ಆಸೀಸ್ ಜೋಶ್; ಲಂಕೆಗೆ ವೈಟ್‌ವಾಶ್
Team Udayavani, Nov 2, 2019, 12:24 AM IST
ಮೆಲ್ಬರ್ನ್: ಇತ್ತೀಚೆಗಷ್ಟೇ ಪಾಕಿಸ್ಥಾನಕ್ಕೆ ತೆರಳಿ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಂಡು ಬಂದ ಶ್ರೀಲಂಕಾ, ಈಗ ಆಸ್ಟ್ರೇಲಿಯದಲ್ಲಿ ತಾನೇ ಈ ಅವಮಾನಕ್ಕೆ ಸಿಲುಕಿದೆ. ಮೆಲ್ಬರ್ನ್ನಲ್ಲಿ ಶುಕ್ರವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದ ಆಸೀಸ್, ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ 6 ವಿಕೆಟಿಗೆ 142 ರನ್ನುಗಳ ಸಾಧಾರಣ ಮೊತ್ತ ಪೇರಿಸಿದರೆ, ಆಸ್ಟ್ರೇಲಿಯ 17.4 ಓವರ್‌ಗಳಲ್ಲಿ 3 ವಿಕೆಟಿಗೆ 145 ರನ್ ಬಾರಿಸಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿತು. ಮೊದಲ ಪಂದ್ಯವನ್ನು 134 ರನ್ನುಗಳಿಂದ ಗೆದ್ದ ಕಾಂಗರೂ ಪಡೆ, ಬಳಿಕ 9 ವಿಕೆಟ್‌ಗಳ ಜಯ ಸಾಧಿಸಿತ್ತು.
ಎಡಗೈ ಆರಂಭಕಾರ ವಾರ್ನರ್ ಅಮೋಘ ಫಾರ್ಮ್ ಮುಂದುವರಿಸಿ 50 ಎಸೆತಗಳಿಂದ ಅಜೇಯ 57 ರನ್ ಬಾರಿಸಿದರು (4 ಬೌಂಡರಿ, 1 ಸಿಕ್ಸರ್). ಹಿಂದಿನೆರಡು ಪಂದ್ಯಗಳಲ್ಲಿ ಕ್ರಮವಾಗಿ ಅಜೇಯ 100 ಹಾಗೂ ಅಜೇಯ 60 ರನ್ ಬಾರಿಸಿದ ಸಾಧನೆ ವಾರ್ನರ್ ಅವರದಾಗಿತ್ತು. ಸತತ ಮೂರೂ ಪಂದ್ಯ ಗಳಲ್ಲಿ ಔಟಾಗದೆ ಉಳಿದ ಅವರು ಮೂರರಲ್ಲೂ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು. ಜತೆಗೆ ಸರಣಿಶ್ರೇಷ್ಠ ಗೌರವಕ್ಕೂ ಭಾಜನರಾದರು.
ವಾರ್ನರ್ ಜತೆಗೆ ಆರಂಭಿಕನಾಗಿ ಇಳಿದ ನಾಯಕ ಫಿಂಚ್ ಕೂಡ ಅಬ್ಬರದ ಆಟವಾಡಿದರು. ಅವರ ಗಳಿಕೆ 25 ಎಸೆತಗಳಿಂದ 37 ರನ್ (1 ಬೌಂಡರಿ, 3 ಸಿಕ್ಸರ್). ಇವರಿಬ್ಬರಿಂದ ಮೊದಲ ವಿಕೆಟಿಗೆ 8.5 ಓವರ್‌ಗಳಿಂದ 69 ರನ್ ಹರಿದು ಬಂತು. ಸ್ಟೀವನ್ ಸ್ಮಿತ್ (13), ಬೆನ್ ಮೆಕ್‌ಡರ್ಮಟ್ (5) ವಿಕೆಟ್ ಬೇಗನೆ ಉರುಳಿತು.
