ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Team Udayavani, Nov 3, 2019, 3:02 PM IST
ಹುಮನಾಬಾದ: ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಕಾಮಗಾರಿ ಕೈಗೊಂಡ ನಂತರ ಕಳಪೆ ಆಗಿದೆ ಎಂದು ದೂರುವ ಬದಲಿಗೆ ಸಾರ್ವಜನಿಕರು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಡದಂತೆ ಮೆನ್ನೆಚ್ಚರಿಕೆ ವಹಿಸಿ, ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಸಲಹೆ ನೀಡಿದರು.
ಹುಮನಾಬಾದ- ಮಾಣಿಕನಗರ- ಘೋಡವಾಡಿ ಮಾರ್ಗದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳುತ್ತಿರುವ1.50 ಕಿ.ಮೀ. ಜಂಕ್ಷನ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರದ ಅನುದಾನವೇನು ವಿಧಾನಸೌಧದಲ್ಲಿ ಪ್ರಿಂಟ್ ಆಗುವುದಿಲ್ಲ. ಪ್ರತಿಯೊಬ್ಬರಿಂದ ಸಂಗ್ರಹಿಸಲಾಗುವುವ ತೆರಿಗೆ ಹಣವನ್ನೇ ಸರ್ಕಾರ ಅಭಿವೃದ್ಧಿಗಾಗಿ ಅನುದಾನ ರೂಪದಲ್ಲಿ ಬಿಡುಗಡೆ ಮಾಡುತ್ತದೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸದಿರುವ ಕಾರಣ ಬಹುತೇಕ ಕಾಮಗಾರಿಗಳು ಪೂರ್ಣಾವಧಿ ಸೇವೆ ಒದಗಿಸುವ ಮುನ್ನವೇ ಹಾಳಾಗುತ್ತವೆ. ಇಂಥದಕ್ಕೆ ಸಾರ್ವಜನಿಕರು ಅವಕಾಶ ಕಲ್ಪಿಸಬಾರದು ಎಂದು ಸಲಹೆ ನೀಡಿದರು. ಗುಣಮಟ್ಟ ವಿಷಯದಲ್ಲಿ ಯಾವುದೇ ಮುಲಾಜಿಲ್ಲ. ಗುತ್ತಿಗೆದಾರ ಯಾರಾಗಿದ್ದರೂ ಸರಿ, ಕಳಪೆಯಾದರೆ ಬಿಲ್ ತಡೆಹಿಡಿಯಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ|ಚಂದ್ರಶೇಖರ ಬಿ.ಪಾಟೀಲ, ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಎಂ.ಡಾಕುಳಗಿ, ಉಪಾಧ್ಯಕ್ಷೆ ಸುಗಂಧಾ ಅಣ್ಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ಸದಸ್ಯ ಪ್ರಕಾಶ ಕಾಳಮದರಗಿ, ಮಾಣಿಕನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಪೊಲೀಸ್ ಪಾಟೀಲ, ಅಣ್ಣಾರಾವ್ ಪಾಟೀಲ, ದತ್ತಕುಮಾರ ಚಿದ್ರಿ, ಓಂಕಾರ ತುಂಬಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಹ್ಮದ್ ಮೈನೋದ್ದಿನ್ ಅಪ್ಸರಮಿಯ್ಯ, ರಾಜಪ್ಪ ಇಟಗಿ, ಎಸ್.ಡಿ.ವಾಗ್ಮಾರೆ, ಈಶ್ವರ ಬಿ.ಕಲಬುರ್ಗಿ, ವಾಹೇದ್ ಬೇಗ್, ಮಲ್ಲಿಕಾರ್ಜುನ ಮಾಳಶೆಟ್ಟಿ, ಸಚ್ಚಿನ ಘವಾಳ್ಕರ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.