ಆಧಾರ್‌ ಕಾರ್ಡ್‌ ತಿದ್ದುಪಡಿಗೆ ನಾಗರಿಕರ ಪರದಾಟ

 ಟೋಕನ್‌ ಪಡೆಯಲು ನಿದ್ದೆಗೆಟ್ಟು ಸರದಿ ಸಾಲಿನಲ್ಲಿ ನಿಲ್ಲಬೇಕಾದ ಶೋಚನೀಯ ಸ್ಥಿತಿ

Team Udayavani, Oct 31, 2019, 4:54 AM IST

e-8

ವಿಟ್ಲ ಅಂಚೆ ಕಚೇರಿ ಮುಂದೆ ಬೆಳಗ್ಗೆ ಆಧಾರ್‌ ತಿದ್ದುಪಡಿಗಾಗಿ ನಾಗರಿಕರ ಸಾಲು.

ವಿಟ್ಲ: ಆಧಾರ್‌ ಕಾರ್ಡ್‌ ವಿಷಯದಲ್ಲಿ ನಾಗರಿಕರು ತೀವ್ರವಾಗಿ ತೊಂದರೆಗೊಳಗಾಗಿದ್ದಾರೆ. ಸರದಿ ಸಾಲಲ್ಲಿ ನಿಂತು, ಸಮಯ ಪೋಲಾಗಿರುವ ಉದಾಹರಣೆಗಳಿವೆ. ಈ ನಡುವೆ ಆಧಾರ್‌ ತಿದ್ದುಪಡಿ ಎಂಬ ಗೋಳು ಇದೀಗ ನಾಗರಿಕರ ನಿದ್ದೆಗೆಡಿಸಿದೆ.

ನಾಡ ಕಚೇರಿಯಲ್ಲಿಲ್ಲ
ವಿಟ್ಲದ ನಾಡಕಚೇರಿಯಲ್ಲಿ ಆಧಾರ್‌ ಕಾರ್ಡ್‌ ಒದಗಿಸುವುದಕ್ಕೆ, ತಿದ್ದುಪಡಿಗೆ ವ್ಯವಸ್ಥೆಯಿತ್ತು. ದಿನಕ್ಕೆ 30 ಮಂದಿಗೆ ಟೋಕನ್‌ ಸಿಗುತ್ತಿತ್ತು. ಪ್ರಸ್ತುತ ಜನವರಿ ತಿಂಗಳ ಕೊನೆಯವರೆಗೆ ಟೋಕನ್‌ ನೀಡಿಯೂ ಆಗಿದೆ. ಆದರೆ ಇದನ್ನು ನಂಬಿ ನಾಗರಿಕರು 2020ನೇ ಸಾಲಿನಲ್ಲಿ ಆಧಾರ್‌ ಕಾರ್ಡ್‌ ಪಡೆಯುವುದು ಅಥವಾ ತಿದ್ದುಪಡಿ ಮಾಡುವುದು ಕಷ್ಟ. ಏಕೆಂದರೆ, ಕಳೆದ 3 ವಾರಗಳಿಂದ ವಿಟ್ಲ ನಾಡಕಚೇರಿಯ ಕಂಪ್ಯೂಟರ್‌ ಸರಿಯಿಲ್ಲ. ಆಧಾರ್‌ ತಿದ್ದುಪಡಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ.

