ಆಕರ್ಷಕ ಪಥಸಂಚಲನ, ಸಾಂಸ್ಕೃತಿಕ ವೈಭವ
ಆಡಳಿತ ಣ ದ.ಕ. ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ
Team Udayavani, Nov 2, 2019, 3:35 AM IST
ಮಹಾನಗರ: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಗೌರವ ರಕ್ಷೆ ಸ್ವೀಕರಿಸಿದರು.
ಮಹಾನಗರ: ದ.ಕ. ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ನಗರದ ನೆಹರೂ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು.
ಮಂಗಳೂರು ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ನೀತಿಸಂಹಿತೆ ಜಾರಿಯಾಗಿರುವ ಕಾರಣದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಜತೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಭಾಷಣದಲ್ಲಿಯೂ ಸರಕಾರದ ಸಾಧನೆ-ಯೋಜನೆ, ಜಿಲ್ಲೆಯ ಅಭಿವೃದ್ಧಿ ಕಾಮಗಾರಿ ಸಂಬಂಧಿತ ಯಾವುದೇ ವಿಚಾರವನ್ನು ಉಲ್ಲೇಖೀಸಲಿಲ್ಲ.
ಎರಡು ದಿನಗಳಿಂದ ನಗರದಲ್ಲಿ ಭಾರೀ ಮಳೆ ಆಗುತ್ತಿದ್ದ ಕಾರಣದಿಂದ ನೆಹರೂ ಮೈದಾನದ ನಾಲ್ಕೂ ಸುತ್ತ ಶೀಟ್ ಹಾಕಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಮಾತ್ರ ಮಳೆ ಬಾರದೆ ಕಾರ್ಯಕ್ರಮ ಸಾಂಗವಾಗಿ ನಡೆಯಿತು. ಬೆಳಗ್ಗೆ 9.05ಕ್ಕೆ ನೆಹರೂ ಮೈದಾನದಲ್ಲಿ ರಾಜ್ಯದ ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಮತ್ತು ಮುಜರಾಯಿ ಖಾತೆಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದರು.
ಗಮನಸೆಳೆದ ಟ್ಯಾಬ್ಲೋ
ರಾಜ್ಯೋತ್ಸವ ಹಿನ್ನೆಲೆಯಲ್ಲಿ ಜ್ಯೋತಿ ವೃತ್ತದಿಂದ ನೆಹರೂ ಮೈದಾನದ ವರೆಗೆ ಮೆರವಣಿಗೆ ನಡೆಯಿತು. ಮಲೇರಿಯಾ, ಡೆಂಗ್ಯೂ, ಮಂಗನ ಕಾಯಿಲೆ ನಿಯಂತ್ರಣ, ತಂಬಾಕು ನಿಯಂತ್ರಣದ ಬಗ್ಗೆ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಟ್ಯಾಬ್ಲೋ, ದ.ಕ. ಜಾನಪದ ಕಲೆಗಳ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ಟ್ಯಾಬ್ಲೋ, ಕರ್ನಾಟಕ ಕಲಾ ವೈಭವ ಸಾರುವ ಸಾರ್ವಜನಿಕ ಶಿಕ್ಷಣ ಇಲಾಖೆ ಟ್ಯಾಬ್ಲೋ, ಅಡಿಕೆಯಿಂದ ಶೃಂಗಾರಗೊಂಡ ಭುವನೇಶ್ವರಿಯ ಮೂರ್ತಿ ಇರುವ ತೋಟಗಾರಿಕಾ ಇಲಾಖೆಯ ಟ್ಯಾಬ್ಲೋ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೆರವಣಿಗೆ ತಂಡ, ತುಳು ಸಾಹಿತ್ಯ ಅಕಾಡೆಮಿಯ ಹುಲಿ ವೇಷ ಮೆರವಣಿಗೆ ತಂಡ, ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಇಲಾಖೆಯ ಟ್ಯಾಬ್ಲೋ, ವನ್ಯಜೀವಿಗಳನ್ನು ಸಂರಕ್ಷಿಸುವ ಅರಣ್ಯ ಇಲಾಖೆಯ ಟ್ಯಾಬ್ಲೋ, ಹಿಂದೂ ಧಾರ್ಮಿಕ ದತ್ತಿ ಮತ್ತು ಉಂಬಳಿ ಇಲಾಖೆಯ ಮೆರವಣಿಗೆ ತಂಡ, ಸ್ವತ್ಛತೆಯನ್ನು ಸಾರುವ ನಗರಾಭಿವೃದ್ಧಿ ಇಲಾಖೆಯ ಟ್ಯಾಬ್ಲೋ, ಮೂಡಾ ನೇತೃತ್ವದ ಭುವನೇಶ್ವರಿ ಟ್ಯಾಬ್ಲೋ ಮೆರವಣಿಗೆಯಲ್ಲಿ ಜನರ ಗಮನಸೆಳೆಯಿತು.
