ಸ್ಥಳೀಯ ಮಾರುಕಟ್ಟೆಗೆ ಆರ್‌ಸಿಇಪಿ ಪೆಟ್ಟು?

ಭಾರತಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚುವ ಆತಂಕ

Team Udayavani, Nov 2, 2019, 5:32 AM IST

nov-41

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಎಂಬ ಹೊಸ ವ್ಯಾಪಾರ ಒಪ್ಪಂದವೊಂದು ದೇಶಕ್ಕೆ ಪರಿಚಯವಾಗಲಿದೆ. ಹಲವು ದೇಶಗಳನ್ನು ಒಳಗೊಂಡ ಈ ಸಹಭಾಗಿತ್ವದ ವ್ಯಾಪಾರದಲ್ಲಿ ಭಾರತ ಪಾಲುದಾರ ರಾಷ್ಟ್ರವಾಗುವುದು ಬಹುತೇಕ ಖಚಿತವಾಗಿದೆ. ಈ ವ್ಯಾಪಾರ ಕ್ರಮದಲ್ಲಿ ಹಲವು ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳು ಚರ್ಚೆಯಾಗುತ್ತಿವೆ. ಈ ಒಪ್ಪಂದಕ್ಕೆ ಭಾರತ ಸಹಿ ಹಾಕಿದ್ದೇ ಆದರೆ ಸಣ್ಣಮಟ್ಟದ ಉದ್ದಿಮೆಗಳು, ವ್ಯಾಪಾರಿಗಳು ಮತ್ತು ರೈತರ ಮೇಲೆ ವ್ಯತಿರಿಕ್ತ ಪರಿಣಾಮದ ಆತಂಕವಿದೆ.

ಏನಿದು ಆರ್‌ಸಿಇಪಿ?
ಆರ್‌ಸಿಇಪಿ (Regional Comprehensive Economic Partnership) ಇದು ವಿಶ್ವದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದ. ಇದರಲ್ಲಿ ಆಗ್ನೇಯ ಏಷ್ಯಾದ 10 ದೇಶಗಳು ಮತ್ತು ಬಲಿಷ್ಠ ವ್ಯಾಪಾರಿ ದೇಶಗಳೆನಿಸಿಕೊಂಡ ಚೀನ, ಆಸ್ಟ್ರೇ ಲಿಯಾ, ನ್ಯೂಜಿಲೆಂಡ್‌, ಜಪಾನ್‌ ಮತ್ತು ದಕ್ಷಿಣ ಕೊರಿಯಾ ಒಳಗೊಳ್ಳುತ್ತವೆ. ಪರಸ್ಪರ ಆಮದು ಮತ್ತು ರಫ್ತು ಮೇಲೆ ಕಡಿಮೆ ತೆರಿಗೆ ಇರಲಿದೆ.

ಲಾಭಗಳೇನು?
16 ದೇಶಗಳ ನಡುವಿನ ವ್ಯಾಪಾರವು ಜಾಗತಿಕ ವ್ಯಾಪಾರದ ಕಾಲು ಭಾಗಕ್ಕಿಂತ ಹೆಚ್ಚಿದೆ. ಈ ರಾಷ್ಟ್ರಗಳು ಮುಕ್ತ ಮಾರುಕಟ್ಟೆಯನ್ನು ಒದಗಿಸುತ್ತವೆ. ಒಪ್ಪಂದದ ಪರಿಧಿಯಲ್ಲಿರುವ ದೇಶ ಮತ್ತೂಂದು ದೇಶದಿಂದ ಯಾವುದೇ ಅಗತ್ಯ ವಸ್ತುಗಳನ್ನು ಅತ್ಯಲ್ಪ ತೆರಿಗೆ ಮೂಲಕ ಕೊಳ್ಳುವ ಮತ್ತು ಮಾರಾಟ ಮಾಡಲು ಸ್ವತಂತ್ರವಾಗಿರುತ್ತದೆ. ಇದು ವ್ಯಾಪಾರ ವೃದ್ಧಿಗೆ ಅನುಕೂಲವಾಗಲಿದೆ. ಜತೆಗೆ ಪಾಶ್ಚಾತ್ಯ ದೇಶಗಳ ಅವಲಂಬನೆ ಗರಿಷ್ಠ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ನಷ್ಟ ವೇನು?
ಆರ್‌ಸಿಇಪಿಯಲ್ಲಿ ನೋಂದಾಯಿಸಲಾಗಿರುವ ಪ್ರತಿಯೊಂದು ದೇಶವೂ ತನ್ನಲ್ಲಿ ಇತರ ದೇಶಗಳು ಮಾರುಕಟ್ಟೆ ತೆರೆಯಲು ಅವಕಾಶ ಮಾಡಿಕೊಡು ತ್ತವೆ. ಇದರಿಂದ ಪ್ರಬಲ ದೇಶಗಳು ಭಾರತದಲ್ಲಿ ಮಾರುಕಟ್ಟೆ ತೆರೆದು ಇಲ್ಲಿನ ಮೂಲ ಕಸುಬು ಮತ್ತು ಉತ್ಪನ್ನವನ್ನು ಹಿಮ್ಮೆಟ್ಟಿಸುವ ಅಪಾಯ ಇದೆ. ಇದರಿಂದ ಕೃಷಿ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಅಪಾಯ.

