ರಾವ್ ಸಹೋದರಿಯರ ಕಛೇರಿ
Team Udayavani, Nov 1, 2019, 3:31 AM IST
ಮಡ್ಯಾರು ಶ್ರೀ ಪರಾಶಕ್ತಿ ದೇಗುಲ ಸಮುಚ್ಚಯದಲ್ಲಿ ಇತ್ತೀಚೆಗೆ ಕು| ಅನುಶ್ರೀ ರಾವ್ ಮತ್ತು ಕು| ಸ್ವಾತಿ ರಾವ್ ಮಂಗಳಾದೇವಿ ಇವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ರಾವ್ ಸೋದರಿಯರು ದರ್ಬಾರು ವರ್ಣದ ಸುಶ್ರಾವ್ಯವಾದ ಪ್ರಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಮುಂದೆ ಚಕ್ರವಾಕ ರಾಗದ ಸೊಗಸಾದ ಆಲಾಪನೆಯೊಂದಿಗೆ “ಗಜಾನನಯುತಂ’ ಮುತ್ತು ಸ್ವಾಮಿ ದೀಕ್ಷಿತರ ರಚನೆಯನ್ನು ಹಾಡಿ ವಿಘ್ನೇಶ್ವರನನ್ನು ಸ್ತುತಿಸಿದರು. ಹರಿಕೇಸನಲ್ಲೂರು ಮುತ್ತಯ್ಯ ಭಾಗವತ್‌ರವರ ಜನಪ್ರಿಯ ಕೃತಿ “ಹಿಮಗಿರಿ ತನಯೇ’ ತ್ಯಾಗರಾಜರ “ನೀದು ಚರಣಮುಲೆ’ ಮನೋಜ್ಞವಾಗಿ ಪ್ರಸ್ತುತಪಡಿಸಿ ಶೋತೃಗಳನ್ನು ಒಲಿಸಿಕೊಂಡರು.
ಶ್ರೀ ತ್ಯಾಗರಾಜ ವಿರಚಿತ “ಸಾಮಜವರಗಮನ’, “ಸೊಗಸುಗ ಮೃದಂಗ ತಾಳಮು’ ಸೂಕ್ತವಾದ ರಾಗಾಲಾಪನೆ, ಸ್ವರ ಪ್ರಸ್ತಾರಗಳೊಂದಿಗೆ ಮೂಡಿಬಂತು. ಮೈಸೂರು ವಾಸುದೇವಾಚಾರ್ಯರ ಪ್ರಸಿದ್ಧ ರಚನೆ “ಬ್ರೋಚೇವಾರೆವರುವಾ ನಿನ್ನುವಿನ ರಘುವರಾ’, ಪುರಂದರ ದಾಸರ ವೆಂಕಟಾಚನಿಲಯಂ’, ಜಗದೋದ್ಧಾರನ’, ಪ್ರಸ್ತುತಿ ಮನಸೆಳೆಯಿತು.ಡಾ| ಮಂಗಳಪಲ್ಲಿ ಬಾಲಮುರಳಿ ಕೃಷ್ಣ ರಚಿತ ಬೃಂದಾವನಿ ರಾಗದ ತಿಲ್ಲಾನ ಹಾಗೂ ಪಾಂಬಟ್ಟಿ ಸಿದ್ಧರ್ ವಿರಚಿತ ತಮಿಳು ರಚನೆಯೊಂದರ ಕನ್ನಡಾನುವಾದಿತ ಪ್ರಸ್ತುತಿ ಪ್ರಶಂಸೆಗೊಳಪಟ್ಟಿತು. ಶ್ರೀಧರ್ ಆಚಾರ್ಯ ವಯೋಲಿನ್ ಹಾಗೂ ಹರಿಕೃಷ್ಣ ಮೃದಂಗ ವಾದನದ ಮೂಲಕ ಸಹಕರಿಸಿದರು.
ಪಿ.ನೇಮು ಕೊಟ್ಟಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.