![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Oct 31, 2019, 7:42 PM IST
ಹೊಸದಿಲ್ಲಿ: ಕಳೆದ ಲೋಕಸಭೆ ಚುನಾವಣೆ ವೇಳೆ ವಾಟ್ಸ್‌ಆ್ಯಪ್‌ಗೆ ಕನ್ನ ಕೊರೆದು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ನಡೆಸಿದ್ದ ಚಾಟಿಂಗ್ ಮಾಹಿತಿಯನ್ನು ಕದಿಯಲಾಗಿದೆ ಎಂಬ ವಿಚಾರ ಈಗ ದೊಡ್ಡ ಸುದ್ದಿ ಮಾಡಿದೆ.
ಈ ಸಂಬಂಧ ಕೇಂದ್ರ ಸರಕಾರ ವಾಟ್ಸ್‌ಆ್ಯಪ್‌ಗೆ ನೋಟಿಸ್ ಜಾರಿ ಮಾಡಿದ್ದು, ನ.4ರೊಳಗೆ ಉತ್ತರಿಸುವಂತೆ ಹೇಳಿದೆ.
ಇಸ್ರೇಲ್‌ನ ಸರಕಾರೇತರ ಸರ್ವೇಕ್ಷಣಾ ಸಂಸ್ಥೆಯೊಂದು ಪೆಗಸಸ್ ಹೆಸರಿನ ಸ್ಪೈವೇರ್ ಮೂಲಕ ವಾಟ್ಸ್‌ಆ್ಯಪ್‌ಗೆ ಕನ್ನ ಹಾಕಿದ್ದು, ಅದು ಸುಮಾರು 1400 ಬಳಕೆದಾರರ ಚಾಟಿಂಗ್ ಮಾಹಿತಿಗಳನ್ನು ಕದಿಯಲಾಗಿದೆ, ಇವುಗಳಲ್ಲಿ ಹೆಚ್ಚಿನವು ವೀಡಿಯೋ ಚಾಟಿಂಗ್ ಮಾಹಿತಿಗಳಾಗಿವೆ ಎಂದು ಎಂದು ಸ್ವತಃ ವಾಟ್ಸ್‌ಆ್ಯಪ್ ಕನ್ನಕೊರೆದ ಸಂಗತಿಯನ್ನು ಹೇಳಿತ್ತು.
ಜತೆಗೆ ಇಸ್ರೇಲ್‌ನ ಆ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದ್ದಾಗಿ ಹೇಳಿತ್ತು. ಮಾಹಿತಿ ಕಳವಿಗೆ ಒಳಗಾದವರಲ್ಲಿ ಭಾರತದ ರಾಜಕಾರಣಿಗಳು, ಪತ್ರಕರ್ತರು, ಸರಕಾರದ ಹಿರಿಯ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ 20ದೇಶದ ವ್ಯಕ್ತಿಗಳಿದ್ದಾರೆ. ಸುಮಾರು ಎರಡು ವಾರಗಳ ಕಾಲ ಏಪ್ರಿಲ್ ತಿಂಗಳ ಕೊನೆಯವರೆಗೆ ಮಾಹಿತಿ ಕಳವು ಮಾಡಲಾಗಿತ್ತು.
ಪ್ರಕರಣ ಕುರಿತಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಮಾತನಾಡಿ, ಈ ಬಗ್ಗೆ ವಾಟ್ಸ್‌ಆ್ಯಪ್ ಸ್ಪಷ್ಟನೆ ನೀಡುವಂತೆ ಕೇಳಲಾಗಿದೆ. ಅಲ್ಲದೇ ಕೋಟ್ಯಂತರ ಮಂದಿ ಭಾರತೀಯರ ಮಾಹಿತಿ ರಕ್ಷಣೆಗೆ ಏನು ಮಾಡಲಾಗಿದೆ ಎಂದು ಸ್ಪಷ್ಟೀಕರಣ ಬಯಸಿದ್ದೇವೆ ಎಂದು ಹೇಳಿದ್ದಾರೆ.
ಆದರೆ ಅತ್ತ ಇಸ್ರೇಲ್‌ನ ಕಂಪೆನಿ ಈ ಬಗ್ಗೆ ನಿರಾಕರಣೆ ಮಾಡಿದೆ. ನಮ್ಮ ತಂತ್ರಜ್ಞಾನ ಯಾವುದೇ ಮಾನವಹಕ್ಕು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ವಿರುದ್ಧ ಮಾಡಿದ್ದಲ್ಲ. ಇದು ಪರವಾನಿಗೆ ಹೊಂದಿರುವುದು ಸರಕಾರಿ ಸಂಸ್ಥೆಗಳು ಬಳಸಲು ಮಾತ್ರ ವಿಶೇಷವಾಗಿ ಭಯೋತ್ಪಾದನೆ, ಹಿಂಸೆ ವಿಚಾರಗಳನ್ನು ತಡೆಯುವ ಉದ್ದೇಶವನ್ನಷ್ಟೇ ಹೊಂದಿದೆ ಎಂದು ಹೇಳಿದೆ.
