ಹಣತೆ ಬೆಳಕಿನಲ್ಲಿ ಕಂಗೊಳಿಸಿದ ಶ್ರೀ ಕ್ಷೇತ್ರ
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ: ವಿಶ್ವರೂಪ ದರ್ಶನ
Team Udayavani, Nov 4, 2019, 5:01 AM IST
ಬಂಟ್ವಾಳ: ಜೀವನದಿ ನೇತ್ರಾವತಿಯ ತಟದಲ್ಲಿದ್ದು, ವಟಪುರ ಕ್ಷೇತ್ರವಾಗಿ ಖ್ಯಾತಿ ಗಳಿಸಿರುವ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನವು ರವಿವಾರ ಮುಂಜಾನೆ ಹಣತೆಯ ಬೆಳಕಿನೊಂದಿಗೆ ಸ್ವರ್ಣ ಲೇಪನದಂತೆ ಕಂಗೊಳಿಸಿತು. ಅಂದರೆ 18ನೇ ವರ್ಷದ ವಿಶ್ವರೂಪ ದರ್ಶನದ ಹಿನ್ನೆಲೆಯಲ್ಲಿ ಪ್ರಾತಃಕಾಲ ಕ್ಷೇತ್ರದಲ್ಲಿ ಪೂರ್ತಿ ಹಣತೆಗಳನ್ನು ಹಚ್ಚಲಾಗಿತ್ತು.
ಮುಂಜಾನೆಯ ಬ್ರಾಹ್ಮಿà ಮುಹೂರ್ತದ ಸುಂದರ ಘಳಿಗೆಯನ್ನು ಕಣ್ತುಂಬಿಕೊಳ್ಳುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ದೇಗುಲದ ಹೊರಾಂಗಣದಲ್ಲಿ ಶಂಖ, ಚಕ್ರ, ಗದಾ, ಪದ್ಮ, ಕೊಡಲಿ, ತಾವರೆ, ಮೊದಲಾದವುಗಳನ್ನು ಚಿತ್ರಿಸಿದ ರೀತಿಯಲ್ಲಿ ಹಣತೆಗಳನ್ನು ಹಚ್ಚಲಾಗಿತ್ತು. ದೇಗುಲದ ಆಡಳಿತ ಮೊಕ್ತೇಸರರು, ಮೊಕ್ತೇಸರರು ಸೇರಿದಂತೆ ಹಲವು ಗಣ್ಯರು ಆ ಪುಣ್ಯ ಕ್ಷಣಗಳನ್ನು ಕಣ್ತುಂಬಿಕೊಂಡರು.
ಪುಷ್ಪಾಲಂಕಾರ
ಗರ್ಭಗುಡಿಯಲ್ಲಿ ಶ್ರೀ ದೇವರ ಅಲಂಕಾರದ ಬಳಿಕ ನಂದಾದೀಪ ಬೆಳಗಿ ಬಳಿಕ ಭಕ್ತರು ಹಣತೆಯನ್ನು ಬೆಳಗಿದರು. ವಿದ್ಯುತ್‌ದೀಪಗಳಿಂದ ಮುಕ್ತವಾಗಿದ್ದ ಕ್ಷೇತ್ರವು ಅತ್ಯಂತ ವೈಭವದಿಂದ ಕಂಗೊಳಿಸಿತು. ಜತೆಗೆ ಕ್ಷೇತ್ರದ ಆರಾಧ್ಯಮೂರ್ತಿಯನ್ನು ವಿಶೇಷ ರೀತಿಯಲ್ಲಿ ಮಲ್ಲಿಗೆ ಸಹಿತ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.
Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ
Subhramanya: 9 ತಿಂಗಳ ಹಿಂದೆ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದನೇ ವಿಕ್ರಂ ಗೌಡ?
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.