ಇನ್ನೂ ಆಸ್ತಿ ವಿವರ ಸಲ್ಲಿಸದ 36 ಮಂದಿ ಶಾಸಕರು

ಲೋಕಾಯುಕ್ತ ನೋಟಿಸ್‌ ನೀಡಿ 20 ದಿನಗಳಾದರೂ ಉತ್ತರವೇ ನೀಡಿಲ್ಲ !

Team Udayavani, Nov 4, 2019, 5:45 AM IST

KAR-LOK

ಬೆಂಗಳೂರು: ಆಸ್ತಿ ವಿವರ ಸಲ್ಲಿಸಲು ಲೋಕಾಯುಕ್ತ ಗಡುವು ನೀಡಿ ಹತ್ತು ದಿನ ಕಳೆದರೂ ಹಲವು ಶಾಸಕರು ಇನ್ನೂ ಆಸ್ತಿ ವಿವರ ನೀಡದೆ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದಾರೆ.

ಅ.13ರಂದು ಕರ್ನಾಟಕ ಲೋಕಾಯುಕ್ತ 43 ಶಾಸಕರು ಹಾಗೂ 26 ವಿಧಾನ ಪರಿಷತ್‌ ಸದಸ್ಯರಿಗೆ 10 ದಿನಗಳೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಖಡಕ್‌ ಸೂಚನೆ ನೀಡಿತ್ತು. ಇಷ್ಟಾದರೂ 24 ಶಾಸಕರು ಹಾಗೂ 12 ವಿಧಾನ ಪರಿಷತ್‌ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ನೀಡಿಲ್ಲ.

ನಿಗದಿತ ಸಮಯದಲ್ಲಿ ಆಸ್ತಿ ವಿವರ ಸಲ್ಲಿಸದ ಶಾಸಕರ ಪಟ್ಟಿ ಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ತಲಾ 9 ಸದಸ್ಯರು, ಜೆಡಿಎಸ್‌ನಿಂದ ಮೂವರು, ಇಬ್ಬರು ಅನರ್ಹ ಶಾಸಕರು ಮತ್ತು ಬಿಎಸ್‌ಪಿ ಯಿಂದ ಉಚ್ಚಾಟಿತ ಶಾಸಕ ಎನ್‌. ಮಹೇಶ್‌ ಹೆಸರಿದೆ.

ಬಿಜೆಪಿಯಿಂದ ಎಂ.ಪಿ. ರೇಣುಕಾಚಾರ್ಯ, ಡಿ.ಎಸ್‌. ಹೊಲಗೇರಿ, ರೂಪಾಲಿ ಸಂತೋಷ್‌ , ದಿನಕರ್‌ ಕೇಶವ ಶೆಟ್ಟಿ , ಜಿ.ಬಿ. ಜ್ಯೋತಿಗಣೇಶ್‌, ಹರೀಶ್‌ ಪೂಂಜ, ಎಂ.ವೈ. ಪಾಟೀಲ್‌, ಸತೀಶ್‌ ರೆಡ್ಡಿ, ರಾಜಕುಮಾರ್‌ ಪಾಟೀಲ್‌ ಹೆಸರುಗಳಿವೆ. ಕಾಂಗ್ರೆಸ್‌ನಿಂದ ಜಮೀರ್‌ ಅಹ್ಮದ್‌ ಖಾನ್‌, ರಹೀಮ್‌ ಖಾನ್‌, ಬಿ. ನಾರಾಯಣ ರಾವ್‌, ಟಿ.ಡಿ. ರಾಜೇಗೌಡ, ವೆಂಕಟರಮಣಪ್ಪ , ರೂಪಕಲಾ, ಟಿ. ವೆಂಕಟರಮಣಯ್ಯ, ಕೆ.ವೈ. ನಂಜೇಗೌಡ, ಕುಸುಮಾವತಿ ಶಿವಳ್ಳಿ ಹೆಸರುಗಳಿವೆ.

