ಸಾಂಪ್ರದಾಯಿಕವಾಗಿ ನಡೆದ ವೀರಮಣಿ ಕಾಳಗ
Team Udayavani, Nov 1, 2019, 3:21 AM IST
ದುರ್ಗಾಪರಮೇಶ್ವರಿ ಮರಾಟಿ ಸಮುದಾಯ ಕಲಾಸಂಘ , ಬಾಳೆತೋಟ, ಅಂಜಾರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ವೀರಮಣಿ ಕಾಳಗ ಯಕ್ಷಗಾನ ಪ್ರಸಂಗ ಸಂಪನ್ನಗೊಂಡಿತು.
ಶ್ರೀರಾಮನ ಅಶ್ವಮೇಧದ ಯಜ್ಞಾಶ್ವವು ಶತ್ರುಘ್ನ ಪುಷ್ಕರ ಬೆಂಗಾವಲಿನಲ್ಲಿ ಜ್ಯೋತಿರ್ಮೆàದಾ ಪುರವನ್ನು ಪ್ರವೇಶಿಸಿದಾಗ ವೀರಮಣಿಯ ಮಕ್ಕಳಾದ ಶುಭಾಂಗ ಮತ್ತು ರುಕಾ¾ಂಗದರಿಂದ ಬಂಧನಕ್ಕೊಳಗುತ್ತದೆ. ಮುಂದೆ ಹರ ಮತ್ತು ಹರಿ ಸಮಾಗಮದೊಂದಿಗೆ ಹರಿಹರರಲ್ಲಿ ಭೇದವಿಲ್ಲ ಎಂಬ ತತ್ವಸಾರದೊಂದಿಗೆ ವೀರಮಣಿ ಕಾಳಗ ಸುಖಾಂತ್ಯವಾಗುತ್ತದೆ.
ಮುಮ್ಮೇಳದಲ್ಲಿ ಜಿಲ್ಲೆಯ ಮರಾಟಿ ಸಮಾಜದ ಕಲಾವಿದರು ಹಲಸಿನ ಹಳ್ಳಿ ನರಸಿಂಹ ಶಾಸಿŒ ರಚಿಸಿದ ವೀರಮಣಿ ಕಾಳಗ ಪ್ರಸಂಗವನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸಿದ್ದಾರೆ. ಶಿಕ್ಷಕ ಹಾಗೂ ಹವ್ಯಾಸಿ ಕಲಾವಿದರಾದ ಸತೀಶ ನಾಯ್ಕ ಬೇಳಿಂಜೆ ಶತ್ರುಘ್ನನಾಗಿ, ರೋಹಿತ್ ನಾಯ್ಕರ ಪುಷ್ಕರ ಪ್ರವೇಶದೊಂದಿಗೆ ಪೀಠಿಕಾ ಪ್ರಸಂಗಕ್ಕೆ ನೆಲೆಗಟ್ಟನ್ನು ಒದಗಿಸಿಕೊಟ್ಟಿತು. ಇಬ್ಬರು ಚುರುಕು ಹೆಜ್ಜೆಯ ನೃತ್ಯ, ಭಾವ, ಭಂಗಿಗಳಿಂದ ಮತ್ತು ಅರ್ಥಗಾರಿಕೆಯಿಂದ ಉತ್ತಮವಾಗಿ ಪಾತ್ರ ನಿರ್ವಹಿಸಿದರು.
ವೀರಮಣಿಯ ಮಕ್ಕಳಾದ ರುಕ್ಮಾಗನಾಗಿ ಶೈಲೇಶ್ ನಾಯ್ಕ ತೀರ್ಥಹಳ್ಳಿ, ಶುಭಾಂಗನಾಗಿ ನಿಶ್ವಲ್ ನಾಯ್ಕ ಇವರ ಸೊಗಸಾಗಿತ್ತು. ಉಡುಪಿ ಯಕ್ಷಗಾನ ಕೇಂದ್ರದ ಸಾಂಪ್ರದಾಯಿಕ ನಡೆ, ನೃತ್ಯ, ಅಭಿನಯ ಮನೋಜ್ಞವಾಗಿ ಮೂಡಿಬಂತು.
ಹಿರಿಯ ವೃತ್ತಿ ಕಲಾವಿದ ಮಹಾಬಲ ನಾಯ್ಕ ಬುಕ್ಕಿಗುಡ್ಡೆ ವೀರಮಣಿ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದರು. ಅಭಿನಯಕ್ಕೆ ತಕ್ಕಂತೆ ಮಾತು, ಹಾವ, ಭಾವ ಪಾತ್ರಕ್ಕೆ ನ್ಯಾಯ ಒದಗಿಸಿದರು. ಹನುಮಂತನ ಪಾತ್ರದಲ್ಲಿ ಶ್ರೀನಿವಾಸ ನಾಯ್ಕ ಹುಂಚ, ಪಾತ್ರೋಚಿತ ನೃತ್ಯ, ಹನುಮಂತ ಮತ್ತು ವೀರಮಣಿ ನಡುವಿನ ಅರ್ಥಗಾರಿಕೆ ಮೊನಚು ನೃತ್ಯದ ಒನಪಿನಿಂದ ಲವಲವಿಕೆ ಮೂಡಿಸಿದರು. ಈಶ್ವರನಾಗಿ ಹಿರಿಯ ಕಲಾವಿದ ಶ್ಯಾಮ ನಾಯ್ಕ ಪೇತ್ರಿ ಇವರ ಕುಣಿತ ಮತ್ತು ಮಾತು, ಹನುಮಂತ ಮತ್ತು ಈಶ್ವರನ ಸಂವಾದ ರಂಜಿಸಿತು. ವೀರಭದ್ರನಾಗಿ ವೈಶಾಖ್ ಸುರತ್ಕಲ್ ಪ್ರವೇಶ ಮತ್ತು ನಡೆಯಿಂದ ಗಮನ ಸೆಳೆದರು. ಹಿಮ್ಮೇಳದಲ್ಲಿ ಕರುಣಾಕರ ಶೆಟ್ಟಿ ಹಾಗೂ ಶ್ರೀನಿವಾಸ ನಾಯ್ಕ ಬುಕ್ಕಿಗುಡ್ಡೆ ಭಾಗವತಿಕೆಯಲ್ಲಿ , ಪ್ರದೀಪ್ ಭಟ್ ಸಗ್ರಿ ಮದ್ದಳೆ ಹಾಗೂ ಕೃಷ್ಣಮೂರ್ತಿ ಭಟ್ ಬಗ್ವಾಡಿ ಚಂಡೆಯಲ್ಲಿ ಸಹಕರಿಸಿದರು.
ರಕ್ಷಿತಾ ವೆಂಕಟೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.