ಮೈದಾನದಲ್ಲಿ ಸಾಂಸ್ಕೃತಿಕ ವೈಭವ
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಕನ್ನಡ ನಾಡು ನುಡಿಯ ಅಸ್ಮಿತೆಗೆ ಸಂಬಂಧಿಸಿದ ಕಾರ್ಯಕ್ರಮ ಗಮನಸೆಳೆಯಿತು. ಡೊಂಗರಕೇರಿಯ ಕೆನರಾ ಆಂಗ್ಲಮಾಧ್ಯಮ ಶಾಲೆ, ಉರ್ವ ಸೈಂಟ್ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ, ಉರ್ವ ಪೊಂಪೈ ಪ್ರೌಢಶಾಲೆ, ಕುಂಜತ್ತಬೈಲ್‌ನ ನೊಬಲ್ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಯಿತು.
ಮನಸೆಳೆದ ಪುಟಾಣಿಗಳ ಹುಲಿವೇಷ
ಕುಂಜತ್ತಬೈಲ್‌ನ ನೊಬಲ್ ಆಂ.ಮಾ. ಶಾಲೆಯ ಪುಟಾಣಿಗಳ ನೃತ್ಯದಲ್ಲಿ ಪುಟಾಣಿಗಳ ಹುಲಿವೇಷ ಕುಣಿತ ಎಲ್ಲರ ಗಮನಸೆಳೆಯಿತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಜಿಲ್ಲಾಡಳಿತದ ಅಧಿಕಾರಿಗಳು ಪುಟಾಣಿಗಳನ್ನು ಬೆನ್ನುತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿ, ವಿಶೇಷ ನಗದು ಬಹುಮಾನ ನೀಡಿದರು.
ಮನಸೆಳೆದ ಪಥಸಂಚಲನ
ನೆಹರೂ ಮೈದಾನದಲ್ಲಿ ಆಕರ್ಷಕ ಕವಾಯತಿ ನಡೆಯಿತು. ವಿಟuಲ್ ಕೆ. ಶಿಂಧೆ ದಂಡನಾಯಕರಾಗಿದ್ದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ 7ನೇ ಬೆಟಾಲಿಯನ್, ಸಿಎಆರ್ ತುಕಡಿ, ಮಂಗಳೂರು ನಗರ ಮಹಿಳಾ ಪೊಲೀಸ್ ತುಕುಡಿ, ಗೃಹರಕ್ಷಕ ದಳ, ಪೊಲೀಸ್ ಬ್ಯಾಂಡ್ ಡಿ.ಎ.ಆರ್. ಮಂಗಳೂರು, ಕೆ.ಎಸ್‌ಆರ್.ಪಿ ಪೊಲೀಸ್ ಬ್ಯಾಂಡ್, ಕರ್ನಾಟಕ ಅಗ್ನಿಶಾಮಕದಳ ಮಂಗಳೂರು ಘಟಕ, ಎನ್.ಸಿ.ಸಿ. ಸೀನಿಯರ್, ಆರ್‌ಎಸ್‌ಪಿ ಹುಡುಗಿಯರು, ಮೂಡುಶೆಡ್ಡೆ ಸರಕಾರಿ ಪ್ರೌಢಶಾಲೆಯ ಭಾರತ್ ಸೇವಾದಳ, ಆರ್‌ಎಸ್‌ಪಿ ಹುಡುಗರ ತಂಡ, ಎನ್‌ಸಿಸಿ ಏರ್‌ವಿಂಗ್ ಜ್ಯೂನಿಯರ್, ಬಲ್ಮಠ ಮಹಿಳಾ ಪಿಯು ಕಾಲೇಜಿನ ಭಾರತ್ ಸೇವಾದಳ ಸೀನಿಯರ್ ತಂಡ ಭಾಗವಹಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.