![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Oct 30, 2019, 9:25 PM IST
ಹಾಸನ: ಹಾಸನಾಂಬಾ ಜಾತ್ರಾ ಮಹೋತ್ಸವದ 11 ದಿನಗಳಲ್ಲಿ ದೇವಾಲಯಕ್ಕೆ ಒಟ್ಟು 3.06 ಕೋಟಿ ರೂ.ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 58.12 ಲಕ್ಷ ರೂ.ಆದಾಯ ಹೆಚ್ಚಾಗಿದೆ.
ವಿಶೇಷ ದರ್ಶನದ ಟಿಕೆಟ್‌ಗಳ ಮಾರಾಟದಿಂದ 1.75 ಕೋಟಿ ರೂ.ಸಂಗ್ರಹವಾಗಿದ್ದರೆ, ಹುಂಡಿ ಕಾಣಿಕೆಯಿಂದ 1.31 ಕೋಟಿ ರೂ.ಸಂಗ್ರಹವಾಗಿದೆ. ಹಾಸನಾಂಬೆ ದೇಗುಲದ ಆವರಣದಲ್ಲಿರುವ ಸಿದ್ದೇಶ್ವರ ದೇವಾಲಯದ ಮುಂಭಾಗ ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಹುಂಡಿಯ ಎಣಿಕೆ ಸಂಜೆ 5.30ರ ವೇಳೆಗೆ ಮುಗಿಯಿತು. ಈ ವರ್ಷ ಹಾಸನಾಂಬ ದೇವಾಲಯದ ಬಾಗಿಲು ಒಟ್ಟು 13 ದಿನ ತೆರೆದಿತ್ತು.
ಈ ಮಧ್ಯೆ, ಭಕ್ತರು ಹಾಸನಾಂಬೆಯ ಸನ್ನಿಧಿಯಲ್ಲಿ ಚಿತ್ರ- ವಿಚಿತ್ರ ಬೇಡಿಕೆಗಳನ್ನು ಮಂಡಿಸಿದ್ದು, ಹುಂಡಿ ತೆರೆದಾಗ ಕಾಣಿಕೆ, ಚಿನ್ನ, ಬೆಳ್ಳಿಯ ಜೊತೆಗೆ ಲಿಖೀತ ಬೇಡಿಕೆಗಳೂ ಅನಾವರಣಗೊಂಡವು;
– ತಾಯೇ ನಮ್ಮ ಸಾಲಗಳನ್ನೆಲ್ಲಾ ತೀರಿಸಿ, ಒಂದು ನಿವೇಶನ ತೆಗೆದುಕೊಳ್ಳಲು ದಯೆ ತೋರಮ್ಮ.
– ನನ್ನ ಮಕ್ಕಳಿಗೆ ಒಳ್ಳೆ ವಿದ್ಯೆ, ಬುದ್ದಿ ಮತ್ತು ಗಂಡನಿಗೆ ಹಾಗೂ ಕುಟುಂಬದವರಿಗೆ ಆಯಸ್ಸು ಕೊಡು ತಾಯಿ.
– ನಾನು ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗುವಂತೆ ಮಾಡು ತಾಯಿ. ಓದುವ ಆಸಕ್ತಿ ಕರುಣಿಸು, ಒಳ್ಳೆ ಕಾಲೇಜಿನಲ್ಲಿ ಸೀಟು ಸಿಗುವಂತೆ ಮಾಡು.
– ನನ್ನ ತಾಯಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಸಿಗುವಂತೆ ಮಾಡು.
– ಪ್ರೀತಿ ಮಾಡುತ್ತಿರುವ ಹುಡುಗಿ ಮನೆಯವರು ಮತ್ತು ನಮ್ಮ ಮನೆಯವರು ಒಪ್ಪಿಕೊಳ್ಳುವಂತೆ ಮಾಡಿದರೇ ನಾನು ಪ್ರತಿ ವರ್ಷ ನಿನ್ನ ದರ್ಶನಕ್ಕೆ ಬರುತ್ತೀನಿ.
– ಹಾಸನ ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಹಾಸನದಲ್ಲೇ ಇರಬೇಕು.
– ನನ್ನ ಮಗಳ ಮದುವೆ ಮಾಡಿ 6 ತಿಂಗಳಾಯ್ತು, ನನ್ನ ಸೈಟು ಮಾರಿ 20 ಲಕ್ಷ ಖರ್ಚು ಮಾಡಿ ಮದುವೆ ಮಾಡಿದೆ, ಈಗ ಗಂಡನ ಮನೆಯಲ್ಲಿ ಹಿಂಸೆ ಕೊಡುತ್ತಿದ್ದಾರೆ. ಅವಳಿಗೆ ನೆಮ್ಮದಿ ಕೊಡು ತಾಯಿ.
– ಬೀಗರ ಮನೆಗೆ ಹೋದರೆ ನಾಯಿಗಿಂತ ಕಡೆಯಾಗಿ ನಮ್ಮ ಕಾಣುತ್ತಿದ್ದಾರೆ. ಸರಿ ಮಾಡು ತಾಯಿ.
– ನನಗೆ ಬೇಗ ಸೈಟು ಸಿಕ್ಕಿ ಮನೆ ಕಟ್ಟಬೇಕು.
– ನನ್ನ ಗಂಡನಿಗೆ ಒಳ್ಳೆ ಬುದ್ದಿ ಕೊಡವ್ವ, ನನ್ನ ಗಂಡ ನಾನು ಹೇಳಿದ ಹಾಗೇ ಕೇಳಬೇಕು.
– ನಾನು ಮದುವೆಯಾಗಿ 10 ವರ್ಷ ಕಳೆದಿದೆ, ನಮಗೆ ಸಂತಾನ ಫಲ ನೀಡಮ್ಮ. ಇನ್ನು ಒಂದು ವರ್ಷದೊಳಗೆ ಮಗುವಾದರೆ ಪ್ರತಿ ವರ್ಷ ನಿನ್ನ ಸನ್ನಿದಿಗೆ ಬಂದು ಹರಕೆ ತೀರಿಸುತ್ತೇನೆ.
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.