ಫೋಬಿಯಾ ಬೇಡ ಭಯ…

ಹೆಂಗಸರಿಗ್ಯಾಕೆ ಹೆದರಿಕೆಯಾಗುತ್ತೆ?

Team Udayavani, Nov 6, 2019, 4:15 AM IST

fobia-bhaya

ಹೆದರಿಕೆಗೆ ಕಾರಣಗಳೇ ಇರುವುದಿಲ್ಲ. ಹಾಗಿದ್ದರೂ,ಹೆಣ್ಣುಮಕ್ಕಳಿಗೆ ಕೆಲವೊಮ್ಮೆ ಭಯವಾಗುತ್ತದೆ. ಗಂಡನಿಗೆ ಆ್ಯಕ್ಸಿಡೆಂಟ್‌ ಆಗಿಬಿಟ್ಟರೆ, ಮಕ್ಕಳಿಗೆ ಆರೋಗ್ಯ ಹದಗೆಟ್ಟರೆ, ಮನೆಗೆ ಕಳ್ಳ ನುಗ್ಗಿಬಿಟ್ಟರೆ, ಅಕಸ್ಮಾತ್‌ ತನಗೇ ಏನಾದರೂ ಆಗಿ ಮನೆಯವರೆಲ್ಲಾ ದಿಕ್ಕಾಪಾಲಾದರೆ…ಇಂಥ ಕೆಟ್ಟ ಯೋಚನೆಗಳೆಲ್ಲ, ಭಯದ ರೂಪದಲ್ಲಿ ಜೊತೆಯಾಗಿ ಹೆಂಗಸರನ್ನು ಬಿಡದೆ ನಡುಗಿಸುತ್ತದೆ. ದುಸ್ವಪ್ನದಂತೆ ಕಾಡುವ ಫೋಬಿಯಾಕ್ಕೆ ಕಾರಣಗಳು ಮತ್ತು ಅದಕ್ಕಿರುವ ಪರಿಹಾರ- ಎಲ್ಲಕ್ಕೂ ಉತ್ತರವಾಗಿ ಈ ಲೇಖನ…

ಭಯಪಡಲು ವಾಸ್ತವದಲ್ಲಿ ಏನೂ ಇರದಿದ್ದರೂ, ಹಲವು ಸ್ತ್ರೀಯರು ಅಸಹಜ ಭಯದಿಂದ ಕಂಗಾಲಾಗುತ್ತಾರೆ. ಮಕ್ಕಳು ಕಳೆದುಹೋದಂತೆ, ಮನೆಯ ವಸ್ತುಗಳು ನಾಪತ್ತೆಯಾದಂತೆ, ಮನೆಯಲ್ಲಿ ಕಳ್ಳತನ ಆದಂತೆ, ಮಾಡಿಟ್ಟ ಅಡಿಗೆಯೊಳಗೆ ವಿಷ ಬೆರೆತಂತೆ, ಗಂಡ-ಮಕ್ಕಳಿಗೆ ಅಪಘಾತವಾದಂತೆ, ಗಂಡನಿಗೆ ಅನೈತಿಕ ಸಂಬಂಧವಿರುವಂತೆ, ತಮ್ಮ ಫೋನ್‌ ಅನ್ನು ಯಾರೋ ಕದ್ದಾಲಿಸಿದಂತೆ… ಹೀಗೆ ಅಕಾರಣವಾಗಿ ಭಯ ಅವರನ್ನು ಕಾಡುತ್ತದೆ. ಮಹಿಳೆಯರನ್ನೇ ಹೆಚ್ಚಾಗಿ ಕಾಡುವ ಇಂಥ ಅಕಾರಣ ಭಯಗಳು ದೇಹ-ಮನಸ್ಸಿನ ಇನ್ಯಾವುದೋ ಅಸಮತೋಲನದ ಗಂಭೀರ ಲಕ್ಷಣ.

