ಶಾಲಾ ಕಟ್ಟಡ ಶಿಥಿಲ: ತೆರವಿಗೆ ಮನವಿ
Team Udayavani, Nov 1, 2019, 4:53 PM IST
ಮಾಗಡಿ: ತಾಲೂಕಿನ ಗವಿನಾಗ ಮಂಗಲದ ಸರ್ಕಾರಿ ಶಾಲೆ ಒಂದು ಭಾಗ ಕುಸಿದಿದ್ದು ಕಟ್ಟಡ ತೆರವು ಮಾಡದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಓದುವವಿದ್ಯಾರ್ಥಿಗಳು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಶಿಥಿಲವಾಗಿರುವ ಕಟ್ಟಡದಲ್ಲಿ ಈಗವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿಲ್ಲ ಆದರೆ ಶಿಥಿಲವಾದ ಕಟ್ಟಡದ ಹತ್ತಿರವೇ ಓಡಾಡಬೇಕಾಗಿದ್ದು ಈಗ ಮಳೆಗಾಲ ಕೂಡ ಹೆಚ್ಚಾಗಿದ್ದು, ಒಂದು ವೇಳೆ ವಿದ್ಯಾರ್ಥಿಗಳು ಇರುವ ಸಮಯದಲ್ಲಿ ಕಟ್ಟಡವೇನಾದರೂ ಕುಸಿದು ಬಿದ್ದರೆ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಈ ಬಗ್ಗೆ ಬಿಇಒ ರವರಿಗೆ ಮನ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಶಿಥಿಲವಾಗಿರುವಕಟ್ಟಡವನ್ನು ನೆಲಸಮಗೊಳಿಸುವಂತೆ
ಎಷ್ಟೇ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ. ಮಕ್ಕಳ ಪ್ರಾಣದ ಜತೆ ಅಧಿಕಾರಿಗಳು ಆಟವಾಡುತ್ತಿದ್ದು, ಪ್ರಾಣ ಹಾನಿಯಾಗುವ ಮೊದಲು ಶಿಥಿಲ ಕಟ್ಟಡವನ್ನು ನೆಲಸಮಗೊಳಿಸಬೇಕು ಎಂದು ಎಸ್ ಡಿಎಂಸಿ ಉಪಾಧ್ಯಕ್ಷೆ ಲಕ್ಷ್ಮಿ ನರಸಿಂಹಯ್ಯ ಗ್ರಾಪಂ ಸದಸ್ಯೆ ಪುಟ್ಟಲಕ್ಷ್ಮಮ್ಮ, ಶಿವಣ್ಣ, ಗ್ರಾಮಸ್ಥರಾದ ದೊಡ್ಡಸಿದ್ದಯ್ಯ, ಹೇಮಂತ್ ಕುಮಾರ್ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.