ಕನ್ನಡ ಭಾಷೆಗೆ ಆದತ್ಯೆ ನೀಡಿ: ಶಿಗೇನಿ
Team Udayavani, Nov 2, 2019, 5:01 PM IST
ದೇವದುರ್ಗ: ಅನ್ಯ ಭಾಷೆಗಿಂತ ಕನ್ನಡ ಮಾತೃಭಾಷೆಗೆ ಮೊದಲ ಆದತ್ಯೆ ನೀಡಬೇಕು ಎಂದು ಬಸವ ಕಾಲೇಜು ಪ್ರಾಚಾರ್ಯ ಶಿಗೇನಿ ನಾಯಕ ಹೇಳಿದರು.
ಪಟ್ಟಣದ ಬಸವ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ನೆಲ, ಜಲ ರಕ್ಷಣೆಗೆ ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ. ಅನ್ನ ನೀಡುವ ಕನ್ನಡ ಭಾಷೆಗೆ ಧಕ್ಕೆ ಆಗದಂತೆ ಕನ್ನಡಿಗರು ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕನ್ನಡ ಭಾಷೆಗೆ ಸಾವಿರಾರೂ ವರ್ಷದ ಇತಿಹಾಸ ಇದೆ. ನವೆಂಬರ್‌ನಲ್ಲಿ ಮಾತ್ರ ಆಚರಣೆಗೆ ಸೀಮಿತವಾಗದೇ ದಿನನಿತ್ಯ ಕನ್ನಡ ಸಂರಕ್ಷಣೆಗೆ ಪ್ರತಿಯೊಬ್ಬರು ಗಮನಹರಿಸಬೇಕಾಗಿದೆ ಎಂದು ಹೇಳಿದರು.
ವಿವಿಧಡೆ ಆಚರಣೆ: ಸರಕಾರಿ ಕಚೇರಿ ಶಾಲೆ-ಕಾಲೇಜು ಸೇರಿ ಸಂಘ ಸಂಸ್ಥೆ ಪದಾಧಿಕಾರಿಗಳು ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಆಚರಿಸಿದರು.
ಮಿನಿ ವಿಧಾನಸೌಧ, ಸರ್ದಾರ್ ವಲ್ಲಭಭಾಯಿ ಪಟೇಲ್ ಮೈದಾನದಲ್ಲಿ ತಹಶೀಲ್ದಾರ್ ಮಂಜುನಾಥ ಭೋಗವತಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬಿಇಓ ಡಾ| ಎಸ್. ಎಂ. ಹತ್ತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಎಲ್.ಬಿ. ಅಗ್ನಿ, ಆರಕ್ಷರ ನಿರೀಕ್ಷಕರ ವೃತ್ತ ಕಚೇರಿಯಲ್ಲಿ ಸಿಪಿಐ ಎನ್.ಲೋಕೇಶ, ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ಜಿಪಂ ಕಚೇರಿಯಲ್ಲಿ ಎಇಇ ವೆಂಕಟೇಶ ಗಲಗ, ತಾಪಂ ಇಲಾಖೆಯಲ್ಲಿ ಹಾಲಸಿದ್ದಪ್ಪ ಪೂಜೇರಿ, ತಾಲೂಕು ಆರೋಗ್ಯ ಇಲಾಖೆಯಲ್ಲಿ ಡಾ| ಬನದೇಶ, ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕ ಮಾನಸಯ್ಯ, ಬಾಲಕಿಯರ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕ ಶರಣಗೌಡ, ತುಗ್ಲೇರದೊಡ್ಡಿ ಶಾಲೆಯಲ್ಲಿ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ , ಹಂಚಿನಾಳ ಸರಕಾರಿ ಶಾಲೆಯಲ್ಲಿ ಶೈಲಾಜ್, ಸರಕಾರಿ ಬಾಪೂಜಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ರಾಜೇಶ್ವರಿ, ಪರಿಶಿಷ್ಟ ಪಂಗಡ ಕಚೇರಿಯಲ್ಲಿ ರಾಘವೇಂದ್ರರಾವ್, ಬಿಸಿಎಂ ಕಚೇರಿಯಲ್ಲಿ ದೇವಪ್ಪ ಯರಕಂಚಿ, ಕರಿಗುಡ್ಡ ಶಾಲೆಯಲ್ಲಿ ಮುಖ್ಯಶಿಕ್ಷಕ ಆಂಜನೇಯ ಅಬಕಾರಿ, ಕೆಇಬಿ ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಸುಜಾತ ಮಹೇಶ ಅಬಕಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.