾಗ ಅ ಧಿಕ ಉಬ್ಬುಗಳಿದ್ದ ಸ್ಥಳದಲ್ಲಿ ರಸ್ತೆಯ ಎರಡೂ ಕಡೆ ರಸ್ತೆಯನ್ನು ವಿಸ್ತರಿಸುವಾಗ ಭಾರೀ ಪ್ರಮಾಣದಲ್ಲಿ ಮಣ್ಣನ್ನು ಅಗೆದಿದ್ದರಿಂದ ಎರಡೂ ಭಾಗದಲ್ಲೂ ಎತ್ತರದ ದಿಣ್ಣೆ ನಿರ್ಮಾಣವಾಗಿತ್ತು.
ಹೀಗೆ ದಿಣ್ಣೆಯ ಮಣ್ಣನ್ನು ಅಗೆಯುವಾಗ ಭಾರೀ ಮರಗಳು ಇರುವ ಜಾಗದಲ್ಲಿ ಮರದ ಬುಡದವರೆಗೂ ಸುಮಾರು ಅರ್ಧ ಕಿ.ಮೀ. ನಷ್ಟು ದೂರ ಮಣ್ಣನ್ನು ಅಗೆಯಲಾಗಿದೆ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಸುರಿದ ಭಾರೀ ಮಳೆಗೆ ಮಣ್ಣು ಕುಸಿಯುತ್ತ ಸಾಗಿದೆ. ಪ್ರಸ್ತುತ ವರ್ಷ ಭಾರೀ ಮಳೆ ಸುರಿಯುತ್ತಿರುವುದರಿಂದ ಧರೆ ಕುಸಿದು ಮರದ ಬುಡದಲ್ಲಿದ್ದ ಮಣ್ಣು ಕುಸಿಯಲು ಪ್ರಾರಂಭಿಸಿದೆ ಎಂದು ದೂರಿದ್ದಾರೆ.
ಮಳೆ ಮುಂದುವರೆದರೆ ಭಾರೀ ಗಾತ್ರದ ಮರಗಳು ರಸ್ತೆ ಮೇಲೆ ಯಾವುದೇ ಸಂದರ್ಭದಲ್ಲಿ ಬಿಳುವ ಸಾಧ್ಯತೆಯಿದೆ. ರಸ್ತೆ ನಿರ್ಮಾಣ ಮಾಡುವಾಗ ಇಲಾಖೆ ಮಾಡಿರುವ ಮತ್ತೂಂದು ಪ್ರಮಾದವೆಂದರೆ ಇನ್ನೊಂದು ಭಾಗದಲ್ಲಿ 33/11 ಕೆ.ವಿ. ವಿದ್ಯುತ್ ಮಾರ್ಗ ಹಾದು ಹೋಗಿದೆ. ಇದಕ್ಕಾಗಿ ದೊಡ್ಡ ವಿದ್ಯುತ್ ತಂತಿಯ ಟವರ್ ಅಳವಡಿಸಲಾಗಿದ್ದು, ಇದರ ಬುಡದ ಮಣ್ಣು ಸಹ ಅಗೆದಿರುವುದರಿಂದ ಈ ಭಾಗದಲ್ಲೂ ಮಣ್ಣು ಕುಸಿಯಲು ಪ್ರಾರಂಭವಾಗಿದೆ.
ಇವು ಸಹ ಯಾವುದೇ ಸಂದರ್ಭದಲ್ಲಿ ಧರೆಗುರುಳುವ ಸಾಧ್ಯತೆಯಿದೆ. ಅಲ್ಲದೇ, ಬಸ್ ತಂಗುದಾಣದ ಬುಡದವರೆಗೂ ಮಣ್ಣು ಅಗೆದಿರುವುದರಿಂದ ಇದು ಸಹ ಧರೆಗುರುಳುವ ಸಾಧ್ಯತೆಯಿದೆ ಎಂದಿದ್ದಾರೆ.
ಪ್ರಮುಖ ರಸ್ತೆಯಾಗಿರುವುದರಿಂದ ವಾಹನ ಸಂಚಾರ ನಿರಂತರವಾಗಿರುತ್ತದೆ. ವಾಹನ ಸಂಚರಿಸುವ ಸಂದರ್ಭದಲ್ಲಿ ಭಾರಿ ಗಾತ್ರದ ಮರಗಳು ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ಪ್ರಾಣ ಹಾನಿ ಸಂಭವಿಸುವ ಸಾಧ್ಯತೆಯಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಶೆಟ್ಟಿಕೊಪ್ಪ ಮುಖ್ಯರಸ್ತೆಯ ಬದಿಯಲ್ಲಿರುವ ಒಣಗಿದ ಮರ ತೆರವುಗೊಳಿಸುವ ಬಗ್ಗೆ ಪತ್ರ ಬಂದಿದೆ. ಮಡಬೂರು ಗ್ರಾಮದ ರಸ್ತೆ ಬದಿಯಲ್ಲಿ ಬೀಳುವ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಯ ಪತ್ರ ಬಂದ ನಂತರ ಪರಿಶೀಲಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಮಣ್ಣು ಕುಸಿತದಿಂದ ಮರ ಅಥವಾ ವಿದ್ಯುತ್ ಮಾರ್ಗ ರಸ್ತೆಗೆ ಬಿದ್ದು ಅನಾಹುತ ಸಂಭವಿಸುವ ಮೊದಲೇ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
MUST WATCH
ಹೊಸ ಸೇರ್ಪಡೆ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.