ಖಗೋಳ ವಿಜ್ಞಾನಿಗಳಿಗಾಗಿ ಓವನ್ ಕಳುಹಿಸಿದ ನಾಸಾ!
Team Udayavani, Nov 4, 2019, 1:26 AM IST
ವರ್ಜೀನಿಯಾ: ಊರಿನಿಂದ ಊರಿಗೆ, ದೇಶದಿಂದ ದೇಶಕ್ಕೆ ಸಾಮಗ್ರಿಗಳನ್ನು ರವಾನೆ ಮಾಡುವುದನ್ನು ನಾವು ಕೇಳಿದ್ದೇವೆ. ಆದರೀಗ, ಬಾಹ್ಯಾಕಾಶದಲ್ಲಿ ಕಾರ್ಯನಿರತರಾಗಿರುವ ಅಮೆರಿಕದ ಗಗನಯಾತ್ರಿಗಳ ಉಪಯೋಗಕ್ಕಾಗಿ ಓವನ್ ಸಹಿತ ಸುಮಾರು 3,700 ಕೆ.ಜಿ. ತೂಕದಷ್ಟು ಸರಕನ್ನು ಭೂಮಿಯಿಂದ ರವಾನೆ ಮಾಡಲಾಗಿದೆ! ವರ್ಜೀನಿಯಾದ ವಲ್ಲೊಪ್ಸ್ ದ್ವೀಪದಿಂದ ಹೊರಟ ಸಿಗ್ನಸ್ ಕ್ಯಾಪುÕಲ್ ಎಂಬ ರಾಕೆಟೊಂದು ಈ ಸಾಮಗ್ರಿಗಳನ್ನು ಹೊತ್ತು ಬಾಹ್ಯಾಕಾಶದತ್ತ ಹೆಜ್ಜೆ ಹಾಕಿದೆ. ನಾರ್ತೋಪ್ ಗ್ರುಮನ್ ಎಂಬ ಖಾಸಗಿ ರಾಕೆಟ್ ಸಂಸ್ಥೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆಗಾಗಿ ಈ ರಾಕೆಟನ್ನು ಉಡಾಯಿಸಿದೆ.
ಬಾಹ್ಯಾಕಾಶ ನಿಲ್ದಾಣ ತಲುಪಲಿರುವ ಈ ರಾಕೆಟ್‌ನಿಂದ ವಿಜ್ಞಾನಿಗಳು ತಮಗೆ ಬೇಕಾದ ಪರಿಕರಗಳನ್ನು ಪಡೆಯಲಿದ್ದಾರೆ. ಇದರಲ್ಲಿ, ವಿಜ್ಞಾನಿಗಳು ಬಿಸ್ಕೇಟ್‌ಗಳನ್ನು ತಯಾರಿಸಿಕೊಳ್ಳಲು ಬೇಕಾದ ಓವನ್‌ನಿಂದ ಹಿಡಿದು ನ್ಪೋರ್ಟ್ಸ್ ಕಾರುಗಳಲ್ಲಿ ಉಪಯೋಗಿಸುವ ಕಾರ್ಬನ್ ಫೈಬರ್, ಕೆಲವಾರು ಕ್ಯಾನ್ಸರ್, ಹಾರ್ಮೋನು ಏರುಪೇರು ಸಮಸ್ಯೆಗಳ ನಿವಾರಣೆಗಾಗಿ ಅಗತ್ಯವಾದ ನ್ಯಾನೋ ಮೆಡಿಸಿನ್ ಪ್ರಯೋಗಕ್ಕೆ ಪೂರಕ ವಾದ ಔಷಧಿಗಳು ಹಾಗೂ ಇನ್ನಿತರ ಸಾಮಗ್ರಿಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.