ಇದರೊಂದಿಗೆ ಇಸ್ರೇಲ್ ಕಂಪೆನಿ ವಿರುದ್ಧ ಸುಮಾರು 53 ಲಕ್ಷ ನಷ್ಟ ಪರಿಹಾರವನ್ನು ಕ್ಯಾಲಿಫೋರ್ನಿಯಾ ಕೋರ್ಟ್‌ನಲ್ಲಿ ವಾಟ್ಸ್‌ಆ್ಯಪ್ ಕೇಳಿದೆ. ವಾಟ್ಸ್‌ಆ್ಯಪ್‌ಗೆ 150 ಕೋಟಿ ಮಂದಿ ಗ್ರಾಹಕರಿದ್ದು ಭಾರತದಲ್ಲಿ 4 ಕೋಟಿ ಮಂದಿ ಗ್ರಾಹಕರಿದ್ದಾರೆ.
ಕಾಂಗ್ರೆಸ್ ಟೀಕೆ
ಇದೇ ವೇಳೆ ವಾಟ್ಸ್‌ಆ್ಯಪ್ ಮಾಹಿತಿ ಕಳವು ವಿಚಾರದಲ್ಲಿ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದೆ. ಮೋದಿ ಸರಕಾರ ಮಾಹಿತಿ ಕಳವು ಮಾಡಿದ್ದು ಸಿಕ್ಕಿಬಿದ್ದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಇತ್ತೀಚಿಗೆ ಸರಕಾರ ನಮ್ಮ ಖಾಸಗಿ ಹಕ್ಕುಗಳ ವಿರುದ್ಧ ವಾದ ಮಾಡಿದ್ದು, ಮಾಹಿತಿ ಕದಿವ ವ್ಯವಸ್ಥೆಯನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಅನುಷ್ಠಾನ ಮಾಡಿತ್ತು. ಆದರೆ ಇದಕ್ಕೆ ಸುಪ್ರೀಂ ತಡೆ ನೀಡಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಕೂಡಲೇ ಮಧ್ಯ ಪ್ರವೇಶಿಸಿ ಬಿಜೆಪಿ ಸರಕಾರದ ವಿರುದ್ಧ ನೋಟಿಸ್ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲ ಟ್ವೀಟ್ ಮಾಡಿದ್ದಾರೆ.
ಏನಿದು ಸ್ಪೈವೇರ್
ವಾಟ್ಸ್‌ಆ್ಯಪ್ ಮಾಹಿತಿಯನ್ನು ಕದಿಯಲು ಅಭಿವೃದ್ಧಿ ಪಡಿಸಿದ ವೈರಸ್ ರೀತಿಯದ್ದು. ಇದನ್ನು ಸ್ಪೈವೇರ್ ಎಂದು ಕರೆಯುತ್ತಾರೆ. ಬಳಕೆದಾರ ವೀಡಿಯೋ ಕಾಲ್ ರಿಸೀವ್ ಮಾಡಿದ ಕೂಡಲೇ ಈ ಸ್ಪೈವೇರ್ ಆ್ಯಕ್ಟಿವೇಟ್ ಆಗಿ ಅದು ಮಾಹಿತಿ ಕದಿಯುವಾತನಿಗೆ ಸಂಪರ್ಕ ಏರ್ಪಡಿಸುತ್ತದೆ. ಬಳಕೆದಾರ ಕಾಲ್ ರಿಸೀವ್ ಮಾಡದಿದ್ದರೂ, ಆತನ ಫೋನ್‌ನಲ್ಲಿರುವ ಸಂಪರ್ಕ ಸಂಖ್ಯೆಗಳು, ವಾಟ್ಸ್‌ಆ್ಯಪ್ ಮಾಹಿತಿ, ಕ್ಯಾಲೆಂಡರ್, ಪಾಸ್‌ವರ್ಡ್, ಕಾಂಟ್ಯಾಕ್ಟ್ ಲಿಸ್ಟ್‌ಗಳ ಮಾಹಿತಿಯನ್ನು ಪಡೆಯಲು ನೆರವು ನೀಡುತ್ತದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.