ಕೃಷಿಗೆ ಹಾನಿ ಹೇಗೆ?
ಕೃಷಿ ದೇಶದ ಬೆನ್ನೆಲುಬಾಗಿರುವ ರಾಷ್ಟ್ರದಲ್ಲಿ ಹೊರ ದೇಶಗಳಿಂದ ಬರುವ ಉತ್ಪನ್ನಗಳೇ ಮಾರಾಟವಾದರೆ ರೈತರು ಬೆಳೆಯುವ ಆಹಾರ ಪದಾರ್ಥಗಳಿಗೆ ಬೇಡಿಕೆ ಕುಸಿಯಬಹುದು. ಜೀವನಕ್ಕಾಗಿ ಕೃಷಿ ಬೆಳೆಯನ್ನು ಅವಲಂಬಿಸಿದ ರೈತರು ನಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ.

ಚೀನ ನಿರ್ಣಾಯಕ
ಈಗಾಗಲೇ ದೇಶದಲ್ಲಿ ಚೀನದ ವಸ್ತುಗಳ ಪ್ರಮಾಣ ಹೆಚ್ಚಿದೆ. ಈ ಆರ್‌ಸಿಇಪಿಯಲ್ಲಿ ಸದಸ್ಯ ರಾಷ್ಟ್ರವಾಗಿರುವ ಚೀನ ಉತ್ಪನ್ನಗಳು ಭಾರತಕ್ಕೆ ಮುಕ್ತವಾಗಿ ಬರಲಿವೆ. ಇದರಿಂದ ಈಗಿರುವ ಶೇ. 70-80ರಷ್ಟು ತೆರಿಗೆ ಇಳಿಸಬೇಕಾಗುತ್ತದೆ. ಇದು ದೇಶೀಯ ಮಾರುಕಟ್ಟೆಗೆ ಬಹುದೊಡ್ಡ ಅಪಾಯ.

ಯಾಕೆ ಬೇಡ?
ಹಾಲು ಸೇರಿದಂತೆ ಕ್ಷೀರೋತ್ಪನ್ನಗಳು, ರಬ್ಬರ್‌, ಭತ್ತ, ಮತೊÕéàದ್ಯಮ, ಅಡಿಕೆ, ಕಾಳುಮೆಣಸು, ಚಹಾ ಮೊದಲಾದ ಬೆಳೆಗಾರರಿಗೆ ಮಾರುಕಟ್ಟೆ ಸಮಸ್ಯೆಯಾಗಲಿದೆ. ಇದು ತಂತ್ರಜ್ಞಾನಗಳನ್ನೂ
ಕಡಿಮೆ ದರದಲ್ಲಿ ದೇಶದೊಳಗೆ ಬಿಡಲಿದ್ದು, ಉದ್ಯಮಗಳಿಗೆ ನಷ್ಟವಾಗುವ ಭೀತಿ ಇದೆ. ದೇಶಿಯ ಹೈನುಗಾರಿಕೆಗೆ ನ್ಯೂಜಿಲೆಂಡ್‌ ಪೈಪೋಟಿ ನೀಡಲಿದೆ.

