19 ಏಜ್ ಈಸ್ ನಾನ್ಸೆನ್ಸ್ ನಾಯಕನಿಗೆ ತಮಿಳಿನಲ್ಲಿ ಭರ್ಜರಿ ಅವಕಾಶ!
Team Udayavani, Nov 4, 2019, 12:10 PM IST
ಲೋಕೇಶ್ ನಿರ್ಮಾಣದಲ್ಲಿ ಮೂಡಿ ಬಂದಿರುವ 19 ಏಜ್ ಈಸ್ ನಾನ್‌ಸೆನ್ಸ್ ಚಿತ್ರವೀಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗುತ್ತಿದೆ. ಸದ್ದುಗದ್ದಲವಿಲ್ಲದೆ ತಮ್ಮ ಪಾಡಿಗೆ ತಾವು ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡವೀಗ ತಣ್ಣಗೆ ಸದ್ದು ಮಾಡಲು ಶುರುವಿಟ್ಟುಕೊಂಡಿದೆ. ಹತ್ತೊಂಬತ್ತರ ವಯಸಿನ ಹುಮ್ಮಸ್ಸು, ಉನ್ಮಾದಗಳ ಸುತ್ತ ನಡೆಯೋ ಲವ್, ಫ್ಯಾಮಿಲಿ ಸಬ್ಜೆಕ್ಟಿನ ಈ ಚಿತ್ರದಲ್ಲಿ ಮನುಷ್ ಎಂಬ ಹತ್ತೊಂಬತ್ತರ ಹರೆಯದ ಹುಡುಗ ನಾಯಕನಾಗಿ ನಟಿಸಿದ್ದಾನೆ. ವಿಶೇಷವೆಂದರೆ, ಈ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿರುವಾಗಲೇ ತಮಿಳು ಚಿತ್ರಕ್ಕೆ ಹೀರೋ ಆಗುವ ಸದಾವಕಾಶ ಈ ಹುಡುಗನನ್ನು ಅರಸಿ ಬಂದಿದೆ.
ಈ ಸಿನಿಮಾವನ್ನು ಲೋಕೇಶ್ ನಿರ್ಮಾಣ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಸಿನಿಮಾ ನಿರ್ಮಾಣ ಮಾಡಬೇಕೆಂಬ ಕನಸಿಟ್ಟುಕೊಂಡಿದ್ದ ಲೋಕೇಶ್ ಈ ಮೂಲಕ ಅದನ್ನು ನನಸು ಮಾಡಿಕೊಂಡಿದ್ದಾರೆ. ನಿರ್ದೇಶಕ ಸುರೇಶ್ ಎಂ ಗಿಣಿ ಈ ಕಥೆ ಹೇಳಿದಾಗಲೇ ಸಿನಿಮಾ ವ್ಯಾಮೋಹ ಹೊಂದಿದ್ದ ತಮ್ಮ ಮಗನೇ ಹೀರೋ ಆಗಲು ಸೂಕ್ತ ಎಂಬ ನಿರ್ಧಾರಕ್ಕವರು ಬಂದಿದ್ದರಂತೆ. ಆದರೆ ಮಗನನ್ನು ಏಕಾಏಕಿ ಹೀರೋ ಮಾಡೋ ಮನಸೂ ಅವರಿಗೆ ಇರಲಿಲ್ಲ. ಆತನಿಗೆ ಸೂಕ್ತ ತರಬೇತಿ ಕೊಡಿಸಿ ಅದರಲ್ಲಿನ ಫಲಿತಾಂಶ ನೋಡಿಕೊಂಡು ಮುಂದಿನದ್ದನ್ನು ನೋಡಿಕೊಳ್ಳೋ ನಿರ್ಧಾರ ಲೋಕೇಶ್ ಅವರದ್ದಾಗಿತ್ತು.
ಇದೀಗ ತಾನೇ ಬಿಕಾಂ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿರುವ ಮನುಷ್‌ಗೆ ಸಿಲೆಬಸ್‌ಗಿಂತ ಸಿನಿಮಾ ಮೇಲೇ ಹೆಚ್ಚು ಆಸಕ್ತಿ. ಆದ್ದರಿಂದಲೇ ಆತ ರಂಗಭೂಮಿಯ ಪರಿಣಿತರಿಂದ ಅಚ್ಚುಕಟ್ಟಾಗಿ ನಟನೆಯ ಪಟ್ಟುಗಳನ್ನು ಕಲಿತುಕೊಂಡಿದ್ದ. ನಂತರ ಈ ಸಿನಿಮಾ ಪಾತ್ರಕ್ಕೂ ಬೆರಗಾಗುವಂತೆ ಜೀವ ತುಂಬಿದ್ದ. ಈ ಚಿತ್ರದ ಛಾಯಾಗ್ರಾಹಕರಾಗಿದ್ದ ವೆಟ್ರಿ ಮನುಷ್‌ನ ಶ್ರದ್ಧೆ ಮತ್ತು ನಟನೆಯ ಕಸುವನ್ನು ನೋಡಿ ತಾವು ನಿರ್ದೇಶನ ಮಾಡಲಿರೋ ತಮಿಳು ಚಿತ್ರಕ್ಕೆ ಈತನೇ ಸೂಕ್ತ ಎಂಬ ನಿರ್ಣಯಕ್ಕೆ ಬಂದಿದ್ದರು. ಈ ಕಥೆಯನ್ನು ಲೋಕೇಶ್ ಅವರಿಗೆ ಹೇಳಿ ಒಪ್ಪಿಗೆಯನ್ನೂ ಪಡೆದುಕೊಂಡಿದ್ದಾರಂತೆ. 19 ಏಜ್ ಈಸ್ ನಾನ್ಸೆನ್ಸ್ ತೆರೆಗಾಣುತ್ತಿದ್ದಂತೆಯೇ ಮಾನುಷ್ ನಟನೆಯ ತಮಿಳು ಚಿತ್ರಕ್ಕೆ ಚಾಲನೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.