ಹಳೇ ಬಸ್ ನಿಲ್ದಾಣದೊಳಗೆ ಬಸ್ ನಿಲುಗಡೆಗೆ ಆದ್ಯತೆ
Team Udayavani, Nov 2, 2019, 5:10 PM IST
ಶಹಾಪುರ: ತಾತ್ಕಾಲಿಕವಾಗಿ ಇಲ್ಲಿನ ಹಳೇ ಬಸ್ ನಿಲ್ದಾಣದ ಆವರಣದೊಳಗೆ ಬಸ್ ನಿಲುಗಡೆಗೆ ಸಮ್ಮತಿ ನೀಡಿ, ಶುಕ್ರವಾರ ಬಸ್ ನಿಲುಗಡೆಗೆ ಆರಂಭಿಸಿದ್ದಕ್ಕಾಗಿ ಶಹಾಪುರ ನಾಗರಿಕ ಹೋರಾಟ ಒಕ್ಕೂಟ ಸಮಿತಿ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಹಳೇ ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಬಸ್ ಸಂಚಾರ, ನಿಲುಗಡೆಗೆ ಸಾಕಷ್ಟು ತೊಂದರೆ ಯಾಗಿತ್ತು. ನಗರದ ಹೆದ್ದಾರಿ ಮೇಲೆ ಬಸ್ ನಿಲುಗಡೆಯಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಅ.29ರಂದು ನಡೆದ ಬಸ್ ಅಪಘಾತದಲ್ಲಿ 5 ವರ್ಷದ ಮಗುವೊಂದು ಮೃತಪಟ್ಟಿದ್ದು, ಮಗುವಿನ ಅಜ್ಜಿ ಸಾವು ನೋವಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾಳೆ. ಈ ಘಟನೆಗೆ ಸಂಬಂ ಧಿಸಿದಂತೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಹಳೇ ಬಸ್ ನಿಲ್ದಾಣ ಹತ್ತಿರ ಒಂದೆಡೆ ಆಟೋ ಸ್ಟ್ಯಾಂಡ್ , ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಬಸ್ ನಿಲುಗಡೆಗೆ ಸುರಕ್ಷಿತವಾಗಿರಲಲ್ಲಿ. ಈ ಕುರಿತು ಕೂಡಲೇ ಬಸ್ ನಿಲ್ದಾಣ ಒಳಾಂಗಣ ಕಾಮಗಾರಿ ಮುಗಿದಿದ್ದು, ಕೂಡಲೇ ಬಸ್‌ಗಳು ನಿಲ್ದಾಣದೊಳಗೆ ತಾತ್ಕಾಲಿಕವಾಗಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಜೊತೆಗೆ ಅಪಘಾತ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿತ್ತು.
ನಾಗರಿಕರ ಬೇಡಿಕೆಗೆ ಅಧಿ ಕಾರಿಗಳು ಸ್ಪಂದಿಸಿದ್ದರಿಂದ ಶುಕ್ರವಾರ ಬಸ್‌ಗಳನ್ನು ಹಳೇ ಬಸ್ ನಿಲ್ದಾಣದೊಳಗೆ ಪ್ರವೇಶ ಪಡೆಯುತ್ತಿವೆ. ಅಲ್ಲದೆ ಬಸ್ ಒಳಗಡೆ ಬಸ್ ಸಮರ್ಪಕವಾಗಿ ಒಳ ಪ್ರವೇಶಿಸಲು ನಿಲ್ದಾಣ ಗೇಟ್ ಮುಂದೆ ಕಟ್ಟಿದ್ದ ರಸ್ತೆ ವಿಭಜಕ ಗೋಡೆ ಒಡೆದು ಹಾಕಬೇಕು. ಬಾಲಕಿಯರ ಕಾಲೇಜಿಗೆ ತೆರಳುವ ಮಾರ್ಗದಲ್ಲೂ ರಸ್ತೆ ವಿಭಜಕ ಒಡೆಯುವ ಮೂಲಕ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಿಸಲು ಸುಗಮ ವ್ಯವಸ್ಥೆ ಕಲ್ಪಿಸಬೇಕೆಂದು ನಾಗರಿಕ ಹೋರಾಟ ಸಮಿತಿ ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.