ಮಹಾಬಿಕ್ಕಟ್ಟು: ಮಾರುಕಟ್ಟೆಗೆ 50-50 ಹೆಸರಿನ ಹೊಸ ಬಿಸ್ಕತ್ತು ಬಂದಿದೆಯೇ ? ಓವೈಸಿ ವ್ಯಂಗ್ಯ
Team Udayavani, Nov 3, 2019, 8:52 AM IST
ಹೈದರಬಾದ್ : ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಸಂಬಂಧ ಬಿಜೆಪಿ ಮತ್ತು ಶಿವಸೇನೆ ನಡುವಿನ ರಾಜಕೀಯ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾರುಕಟ್ಟೆಯಲ್ಲಿ 50-50 ಹೆಸರಿನ ಹೊಸ ಬಿಸ್ಕತ್ತು ಏನಾದರೂ ಬಂದಿದೆಯೇ ಎಂದು ವ್ಯಂಗ್ಯವಾಡಿದ್ದಾರೆ.
ಎಐಎಂಐಎಂ ತನ್ನ ಬೆಂಬಲವನ್ನು ಬಿಜೆಪಿ ಅಥವಾ ಶಿವಸೇನೆಗೆ ನೀಡುವುದಿಲ್ಲಎಂಬ ತಮ್ಮ ನಿಲುವನ್ನುಇದೇ ವೇಳೆ ಸ್ಪಷ್ಟ ಪಡಿಸಿದರು. ಸರ್ಕಾರ ರಚನೆ ಕಗ್ಗಂಟನ್ನು ಉಲ್ಲೇಖಿಸಿ, 50-50 ಎಂದರೇನು ? ಆ ಹೆಸರಿನ ಹೊಸ ಬಿಸ್ಕತ್ತು ಬಂದಿದೆಯೇ ? ನೀವೆಷ್ಟು 50-50 ಮಾಡುತ್ತೀರಾ ಎಂದು ಪತ್ರಕರ್ತರಿಗೆ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ಜನರು ಸತಾರದಲ್ಲಿ ಮಳೆಯಿಂದಾದ ಅನಾಹುತದ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಅದರ ಬದಲಿಗೆ 50-50 ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ನನಗೂ ಕೂಡ ಫಡ್ನವೀಸ್ ಅಥವಾ ಬೇರಾರದರೂ ಮುಖ್ಯಮಂತ್ರಿ ಆಗುತ್ತಾರೋ ಇಲ್ಲವೋ ತಿಳಿದಿಲ್ಲ. ರಾಜ್ಯದಲ್ಲಿ ಮ್ಯೂಸಿಕ್ ಚೇರ್ ಆಟ ಮುಂದುವರಿಯುತ್ತಿದೆ. ಶಿವಸೇನೆಗೂ ಕೂಡ ಏನು ಮಾಡಬೇಕೆಂದು ಸ್ಪಷ್ಟತೆಯಿಲ್ಲ. ಉದ್ಧವ್ ಠಾಕ್ರೆ ಪ್ರಧಾನಿ ಮೋದಿಗೆ ಹೆದರುವಂತೆ ತೋರುತ್ತಿದೆ ಎಂದರು.
ಮಹಾರಾಷ್ಟ್ಟ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಎರಡು ಸ್ಥಾನಗಳನ್ನು ಗೆದ್ದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
MUST WATCH
ಹೊಸ ಸೇರ್ಪಡೆ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
Bengaluru; ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೋ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.