ಅಂಚೆ ಕಚೇರಿಯಲ್ಲಿ ಮಾತ್ರ
ವಿಟ್ಲ ಅಂಚೆ ಕಚೇರಿಯಲ್ಲಿ ಇದೇ ವ್ಯವಸ್ಥೆಯಿದೆ. ಉಳಿದೆಲ್ಲೆಡೆ ಈ ವ್ಯವಸ್ಥೆ ಯಿಲ್ಲ. ಅಂಚೆ ಕಚೇರಿಯಲ್ಲಿಯೂ ಕೇವಲ 30 ಟೋಕನ್‌ ಸಿಗುತ್ತದೆ. ಆಯಾಯ ದಿನ ಟೋಕನ್‌ ನೀಡುವ ಪದ್ಧತಿ ಇಲ್ಲಿದೆ. ಟೋಕನ್‌ ಪಡೆಯಲು ಸರದಿ ಸಾಲಲ್ಲಿ ನಿಲ್ಲುವುದೆಂದರೆ ಅದು ಭಗೀರಥ ಪ್ರಯತ್ನ. ಅದಕ್ಕಾಗಿ ರಾತ್ರಿಯೇ ಅಂಚೆ ಕಚೇರಿ ಬಳಿ ನಿಲ್ಲಬೇಕು. ತಡರಾತ್ರಿ 3 ಗಂಟೆಗೆ ಅಂಚೆ ಕಚೇರಿ ಮುಂಭಾಗದಲ್ಲಿ ನಿಂತಿರಬೇಕು. 6 ಗಂಟೆಗೆ ಗೇಟಿನೊಳಗಡೆ ಬಿಡುತ್ತಾರೆ. ಆಗ ಇರುವ 30 ಮಂದಿಗೆ ಟೋಕನ್‌ ಸಿಗುತ್ತದೆ. 8.30ರಿಂದ ಕೆಲಸ ಆರಂಭವಾಗುತ್ತದೆ. ಸಮಸ್ಯೆ ಅಂಚೆ ಕಚೇರಿಯದ್ದಲ್ಲ. ಅವರು ಪ್ರತಿದಿನ ಕರ್ತವ್ಯ ನಿಭಾಯಿಸುತ್ತಾರೆ. ಆದರೆ ಇರುವ 30 ಟೋಕನ್‌ಗಳಿಗಾಗಿ ನಾಗರಿಕರು ಪರದಾಡುವಂತಾಗಿದೆ.

ಸರ್ವರ್‌ ಸಮಸ್ಯೆ
ಕಳೆದ ಎಷ್ಟೋ ವರ್ಷಗಳಿಂದ ನಾಗರಿಕರು ಆಧಾರ್‌ ಕಾರ್ಡ್‌ಗಾಗಿ ಸಂಕಷ್ಟಪಡುವುದು ಯಾರ ಗಮನಕ್ಕೂ ಬಂದಂತಿಲ್ಲ. ಅಧಿಕಾರಿಗಳಿಗೂ ಜನಪ್ರತಿನಿಧಿ ಗಳಿಗೂ ನಾಗರಿಕರ ನಿತ್ಯದ ಗೋಳು ಕಿವಿಗೇ ಬಿದ್ದಿಲ್ಲ. ಸರ್ವರ್‌ ಸಮಸ್ಯೆ ಎಂದು ಹೇಳುವುದು ಮಾಮೂಲಿಯಾಗಿದೆ. ಈ ಸರ್ವರ್‌ ಸಮಸ್ಯೆಯನ್ನು ನಿವಾರಿಸುವ, ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಒದಗಿಸುವ ಪ್ರಯತ್ನಗಳು ಏಕಾಗುತ್ತಿಲ್ಲ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

