ಕಲ್ಕತ್ತಾದಲ್ಲೂ ವಾಯು ಗುಣಮಟ್ಟ ಕಳಪೆ
Team Udayavani, Oct 30, 2019, 7:09 PM IST
ಕಲ್ಕತ್ತಾ: ನಗರದಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟ ಕಳಪೆಯಾಗಿದೆ ಎಂದು ವೆಸ್ಟ್ ಬೆಂಗಾಲ್ ಪೊಲ್ಯುಶನ್ ಕಂಟ್ರೋಲ್ ಬೋರ್ಡ್ (WBPCB) ಹೇಳಿದೆ.
ನಗರದಲ್ಲಿ ಬುಧವಾರ ಕಾಳಿ ಪೂಜೆ, ದೀಪಾವಳಿ ಮತ್ತು ಭಾಯ್ ಫೋಂಟಾ ಆಚರಣೆ ಇದ್ದ ಕಾರಣ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಗಾಳಿಯ ಗುಣಮಟ್ಟ ಮಾಪಕ (ಎಐಕ್ಯೂ) ಪ್ರಕಾರ 233 ದಾಖಲಾಗಿದೆ. ಅಕಿಐ0-50 ಇದ್ದರೆ ಉತ್ತಮ, 51-100 ಇದ್ದರೆ ತೃಪ್ತಿದಾಯಕ, 101-200 ಇದ್ದರೆ ಮಧ್ಯಮ, 201-300 ದಾಖಲಾದರೆ ಕಳಪೆ, 301-400 ತೀರಾ ಕಳಪೆ, 401-500 ತುಂಬಾ ಅಪಾಯ ಎಂದರ್ಥ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂವಾಯು ಮಾಲಿನ್ಯ ಸಮಸ್ಯೆ ದೀಪಾವಳಿ ಹಬ್ಬದ ಸಂದರ್ಭ ಕಳಪೆಯಾಗಿತ್ತು. ಪ್ರತಿ ವರ್ಷ ದೀಪಾವಳಿ ಬಳಿಕದ ತಿಂಗಳಲ್ಲಿ ದಿಲ್ಲಿ ಕಳಪೆ ವಾಯು ಸಮಸ್ಯೆಯನ್ನು ಎದುರಿಸುತ್ತದೆ. ಈ ವರ್ಷ ದೀಪಾವಳಿಯ ಸಂದರ್ಭ ಅದು ಮುಂದುವರೆದಿದ್ದು, ಕಳೆದೆರಡು ವಾರಕ್ಕೆ ಹೋಲಿಸಿದರೆ ಈ ವಾರ ಉಸಿರಾಡುವ ಗಾಳಿ ತೀರಾ ಕಳಪೆ ಮಟ್ಟವನ್ನು ತಳೆದಿತ್ತು. ಆದರೆ ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪರಿಸ್ಥಿತಿ ಸುಧಾರಿಸಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯ ಹೇಳಿದೆ. ಇದೀಗ ಕಳಪೆ ವಾಯು ಹೊಂದಿರುವ ರಾಜ್ಯಗಳ ಸಾಲಿಗೆ ಕಲ್ಕತ್ತಾ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.