ಭಾರತ ಸಹಿ ಹಾಕುವುದೇ?
ಭಾರತ ಸಹಿ ಹಾಕುವುದು ಇನ್ನೂ ಗೊಂದಲದಲ್ಲಿದೆ. ಸದ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ಸರಕಾರ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ನವೆಂಬರ್‌ 4ರಂದು ಇದರ ಸಭೆ ಸೇರಲಿದ್ದು,ಅಂದೇ ತೀರ್ಮಾಣವಾಗಲಿದೆ. ಕರಾವಳಿಗೆ ಪೆಟ್ಟು
ದೇಶೀಯ ಮಾರುಕಟ್ಟೆಗೆ ಅಡಿಕೆ, ಕಾಳುಮೆಣಸು ಆಮದಾಗಲಿದ್ದು ದೇಶಿ ಉತ್ಪನ್ನಗಳಿಗೆ ಬೇಡಿಕೆ ಕುಸಿಯಲಿದೆ. ರಾಜ್ಯದಲ್ಲಿ ಸುಮಾರು 2.50 ಲಕ್ಷ ಹೆಕ್ಟೇರ್‌ ಅಡಿಕೆ ಬೆಳೆಯುವ ಪ್ರದೇಶಗಳಿವೆ. ಅಡಿಕೆ ಆಮದಾಗಿದ್ದ ಸಂದರ್ಭ ಇಲ್ಲಿನ ಮಾರುಕಟ್ಟೆ ಕುಸಿದಿತ್ತು.

ಶೇ. 16
ದೇಶದಲ್ಲಿ ಕೈಗಾರಿಕಾ ಪ್ರಗತಿ ನಿರೀಕ್ಷಿತ ಮಟ್ಟ ದಲ್ಲಿ ಆಗುತ್ತಿಲ್ಲ. ನಮ್ಮ ಜಿಡಿಪಿಯ ಶೇ.16ರಷ್ಟು ಪಾಲನ್ನು ಮಾತ್ರ ಕೈಗಾರಿಕೆಗಳು ಹೊಂದಿವೆ. ಇದನ್ನು ನಿರೀಕ್ಷಿತ ಶೇ.25ರಷ್ಟಕ್ಕೆ ಏರಿಸುವ ಪ್ರಸ್ತಾ ವನೆ ಇದೆಯಾದರೂ ಕೈಗೂಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಬಲಶಾಲಿಯಾಗಿರುವ ಚೀನದ ಉತ್ಪನ್ನಗಳು ದೇಶದೊಳಕ್ಕೆ ಬರತೊಡಗಿದರೆ ಸ್ಥಳಿಯ ಕೈಗಾರಿಕೆಗಳಿಗೆ ಅಪಾಯ ಎನ್ನಲಾಗಿದೆ.

ಶೇ. 90
ಭಾರತ ಈಗಾಗಲೇ ಆಸಿಯಾನ್‌ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ನೀತಿ ಹೊಂದಿದ್ದು, ಅವುಗಳ ಜತೆ ಶೇ. 80ರ ತೆರಿಗೆ ವಿನಾಯಿತಿ ಜಾರಿಯಲ್ಲಿದೆ. ಜಪಾನ್‌ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ ಜತೆ ಶೇ.65ರ ತೆರಿಗೆ ವಿನಾಯಿತಿ ಇಟ್ಟುಕೊಳ್ಳಲಾಗಿದೆ. ಚಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ
ಶೇ.42ರಷ್ಟು ತೆರಿಗೆ ಕಡಿತ ಇದೆ. ಆರ್‌ಸಿಇಪಿ ಜಾರಿಗೆ ಬಂದರೆ ವಿನಾಯಿತಿ ಶೇ. 90ಕ್ಕೆ ಏರಲಿದೆ.

304 ಕೋಟಿ
16 ಸದಸ್ಯ ರಾಷ್ಟ್ರಗಳ ಒಟ್ಟು ಜನ ಸಂಖ್ಯೆ 304 ಕೋಟಿ. 49.5 ಲ.ಕೋ. ಡಾಲರ್‌ ಇದರ ಜಿಡಿಪಿ.

ಯಾವ್ಯಾವ ರಾಷ್ಟ್ರಗಳು?
· ಭಾರತ · ಚೀನ
· ಆಸ್ಟ್ರೇಲಿಯಾ
· ಜಪಾನ್‌
· ಲಾವೋಸ್‌
· ಇಂಡೋ ನೇಶ್ಯಾ
· ಮಲೇಷ್ಯಾ
· ಮ್ಯಾನ್ಮಾರ್‌
· ನ್ಯೂಜಿಲೆಂಡ್‌
· ಫಿಲಿಪ್ಪೀನ್ಸ್‌
· ಸಿಂಗಾಪುರ
· ಥಾಯ್ಲೆಂಡ್‌
· ವಿಯೆಟ್ನಾಂ
· ದಕ್ಷಿಣ ಕೊರಿಯಾ
· ಬ್ರೂನೈ
· ಕಾಂಬೋಡಿಯಾ

ಟಾಪ್ ನ್ಯೂಸ್

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.