 ಕ್ರಮಕ್ಕೆ ಆದೇಶ
ಆಧಾರ್‌ ಕಾರ್ಡ್‌ ತಿದ್ದುಪಡಿಗಾಗಿ ನಾಗರಿಕರು ತೊಂದರೆ ಪಡುತ್ತಿರುವುದನ್ನು ಮನಗಂಡು ನಾನು ಜಿಲ್ಲಾಧಿಕಾರಿಗೆ, ದಿಲ್ಲಿಯ ಕುಂದು ಕೊರತೆ ವಿಭಾಗಕ್ಕೆ, ಶಾಸಕರಿಗೆ ಪತ್ರ ಬರೆದು ಸಮಸ್ಯೆ ನಿವಾರಿಸಬೇಕು ಮತ್ತು ಆಧಾರ್‌ಗೆ ವಿಟ್ಲ, ಬಿ.ಸಿ. ರೋಡ್‌ನ‌ಲ್ಲಿ ಅದಾಲತ್‌ ಮಾಡ ಬೇಕು ಎಂದು ವಿನಂತಿಸಿದ್ದೆ. ಇದಕ್ಕೆ ಇ ಮತ್ತು ಐಟಿ ವಿಭಾಗದ ಅಸಿಸ್ಟೆಂಟ್‌ ಡೈರೆಕ್ಟರ್‌ ಜನರಲ್‌ ಎಲ್‌.ಕೆ. ದಕ್‌Ò ಅವರು ಬೆಂಗಳೂರು ಸೆಂಟರ್‌ ಫಾರ್‌ ಎ-ಗವರ್ನೆನ್ಸ್‌ ಜಿಒಕೆ ಅವರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ. ನನಗೂ ಆ ಪತ್ರದ ಪ್ರತಿ ಕಳುಹಿಸಿದ್ದಾರೆ. ಶಾಸಕರಿಗೆ ಮೊಬೈಲ್‌ನಲ್ಲಿ ಸಂಪರ್ಕಿಸಿದಾಗ ಆಧಾರ್‌ ಸಂಬಂಧಿಸಿದ ಕಿಟ್‌ ಬಂದಿಲ್ಲ. ಕಿಟ್‌ ಲಭಿಸಿದ ಕೂಡಲೇ ಕಾರ್ಯ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
 - ಶ್ರೀಧರ ಕುಕ್ಕೆಮನೆ ಕೋಡಪದವು, ನ್ಯಾಯವಾದಿ

 ಕೆಲವೊಮ್ಮೆ ಅಡ್ಡಿ
ಹಿಂದೆ ಪಂಚಾಯತ್‌ನಲ್ಲಿ ಆಧಾರ್‌ ತಿದ್ದುಪಡಿಗೆ ವ್ಯವಸ್ಥೆಯಿತ್ತು. ಅದನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸಿದೆ. ಇದೀಗ ವಿಟ್ಲ ನಾಡಕಚೇರಿಯಲ್ಲಿದೆ. ಆಧಾರ್‌ ಕಿಟ್‌ ಇರುವ ಲ್ಯಾಪ್‌ಟಾಪ್‌ ಇದ್ದಾಗ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ತೊಂದರೆಯಾಗಿರಬಹುದು. ಮತ್ತು ಆಧಾರ್‌ ತಿದ್ದುಪಡಿ ಕಾರ್ಯವನ್ನು ವೈಯಕ್ತಿಕವಾಗಿ ತಮ್ಮದೇ ಕಂಪ್ಯೂಟರ್‌ನಲ್ಲಿ ಅಥವಾ ಸೈಬರ್‌ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ಅದನ್ನು ಇನ್ನೂ ಕೆಲವರು ಬಳಸುತ್ತಿಲ್ಲ. ಈ ಬಗ್ಗೆ ವ್ಯಾಪಕ ಪ್ರಚಾರವೂ ಆಗಬೇಕಾಗಿದೆ. ಸರ್ವರ್‌ ಸಮಸ್ಯೆ ಈಗ ಕಡಿಮೆಯಾಗಿದೆ. ಆದರೂ ಕೆಲವೊಮ್ಮೆ ಅಡ್ಡಿಯಾಗುತ್ತಿದೆ.
 - ರಶ್ಮಿ ಎಸ್‌.ಆರ್‌. ತಹಶೀಲ್ದಾರ್‌, ಬಂಟ್ವಾಳ

