ಕನ್ನಡ ಸಾಹಿತ್ಯ ಮುಕುಟಮಣಿಗಳಿಗಿಲ್ಲ ಆಸರೆ
Team Udayavani, Nov 1, 2019, 3:39 PM IST
ಯಳಂದೂರು: ರಾಜ್ಯದಲ್ಲಿ ಅತ್ಯಂತ ಚಿಕ್ಕ ತಾಲೂಕು,ಚಿಕ್ಕಪಟ್ಟಣವಾಗಿ ಗುರುತಿಸಿಕೊಂಡಿರುವ ಯಳಂದೂರು ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಇಲ್ಲಿನ ಷಡಕ್ಷರ ದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ, ಅಗರಂ ರಂಗಯ್ಯ, ನಾಟಕಕಾರ ಸಂಸ ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರನ್ನು ನಾಡಿಗೆ ನೀಡಿದ ಕೀರ್ತಿ ಈತಾಲೂಕಿನದ್ದು. ಇದರೊಂದಿಗೆ ಸೋಲಿಗರ ಜಾನಪದ ಸಾಹಿತ್ಯ, ಪಟ್ಟಣದ ಬಳೇಮಂಟಪ, ದಿವಾನ್ ಪೂರ್ಣಯ್ಯ ವಸ್ತುಸಂಗ್ರಹಾಲಯ ಸೇರಿದಂತೆ ಅನೇಕ ದೇಗುಲಗಳು ಮಠಗಳು ಇಲ್ಲಿನ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಜೈನ ಸಂತಮುನಿಗಳ ನೆಲವೀಡಾಗಿದ್ದ ಯಳಂದೂರು ಹಾಗೂ ತಾಲೂಕಿನಲ್ಲಿ ಇವರ ಇರುವಿಕೆ ಇತ್ತೆಂ ಬುದಕ್ಕೆ ಸಾಕ್ಷಿಯಾಗುವ ಯಾವ ಕೆಲಸಗಳೂ ನಡೆದಿಲ್ಲ.
ಯಳಂದೂರಿನ ಹೆಮ್ಮೆ ಷಡಕ್ಷರ ದೇವ: ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದವರಾದ ಷಡಕ್ಷರ ದೇವ ಯಳಂದೂರಿನಲ್ಲಿ ನೆಲೆಸಿ ಶಬರಶಂಕರ ವಿಳಾಸ, ರಾಜಶೇಖರ ವಿಳಾಸ, ವೃಷಬೇಂದ್ರವಿಜಯ ದಂಥ ಮಹಾನ್ ಗ್ರಂಥಗಳನ್ನು ರಚಿಸಿದ್ದಾರೆ. ಪಟ್ಟ ಣದ ರಾಷ್ಟ್ರೀಯ ಹೆದ್ದಾರಿ 209 ರಲ್ಲಿರುವ ಮಹಾಕವಿ ಷಡಕ್ಷರಿ ಸ್ಮಾರಕ ಪ್ರತಿಷ್ಠಾನ ವನ್ನು ದುಗ್ಗಹಟ್ಟಿ ಪಿ.ವೀರಭದ್ರಪ್ಪ ನಿರ್ಮಿಸಿದ್ದಾರೆ. ಇಲ್ಲಿ ಮಹಾಕವಿ ಷಡಕ್ಷರ ದೇವರ ಗದ್ದುಗೆ ಇದೆ. ಇದರ ಮೂಲಕ ಪುಸ್ತಕ, ಪ್ರಶಸ್ತಿ ಗಳನ್ನು ನೀಡುತ್ತಾ ಬಂದಿದ್ದಾರೆ. ಇದನ್ನು ಹೊರತುಪಡಿಸಿ ಇಂಥ ಕವಿ ಯಾವ ಕುರು ಹುಗಳನ್ನು ತಾಲೂಕಿನಲ್ಲಿ ಕಾಣಲು ಸಾಧ್ಯವಾಗಿಲ್ಲ.
ತತ್ವ ಪದದ ಮುಪ್ಪಿನ ಷಡಕ್ಷರಿ: ತಿರುಕ ನೋರ್ವ ನೂರ ಮುಂದೆ, ಮುರುಕು ಧರ್ಮ ಶಾಲೆ ಯಲ್ಲಿ ಒರಗಿರುತ್ತಲೊಂದುಕನಸು ಕಂಡನೆಂತೆನೆ ಎಂಬ ತತ್ವ ಪದಗಳನ್ನು ತಮ್ಮ ಸುಬೋಧರ ಸಾರ ಕೃತಿಯಲ್ಲಿ ರಚಿಸಿದ ಮುಪ್ಪಿನ ಷಡಕ್ಷರಿ 16ನೇ ಶತಮಾನದಲ್ಲಿ ಜೀವಿಸಿದ್ದರು.ಇವರು ಯಳಂ ದೂರು ಪಟ್ಟಣದ ಯರಗಂಬಳ್ಳಿಯಲ್ಲಿ ಇದ್ದರು ಎಂಬು ದಕ್ಕೆ ಇನ್ನೂ ಕೂಡ ಇಲ್ಲಿ ಮಠವನ್ನು ಕಾಣಬಹುದು.