ಕುಸಲ್ ಪೆರೆರ ಹೋರಾಟ
ಶ್ರೀಲಂಕಾ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಏಕೈಕ ಆಟಗಾರ ಕುಸಲ್ ಪೆರೆರ. ಮೊದಲ ಓವರಿನಲ್ಲೇ ನಿರೋಷನ್ ಡಿಕ್ವೆಲ್ಲ ವಿಕೆಟ್ ಉರುಳಿದ ಬಳಿಕ ಕ್ರೀಸ್ ಇಳಿದ ಪೆರೆರ 57 ರನ್ನುಗಳ ಕೊಡುಗೆ ಸಲ್ಲಿಸಿದರು (45 ಎಸೆತ, 4 ಬೌಂಡರಿ, 1 ಸಿಕ್ಸರ್). ಸ್ಟಾರ್ಕ್, ರಿಚರ್ಡ್‌ಸನ್ ಮತ್ತು ಕಮಿನ್ಸ್ ತಲಾ 2 ವಿಕೆಟ್ ಕಿತ್ತು ಲಂಕೆಗೆ ಕಡಿವಾಣ ಹಾಕಿದರು.
ಸ್ಕೋರ್ ಪಟ್ಟಿ
ಶ್ರೀಲಂಕಾ
ಮೆಂಡಿಸ್ ಸಿ ಮೆಕ್‌ಡರ್ಮಟ್ ಬಿ ರಿಚರ್ಡ್‌ಸನ್ 13
ನಿರೋಷನ್ ಡಿಕ್ವೆಲ್ಲ ಸಿ ಮೆಕ್‌ಡರ್ಮಟ್ ಬಿ ಸ್ಟಾರ್ಕ್ 0
ಕುಸಲ್ ಪೆರೆರ ಸಿ ಟರ್ನರ್ ಬಿ ಕಮಿನ್ಸ್ 57
ಫೆರ್ನಾಂಡೊ ಸಿ ಮೆಕ್‌ಡರ್ಮಟ್ ಬಿ ಕಮಿನ್ಸ್ 20
ಒಶಾದ ಫೆರ್ನಾಂಡೊ ಸಿ ಕ್ಯಾರಿ ಬಿ ರಿಚರ್ಡ್‌ಸನ್ 6
ಶೇಹಾನ್ ಜಯಸೂರ್ಯ ಬಿ ಸ್ಟಾರ್ಕ್ 12
ಭನುಕ ರಾಜಪಕ್ಷ ಔಟಾಗದೆ 17
ಲಸಿತ ಮಾಲಿಂಗ ಔಟಾಗದೆ 8
ಇತರ 9
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 142
ವಿಕೆಟ್ ಪತನ: 1-3, 2-33, 3-76, 4-99, 5-110, 6-132.
ಬೌಲಿಂಗ್:
ಮಿಚೆಲ್ ಸ್ಟಾರ್ಕ್ 4-0-32-2
ಕೇನ್ ರಿಚರ್ಡ್‌ಸನ್ 4-0-25-2
ಪ್ಯಾಟ್ ಕಮಿನ್ಸ್ 4-0-23-2
ಆ್ಯಶrನ್ ಅಗರ್ 4-0-24-0
ಆ್ಯಡಂ ಝಂಪ 4-0-30-0
ಆಸ್ಟ್ರೇಲಿಯ
ಆರನ್ ಫಿಂಚ್ ಸಿ ಜಯಸೂರ್ಯ ಬಿ ಕುಮಾರ 37
ಡೇವಿಡ್ ವಾರ್ನರ್ ಔಟಾಗದೆ 57
ಸ್ಟೀವನ್ ಸ್ಮಿತ್ ಸಿ ಸಂದಕನ್ ಬಿ ಪ್ರದೀಪ್ 13
ಮೆಕ್‌ಡರ್ಮಟ್ ಎಲ್‌ಬಿಡಬ್ಲ್ಯು ಮಾಲಿಂಗ 5
ಆ್ಯಶrನ್ ಟರ್ನರ್ ಔಟಾಗದೆ 22
ಇತರ 11
ಒಟ್ಟು (17.4 ಓವರ್‌ಗಳಲ್ಲಿ 3 ವಿಕೆಟಿಗೆ) 145
ವಿಕೆಟ್ ಪತನ: 1-69, 2-85, 3-99.
ಬೌಲಿಂಗ್:
ಲಸಿತ ಮಾಲಿಂಗ 4-0-22-1
ಲಹಿರು ಕುಮಾರ 4-0-49-1
ನುವಾನ್ ಪ್ರದೀಪ್ 3.4-0-20-1
ಶೇಹಾನ್ ಜಯಸೂರ್ಯ 2-0-24-0
ಲಕ್ಷಣ ಸಂದಕನ್ 4-0-25-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.