ಜೆಡಿಎಸ್‌ನ ಸಿ.ಎನ್‌. ಬಾಲಕೃಷ್ಣ, ಎಂ. ಶ್ರೀನಿವಾಸ್‌, ಎಂ.ಸಿ. ಮನಗೂಳಿ ಹಾಗೂ ಅನರ್ಹಗೊಂಡಿರುವ ಶಾಸಕರಾದ ಅಡಗೂರು ಎಚ್‌. ವಿಶ್ವನಾಥ್‌ ಮತ್ತು ಆರ್‌. ಶಂಕರ್‌ ಹೆಸರುಗಳು ಪಟ್ಟಿಯಲ್ಲಿವೆ.

ವಿಧಾನ ಪರಿಷತ್‌ ಸದಸ್ಯರ ಪೈಕಿ ಕಾಂಗ್ರೆಸ್‌ನ 6 ಸದಸ್ಯರು, ಜೆಡಿಎಸ್‌ ಮತ್ತು ಬಿಜೆಪಿಯ ತಲಾ ಮೂವರ ಸಹಿತ ಒಟ್ಟು 12 ಸದಸ್ಯರು ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ ಎಂದು ದಾಖಲೆಗಳು ಸ್ಪಷ್ಟಪಡಿಸಿವೆ. ಆಯನೂರು ಮಂಜುನಾಥ್‌, ಅಲ್ಲಂ ವೀರಭದ್ರಪ್ಪ, ತೇಜಸ್ವಿನಿ ಗೌಡ, ಕೆ.ಟಿ. ಶ್ರೀಕಂಠೇಗೌಡ, ಕಾಂತರಾಜು, ಎನ್‌.ಅಪ್ಪಾಜಿಗೌಡ, ಕೆ.ಪಿ. ನಂಜುಂಡಿ, ನಜೀರ್‌ ಅಹ್ಮದ್‌ , ಡಿ.ಯು.ಮಲ್ಲಿಕಾರ್ಜುನ, ಎಂ.ನಾರಾಯಣಸ್ವಾಮಿ, ಪಿ.ಆರ್‌. ರಮೇಶ್‌, ಸಿ.ಎಂ. ಇಬ್ರಾಹಿಂ ಹೆಸರುಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಕ್ರಮ ಕೈಗೊಳ್ಳಲು ಅವಕಾಶವಿದೆ
ಪ್ರತಿವರ್ಷ ರಾಜ್ಯದ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಲೋಕಾಯುಕ್ತ ಕಚೇರಿಗೆ ಸಲ್ಲಿಸಬೇಕು. ಆದರೆ ಇತ್ತೀಚೆಗೆ ಹಲವರು ಆಸ್ತಿ ವಿವರ  ಗಳನ್ನು ಸಲ್ಲಿಸುತ್ತಿಲ್ಲ. ಈ ರೀತಿ ಕಾನೂನನ್ನು ಉಲ್ಲಂ ಸುವ ಜನ ಪ್ರತಿನಿಧಿ ಗಳ ವಿರುದ್ಧ ಕಾನೂನು ಕ್ರಮ ಜರಗಿಸುವ ಅವಕಾಶ ಲೋಕಾಯುಕ್ತ ಕ್ಕಿದೆ. ನನ್ನ ಅವಧಿಯಲ್ಲಿ ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಐಪಿಸಿ ಸೆಕ್ಷನ್‌ 176ರ ಅನ್ವಯ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದೆ. ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದಲ್ಲಿ ಐಪಿಸಿ ಸೆಕ್ಷನ್‌ 177ರ ಅನ್ವಯ ಕ್ರಮ ಜರಗಿಸಬಹುದು.
– ನ್ಯಾ| ಸಂತೋಷ್‌ ಹೆಗ್ಡೆ , ನಿವೃತ್ತ ಲೋಕಾಯುಕ್ತ

ಟಾಪ್ ನ್ಯೂಸ್

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

1-wwwe

NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.