ಸ್ತ್ರೀ ಮಹತ್ವ ಸಾರಿದ ಸಂಚಿ ಹೊನ್ನಮ್ಮ:17ನೇ ಶತ ಮಾನದಲ್ಲಿ ಚಿಕ್ಕದೇವರಾಜ ಒಡೆಯರ ಆಸ್ಥಾನದಲ್ಲಿ ಸಂಚಿಯ ಊಳಿಗದಲ್ಲಿದ್ದ ಹೊನ್ನಮ್ಮ ಸಂಚಿಹೊನ್ನ ಮ್ಮಳೆಂದೇ ಖ್ಯಾತಿ ಪಡೆದಿ ದ್ದಾರೆ. ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ,ಪೆಣ್ಣಲ್ಲವೆ ಪೊರೆದವಳು, ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು, ಕಣ್ಣು ಕಾಣದ ಗಾವಿಲರು ಎಂದು ಸ್ತ್ರೀ ಸಮಾನತೆ ಬಗ್ಗೆ ಅಕ್ಕಮಹಾದೇವಿಯ ನಂತರ ಧ್ವನಿ ಎತ್ತಿದ ಏಕೈಕ ನಾರಿ ಮಣಿಯಾಗಿದ್ದಾಳೆ. ಇವರೆಲ್ಲರೂ ನಡುಗನ್ನಡದಲ್ಲಿ ಕನ್ನಡ ಸಾರಸ್ವತ ಲೋಕ ವನ್ನು ಶ್ರೀಮಂತಗೊಳಿಸಿದ ಕವಿಗಳಾಗಿದ್ದಾರೆ.
ಇದರೊಂದಿಗೆಗೆ ಸಾಧ್ವಿ ಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸಿದ ಅಗಂ ರಂಗಯ್ಯ ತಾಲೂಕಿನ ಅಗರ ಗ್ರಾಮದವರಾಗಿದ್ದಾರೆ. ಹೆಮ್ಮೆಯ ನಾಟಕಕಾರ ಸಂಸ: ಕನ್ನಡ ನಾಡಿನ ಶೇಷ್ಠ ನಾಟಕಕಾರರಲ್ಲಿ ಒಬ್ಬರಾಗಿದ್ದ ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್ ಅವರು ಸಂಸ ರೆಂತಲೇ ಖ್ಯಾತಿ ಪಡೆದ ಮಹಾನ್ ನಾಟಕಕಾರ ರಾಗಿದ್ದು ಕನ್ನಡಭಾಷೆಗೆ 23 ನಾಟಕಗಳನ್ನು ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಆದರೆ ನಮಗೆ ಉಪಲಬ್ಧವಿರುವುದು
ಕೇವಲ ಬಿರುದಂತೆಂಬರ ಗಂಡ, ಸುಗುಣ ಗಂಭೀರ, ಬೆಟ್ಟದ ಅರಸು, ವಿಗಡ ವಿಕ್ರಮರಾಯ, ಮಂತ್ರಶಕ್ತಿ,ವಿಜಯನಾರಸಿಂಹ ಎಂಬ 6 ನಾಟಕಗಳು ಮಾತ್ರ. ಇಂವರ ಬಗ್ಗೆ ಪಟ್ಟಣದಲ್ಲಿ ಅಥವಾ ತಾಲೂಕಿನ ಯಾವ ಗ್ರಾಮಗಳಲ್ಲೂ ಇವರ ಇರುವಿಕೆಯನ್ನು ಗುರುತಿಸುವ ಒಂದೇ ಒಂದು ನೆಲೆ ಇಲ್ಲ. ಇತಿಹಾಸ ಹೇಳುವಂತೆ ಶೃಂಗಾರ ಪ್ರಧಾನ ಕಾವ್ಯವಾಗಿದ್ದ ನೇಮಿ ಚಂದ್ರನ ಲೀಲಾವತಿ ಪ್ರಬಂಧ ಗ್ರಂಥವನ್ನು ಯಳಂ ದೂರಲ್ಲಿ ಆನೆಯ ಮೇಲಿಟ್ಟು, ಇವರ ಶೃಂಗಾರ ರಸವು ಸೋರಿ ಹೋಗದಂತೆ ಆನೆಯ ಹೊಟ್ಟೆಯ ತಳಭಾಗದಲ್ಲಿ ತೊಟ್ಟಿಲು ಕಟ್ಟಿದ್ದರು ಇಷ್ಟು ಸಾಹಿತ್ಯ ಕಾಳಜಿ ಇಲ್ಲಿನ ಜನರಲ್ಲಿತ್ತು ಎನ್ನುತ್ತದೆ ಐತಿಹ್ಯ.
-ಫೈರೋಜ್‌ಖಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.