112 ಸಹಾಯ ಕೇಂದ್ರಕ್ಕೆ 12 ಲಕ್ಷ ಕರೆ!
ಚಾಲನೆ ನೀಡಿದ ಒಂದೇ ದಿನದಲ್ಲಿ ಸಾರ್ವಜನಿಕರಿಂದ ಕರೆಗಳ ಮಹಾಪೂರ
Team Udayavani, Nov 2, 2019, 6:30 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಪೊಲೀಸ್ ಸಹಾಯವಾಣಿ, ಅಗ್ನಿಶಾಮಕ ದಳ, ಆ್ಯಂಬುಲೆನ್ಸ್ ಹಾಗೂ ಇತರ ಸೇವೆಗಳನ್ನು ಒದಗಿಸಲು ಆರಂಭಿಸಲಾಗಿರುವ “112 ತುರ್ತು ಸ್ಪಂದನಾ ಸಹಾಯ ಕೇಂದ್ರ’ಕ್ಕೆ ದೂರವಾಣಿ ಕರೆಗಳ ಮಹಾ ಪ್ರವಾಹವೇ ಹರಿದು ಬರುತ್ತಿದ್ದು, ಪ್ರತಿ ನಿಮಿಷಕ್ಕೆ 800ಕ್ಕೂ ಅಧಿಕ ಕರೆಗಳು ಬರುತ್ತಿವೆ.
ತುರ್ತು ಸಹಾಯವಾಣಿಗೆ ಮೊದಲ ದಿನವೇ ರಾಜ್ಯದ ವಿವಿಧ ಭಾಗಗಳಿಂದ ಅಂದಾಜು ಮಾಡಲು ಅಸಾಧ್ಯವಾಗದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಗಂಟೆಯಲ್ಲಿ 50,164 ಕರೆಗಳು ಬಂದಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಪ್ರಮಾಣವನ್ನು ದಿನಕ್ಕೆ ಅನ್ವಯಿಸಿದರೆ ಒಂದೇ ದಿನದಲ್ಲಿ 12 ಲಕ್ಷಕ್ಕೂ ಅಧಿಕ ಕರೆಗಳು ಸ್ವೀಕೃತಗೊಂಡಿವೆ. ಸಹಸ್ರಾರು ಕರೆಗಳಿಂದ ದೂರಸಂಪರ್ಕ ದಟ್ಟಣೆ ಉಂಟಾಗಿತ್ತು. ಈ ಹಿನ್ನೆಲೆ ಯಲ್ಲಿ ಬಿಎಸ್ಎನ್ಎಲ್ ಹೆಚ್ಚುವರಿ ದೂರ ಸಂಪರ್ಕ ಮಾರ್ಗಗಳ ವ್ಯವಸ್ಥೆಯನ್ನು ಕಲ್ಪಿಸಿತು.
ಈ ಪ್ರಮಾಣದ ಕರೆಗಳ ನಿರ್ವಹಣೆಗೆ ಸಂಬಂಧಿಸಿ ದಂತೆ ವರದಿಯನ್ನು ಬಿಎಸ್ಎನ್ಎಲ್ ಮತ್ತು ಸಿ-ಡ್ಯಾಕ್ ಸಂಸ್ಥೆ ಕೋರಿದ್ದು,ವರದಿ ಆಧರಿಸಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಒಂದು ದೇಶ, ಒಂದು ಸಂಖ್ಯೆ
ಪೊಲೀಸ್ ಸಹಾಯವಾಣಿ (100), ಅಗ್ನಿ ಶಾಮಕ ದಳ (101), ಆ್ಯಂಬು ಲೆನ್ಸ್ (108) ಹಾಗೂ ಇತರ ತುರ್ತು ಸೇವೆ ಗಳನ್ನು ಒಂದೇ ಸೂರಿನಡಿ ಒದಗಿ ಸುವ 112 ತುರ್ತು ಸ್ಪಂದನ ಸಹಾಯ ಕೇಂದ್ರ ಗುರುವಾರ ಲೋಕಾರ್ಪಣೆ ಗೊಂಡಿದ್ದು, “ಒಂದು ದೇಶ, ಒಂದೇ ತುರ್ತು ಕರೆ ಸಂಖ್ಯೆ’ ಪರಿಕಲ್ಪನೆಯಡಿ ಇದು ಅಭಿವೃದ್ಧಿಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.