ಆಧಾರ್‌ ತಿದ್ದುಪಡಿಯ ಗೋಳು ವೈರಲ್‌
ಕೆಲಸಕ್ಕೆ ರಜೆ ಹಾಕಿ ಬೆಳಗ್ಗೆ 4 ಗಂಟೆಗೆ ಎದ್ದು ಮನೆಯಿಂದ ಹೊರಟು 5 ಗಂಟೆಗೆ ಅಂಚೆ ಕಚೇರಿ ತಲುಪಿದೆ. ಗೇಟ್‌ ತೆರೆದಿರಲಿಲ್ಲ. ಆದರೆ ಗೇಟ್‌ನ ಹೊರಗೆ ಅಷ್ಟೊತ್ತಿಗಾಗಲೇ 14 ಮಂದಿ ಸೇರಿದ್ದರು. 15ನೇ ಸಂಖ್ಯೆ ನನಗೆ ದೊರಕಿತು. 6 ಗಂಟೆಗೆ ಗೇಟ್‌ ತೆರೆದರು. ಒಳಗೆ ಹೋದೆವು. 6 ಗಂಟೆಗೆ ಸಾಲಿನಲ್ಲಿ 30 ಮಂದಿ ಸೇರಿದ್ದರು. ಸಾಲಿನಲ್ಲಿದ್ದ ಮೊದಲ ವ್ಯಕ್ತಿ ನಿಂತಲ್ಲೇ ನಿದ್ದೆ ಮಾಡಿ ಪಕ್ಕದವರ ಮೇಲೆ ಬೀಳುತ್ತಿದ್ದುದ್ದನ್ನು ನೋಡಿ ಬೇಸರವಾಯಿತು. ಅನಂತರ ಇವರಲ್ಲಿ ಮಾತನಾಡಿಸಿ ದಾಗ ಅವರ ಊರು ದೂರ ಹಾಗೂ ವಾಹನ ಇಲ್ಲ. ವಿಟ್ಲದಲ್ಲಿರುವ ಬಂಧುವಿನ ಮನೆಯಲ್ಲಿ ವಾಸ್ತವ್ಯ, ಬೆಳಗ್ಗೆ 3 ಗಂಟೆಗೆ ಅಂಚೆ ಕಚೇರಿ ಮುಂದುಗಡೆ ತಲುಪಿದ್ದಾರೆ ಎಂದು ತಿಳಿಯಿತು. ಸಾಲಿನಲ್ಲಿ ನಿಲ್ಲಲು ಅಸಾಧ್ಯವಾದ ವಯಸ್ಕರು, ಪುಟ್ಟ ಮಗುವನ್ನು ಹೊತ್ತ ತಾಯಂದಿರಿದ್ದರು. 8 ಗಂಟೆಯ ತನಕವೂ ಮಹಿಳೆಯರು, ಪುರುಷರು, ವಯಸ್ಕರು ಬಂದು ತಮ್ಮ ಅಸಹಾಯಕತೆ ಪ್ರದರ್ಶಿಸಿ, ನಿರಾಶಭಾವದಿಂದ ಹಿಂತಿರುಗುತ್ತಿದ್ದರು. ಕೆಲವರು ತುಂಬಾ ದೂರದಿಂದ ಆಟೋದಲ್ಲಿ 300 ರೂ. ಖರ್ಚು ಮಾಡಿ ಬಂದರೂ 30 ಮಂದಿಯ ಸರದಿ ಸಾಲು ಸೇರಲು ಸಾಧ್ಯವಾಗಲೇ ಇಲ್ಲ. ಗಂಟೆ 8.30ಕ್ಕೆ ಸರಿಯಾಗಿ ಅಂಚೆ ಕಚೇರಿ ತೆರೆದು ಸಾಲಿನಲ್ಲಿ ನಿಂತು, 15ನೇ ಟೋಕನ್‌ ಪಡೆದು, ಮನೆಗೆ ಬಂದು, ಪತ್ನಿಯನ್ನು ಕರೆದುಕೊಂಡು ಹೋಗಿ, ಆಧಾರ್‌ ತಿದ್ದುಪಡಿ ಕಾರ್ಯ ಮುಗಿಯಿತೆಂದು ತಿಳಿದುಕೊಂಡಿದ್ದೇನೆ. ಪ್ರತಿದಿನ ಆಧಾರ್‌ ಕಾರ್ಡ್‌ಗಾಗಿ ಪರದಾಡಿದರೆ ಅವರ
ಹೊಟ್ಟೆ ತುಂಬಿಸುವವರಾರು? ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಬಡವರ ಕಷ್ಟಕ್ಕೆ ಸಹಕರಿಸಬೇಕಾಗಿದೆ.
– ಪ್ರದೀಪ್‌ ಬಲ್ಲಾಳ್‌ ಎರುಂಬು

-  ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.