ಗಾಂಧಿ ಚಿತ್ರ ಪ್ರದರ್ಶನಕ್ಕೆ ಸಾಹಿತಿ-ಕಲಾವಿದರ ಮೆಚ್ಚುಗೆ
Team Udayavani, Nov 1, 2019, 3:16 PM IST
ಬೀದರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಅವರ ಅಪೂರ್ವ ಛಾಯಾಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ಸಾಹಿತಿಗಳು ಮತ್ತು ಕಲಾವಿದರು ಕೂಡ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದರು. ಹಿರಿಯ ಸಾಹಿತಿ ಎಂ.ಜಿ.ಗಂಗನಪಳ್ಳಿ, ಜಾನಪದ ವಿದ್ವಾಂಸ ಜಗನ್ನಾಥ ಹೆಬ್ಟಾಳೆ, ರಂಗಕರ್ಮಿ ಎಂ.ಎಸ್.ಮನೋಹರ, ಸಾಹಿತಿ ಅತಿವಾಳೆ, ಜಾನಪದ ಕಲಾವಿದ ಸುನೀಲ್ ಕಡ್ಡೆ, ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಲೇಖಕಿ ಪಾರ್ವತಿ ಸೋನಾರೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ|ರಾಜಕುಮಾರ ಹೆಬ್ಟಾಳೆ ಹಾಗೂ ಇತರರು ಛಾಯಾಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ
ವ್ಯಕ್ತಪಡಿಸಿದರು.
ಮಹಾತ್ಮ ಗಾಂಧಿ ಜೀವನ ದರ್ಶನಕ್ಕೆ ಏರ್ಪಡಿಸಿರುವ ಸಾಕ್ಷéಚಿತ್ರ ಪ್ರದರ್ಶನ ಗಾಂಧಿ ಸಂದೇಶ ವಾಹಿನಿಯಾಗಿದೆ. ಅಹಿಂಸೆಯ ಸಂದೇಶ ಜ್ವಲಿಸುವ ಪ್ರಪಂಚಕ್ಕೆ ತೋರ್ಬೆರಳಾಗಿದೆ. ಸರ್ವಧರ್ಮ ಸಾಮರಸ್ಯದಿಂದ ಮಾನವ ಪ್ರೀತಿಗೆ ನೆಲೆ, ಬೆಲೆ. ಎಲ್ಲಾ ಪ್ರಾರ್ಥನೆಗಳ ಸಾರ ಸತ್ಯ. ಸತ್ಯವೇ ದೇವರೆಂದ ಮೇಲೆ ಜಗಳಕ್ಕೆ ಮಾರ್ಗವಿಲ್ಲ. ವಿಶ್ವ ಶಾಂತಿಗೆ, ಗ್ರಾಮ ಜೀವನದ ಪುನರುಜ್ಜೀವನಕ್ಕೆ ಮಹಾತ್ಮ ಗಾಂಧಿ ಸಂದೇಶ ಎಂದೆಂದೂ ಪ್ರಸ್ತುತ. ಹೃದಯ ನ್ಯಾಯಾಲಯಕ್ಕೆ ಮಿಗಿಲಾದದ್ದು ಏನಿದೆ?, ಗಾಂಧಿ ಸಂದೇಶ ಆಂತರಿಕ ಶುದ್ಧಿಗೆ ಮಾರ್ಗ ತೆರೆಯುತ್ತದೆ. ಸ್ವಚ್ಛ ಭಾರತಕ್ಕೂ ಮಹಾತ್ಮ ಗಾಂ ಧಿ ಜೀವನ ಸಂದೇಶ ಪೂರಕವಾಗಿದೆ ಎಂದು ಚಿಂತಕ ಗಂಗನಪಳ್ಳಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧಿ ಜೀವನ ಮತ್ತು ಸಾಧನೆ ಕುರಿತು ಏರ್ಪಡಿಸಿದ ಈ ಛಾಯಾಚಿತ್ರ ಪ್ರದರ್ಶನವು ಇಂದಿನ ಪೀಳಿಗೆಗೆ ಉತ್ತಮ ಸಂದೇಶವಾಗಿದೆ. ಇಂದನ ಯುವಪೀಳಿಗೆ ತಪ್ಪು ಮಾರ್ಗದಲ್ಲಿ ನಡೆಯುತ್ತಿದೆ ಎಂದು ಹಿರಿಯರು ಹೇಳುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಯುವಜನತೆಗೆ ಉತ್ತಮ ಸಂದೇಶಗಳನ್ನು ನೀಡುತ್ತವಲ್ಲದೇ ಪರಿಣಾಮಕಾರಿಯಾಗಿಯೂ ಇರುತ್ತವೆ. ಇಡೀ ಜಗತ್ತಿನ ಕಣ್ಮನ ಸೆಳೆದ ಮಹಾತ್ಮ ಗಾಂಧಿ ಅವರ ಜೀವನ ಚರಿತ್ರೆಯನ್ನು ಎಲ್ಲರೂ ಓದುವುದು ಮತ್ತು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಮಹಾತ್ಮ ಗಾಂಧಿ ಅವರ ಅಹಿಂಸಾ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಇಂದಿನ ಪೀಳಿಗೆಗೆ ಮಹಾತ್ಮ ಗಾಂಧಿ ಅವರ ಸಂದೇಶಗಳನ್ನು ಮುಟ್ಟಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಂತಹ ಕೆಲಸವನ್ನು ವಾರ್ತಾ ಇಲಾಖೆ ಮಾಡುತ್ತಿರುವುದು ಶ್ಲಾಘನೀಯ ಎಂದು ಲೇಖಕಿ ಪಾರ್ವತಿ ಸೋನಾರೆ ತಿಳಿಸಿದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಎನ್‌ಈಕೆಆರ್‌ಟಿಸಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.