ದಿಲ್ಲಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ; ಯಾರಿಗೆಲ್ಲಾ ಕಾದಿದೆ ಅಪಾಯ?
Team Udayavani, Nov 1, 2019, 6:24 PM IST
ಹೊಸದಿಲ್ಲಿ: ರಾಜಧಾನಿ ಹೊಸದಿಲ್ಲಿಯಲ್ಲಿ ವಾಯುಮಾಲಿನ್ಯ ಅಪಾಯದ ಮಟ್ಟ ಕಳೆದ ಒಂದು ವಾರದಿಂದ ಏರಿಕೆಯಾಗುತ್ತಾ ಬಂದಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ಇದರ ಪ್ರಮಾಣ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ವಾಯು ನಿಯಂತ್ರಣ ಮಂಡಳಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಇದರನ್ವಯ ನ. 5ರ ವರೆಗೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಯಾವುದೇ ಕಟ್ಟಡ ನಿರ್ಮಾಣ ಕಾರ್ಯ, ಇತರ ಕಾಮಗಾರಿಗಳನ್ನು ಈ ಅವಧಿಯಲ್ಲಿ ನಡೆಸುವಂತಿಲ್ಲ ಎಂದು ಸ್ಪಷ್ಟವಾದ ಸೂಚನೆ ನೀಡಿದೆ.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಕೂಡ ಶಾಲಾ ಮಕ್ಕಳು ಮತ್ತು ನಿವಾಸಿಗಳಿಗೆ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ರಾಜಧಾನಿಯಲ್ಲಿ ನಿರ್ಮಾಣವಾಗಿರುವ ಕಳಪೆ ಗಾಳಿ ಬೆಳೆಯುತ್ತಿರುವ ಮಕ್ಕಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಸದ್ಯದ ಪರಿಸ್ಥಿತಿ ದಿಲ್ಲಿಯಲ್ಲಿ ಹೀಗೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ಉಸಿರಾಡುವುದಕ್ಕೂ ಕಷ್ಟವಾಗಲಿದೆ. ಈಗಾಗಲೇ ದೀಪಾವಳಿ ಆಚರಿಸಿದ ನಗರದಲ್ಲಿ ಮಾಲಿನ್ಯ ಮಟ್ಟ ಹೆಚ್ಚಾಗಿದೆ. ವಾಹನಗಳ ಹೊಗೆ, ಧೂಳಿನ ಜತೆ ಪಟಾಕಿಗಳಿಂದ ಹೊರ ಬರುವ ಹೊಗೆಯೂ ರಾಜಧಾನಿಯನ್ನು ಮತ್ತಷ್ಟು ಕ್ಷೀಣಿಸಿದೆ.
ಈ ನಿಟ್ಟಿನಲ್ಲಿ ಪಟಾಕಿ ಸಿಡಿಸುವುದು ಮತ್ತು ಮಾರಾಟ ಮಾಡುವುದನ್ನು ದಿಲ್ಲಿ ಸಂಪೂರ್ಣ ನಿಷೇಧಿಸಿದೆ. ದಿಲ್ಲಿಯಲ್ಲಿ ಈ ಹಿಂದೆಯೂ ನಿರ್ಮಾಣ ಕಾರ್ಯಗಳಿಗೆ ಕಡಿವಾಣ ಹಾಕಲಾಗಿತ್ತು. ಸಂಜೆ 6ರಿಂದ ಬೆಳಗ್ಗೆ 10ರ ವರೆಗೆ ಇದು ಅನ್ವಯಿಸುತ್ತಿತ್ತು. ಆದರೆ ಈ ತಿಂಗಳಿನಿಂದ ಯಾವುದೇ ನಿರ್ಮಾಣ ಕಾರ್ಯ ನಡೆಸದಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಯಾಕೆ ಇದು ಗಂಭೀರ ಸಮಸ್ಯೆ?
ವಾಯು ಗುಣಮಟ್ಟ ಸರಿ ಇಲ್ಲದೇ ಹೋದರೆ ಯಾವುದೇ ಜೀವಿಯು ಆರೋಗ್ಯವಾಗಿರಲು ಸಾಧ್ಯವಿಲ್ಲ. ಕಲುಷಿತ ಮತ್ತು ವಿಷಯುಕ್ತವಾಗಿರುವ ಆಮ್ಲಜನಕಗಳು ನಮ್ಮ ಶ್ವಾಸಕೋಶಗಳಿಗೆ ಸೇರಿಕೊಂಡರೆ ನಮ್ಮ ಆರೋಗ್ಯವನ್ನು ನಾಶ ಮಾಡಲಿದೆ.
ಗರ್ಭಿಣಿಯರಿಗೆ ಏನು ಸಮಸ್ಯೆ?
ಗರ್ಭಿಣಿರು ಕಲುಷಿತ ಗಾಳಿಯನ್ನು ಸೇವಿಸಿದರೆ ಹುಟ್ಟುವ ಮಕ್ಕಳ ಮೇಲೆ ಅದು ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಹುಟ್ಟುವ ಮಗು ತನ್ನ ತೂಕವನ್ನು ಕಳೆದುಕೊಳ್ಳಲಿದ್ದು, ಅಪೌಷ್ಠಿಕ ಮಗು ಜನಿಸುವ ಅಪಾಯವಿರುತ್ತದೆ. ಇನ್ನು ಇಷ್ಟು ಮಾತ್ರವಲ್ಲದೇ ಅವಧಿಪೂರ್ವ ಹೆರಿಗೆ ಆಗುವ ಸಾಧ್ಯತೆಗಳೂ ಹೆಚ್ಚಾಗಿರುತ್ತದೆ. ಹೃದಯ, ನಾಳಗಳು, ಕೈ ಕಾಲುಗಳು ಸರಿಯಾಗಿ ಅಭಿವೃದ್ಧಿ ಹೊಂದಲು ಅನನುಕೂಲವಾಗಬಹುದು. ಇದರಿಂದ ಜನಿಸುವ ಮಗು ವಿಕಲತೆಯನ್ನು ಹೊಂದುವ ಅಪಾಯ ಇದೆ.
ನವಜಾತ ಶಿಶುಗಳಿಗೆ ಯಾಕೆ ಅಪಾಯ?
ನವಜಾಶ ಶಿಶುಗಳಿಗೂ ಈ ವಾಯು ಅಪಾಯಕಾರಿಗಾಗಿದೆ. ಬೆಳೆಯುತ್ತಿರುವ ಪುಟ್ಟ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶ್ವಾಸಕೋಶಗಳು ಸರಿಯಾಗಿ ಕೆಲಸ ನಿರ್ವಹಿಸದೇ ಆನಾರೋಗ್ಯಕ್ಕೊಳಗಾಗುವ ಸಾಧ್ಯತೆಗಳಿವೆ. ಕಣ್ಣುಗಳಿಗೆ ವಿಷಗಾಳಿ ಬಡಿದು ಕಣ್ಣಿನ ಆರೋಗ್ಯ ಕೆಡಲಿದ್ದು, ಕೆಂಪು ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಲಿದೆ. ಇನ್ನು ಕಿವಿಗಳು ತನ್ನ ಶ್ರವಣ ಶಕ್ತಿಯನ್ನು ಕಳೆದುಕೊಳ್ಳುವ ಅಪಾಯ ಇದೆ.
ಹದಿ ಹರೆಯದವರಿಗೆ
ಹದಿ ಹರೆಯದರಲ್ಲಿ ಮುಖ್ಯವಾಗಿ ಕಣ್ಣುಗಳು ತನ್ನ ಶಕ್ತಿಯನ್ನು ಕಳೆದುಕೊಳ್ಳುವ ಅಪಾದ ಇದೆ. ನೀರು ಸೋರುತ್ತಿರುವ ಕಣ್ಣುಗಳು, ಕೆಂಗಣ್ಣು ಮೊದಲಾದ ಸಮಸ್ಯೆಗಳು ಕಂಡುಬರಬಹುದು. ಶ್ವಾಸಕೋಶದ ಸಮಸ್ಯೆ, ಗಂಟಲಲ್ಲಿ ನೋವು, ಗಂಟಲಿನಲ್ಲಿ ಕಿರಿಕಿರಿ ಕಂಡುಬರುವ ಅಪಾಯ ಇದೆ. ಒಟ್ಟಿನಲ್ಲಿ ದೆಹಲಿ ನಿವಾಸಿಗಳನ್ನು ಬಿಟ್ಟೂ ಬಿಡದಂತೆ ಕಾಡುತ್ತಿರುವ ಈ ವಾಯುಮಾಲಿನ್ಯ ಮುಂಬರುವ ದಿನಗಳಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವುದರಲ್ಲಿ ಸಂಶಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.