ಸಮೀಕ್ಷೆಗಳ ಪ್ರಕಾರ ಭಯಕ್ಕೆ ಒಳಗಾಗುವವರಲ್ಲಿ ಮಹಿಳೆಯರೇ ಹೆಚ್ಚು. ಪ್ರಪಂಚದ ಅತ್ಯಂತ ಮುಂದುವರಿದ ರಾಷ್ಟ್ರಗಳಲ್ಲೂ, ಸ್ತ್ರೀಯರಿಗೆ ಹಲವು ಆಯಾಮಗಳ ಭದ್ರತೆಯಿರುವ ದೇಶಗಳಲ್ಲೂ, ಮಹಿಳೆಯರೇ ಹೆಚ್ಚು “ಭೀತಿ’ಗೆ ಒಳಗಾಗುವವರು ಎಂದು ಅಂಕಿಅಂಶಗಳು ಸಾರುತ್ತವೆ. ಮಹಿಳೆಯರ ಮಾನಸಿಕ, ದೈಹಿಕ ರಚನೆಗಳು ಸಹಜವಾಗಿಯೇ ಭಯಹೊಂದುವ ಸಾಧ್ಯತೆಗಳನ್ನು ಹೊಂದಿರುತ್ತವೆ. ಆದ್ದರಿಂದ ಹೆಚ್ಚಿನ ಸ್ತ್ರೀಯರ ಸ್ವಭಾವವೇ ಭಯ ಎನ್ನಬಹುದು. ಆದರೆ, ಇದು ಸಂಪೂರ್ಣ ನಿಜವಲ್ಲ.

“ಭಯ’ – ಮಾನಸಿಕವೇ?: ಸಾಮಾನ್ಯವಾಗಿ ಎಲ್ಲರಿಗೂ ಭಯವಾಗುತ್ತದೆ. ಸಕಾರಣವಾಗಿ ಭಯ ಪಡುವುದು ಸಹಜ ವರ್ತನೆ. ಆದರೆ, ಭಯವನ್ನು ಪ್ರೇರೇಪಿಸಲು ಯಾವುದೇ ಕಾರಣ ಇಲ್ಲದಿದ್ದಾಗಲೂ ಭಯಬೀಳುವುದು ಅಕಾರಣ ಭಯ. ಅಕಾರಣವಾಗಿ ಭಯಪಡುವುದು ಮಾನಸಿಕ ತೊಂದರೆಯೂ ಆಗಿರಬಹುದು. ದೈಹಿಕಸಮಸ್ಯೆಯ ಉಪದ್ರವವೂ ಆಗಿರಬಹುದು.

ಸತತವಾಗಿ ಭಯ: ಭಯವಾಗುವ ಪ್ರಕ್ರಿಯೆಯನ್ನು ಮಾನಸಿಕ ನೆಲೆಯಲ್ಲಿ ಗಮನಿಸಿದರೆ, ಯೋಚನೆಗಳ ಅವ್ಯವಸ್ಥಿತ ಹಿನ್ನೆಲೆ ಅರಿವಾಗುತ್ತದೆ. ಭಯವನ್ನು ಚೋದಿಸುವ ಮತ್ತು ಭಯಕ್ಕೆ ಇರುವ ಕಾರಣವನ್ನು ವಿವೇಚಿಸುವ ಸಾಮರ್ಥ್ಯ ಇಲ್ಲದಿರುವುದು ಕಂಡುಬರುತ್ತದೆ. ಯಾವಾಗಲೂ ಅಭದ್ರತೆ¿ಭಾವದಿಂದ ಹೆದರಿದವರು, ಯೋಚನೆಗಳ ಗೊಂದಲವುಳ್ಳವರು ಭಯಕ್ಕೆ ಒಳಗಾಗುತ್ತಾರೆ. ಸಂಕೀರ್ಣ, ಗೊಂದಲಮಯ ಪರಿಸ್ಥಿತಿಗಳು ಮಹಿಳೆಯರಿಗೆ ಸಹಜವಾಗಿಯೇ ಎದುರಾಗುತ್ತವೆ. ಏಕೆಂದರೆ ಬದುಕಿನ ಹಲವು ಸವಾಲುಗಳನ್ನು ಪುರುಷರಿಗಿಂತ ಮಹಿಳೆಯರು ಹೆಚ್ಚು ಎದುರಿಸುತ್ತಾರೆ. ಭಯವು ಸ್ತ್ರೀಯರಲ್ಲಿ ಹೆಚ್ಚಾಗಿ ಕಾಡುತ್ತದೆ.

ದುರ್ಬಲ ಹೃದಯವೇ ಕಾರಣ
-ಭಯಕ್ಕೂ ಹೃದಯದ ರಚನೆ ಮತ್ತು ಕಾರ್ಯಗಳಿಗೂ ನಿಕಟವಾದ ಸಂಬಂಧವಿದೆ. ಭಾವನೆಗಳು ಹೃದಯದ ಮೂಲಕ ಅಭಿವ್ಯಕ್ತವಾಗುವುದು.

-ಧಮನಿಗಳು, ಹೃದಯನಾಳಗಳಲ್ಲಿ ಹರಿಯುವ ರಸ-ರಕ್ತಧಾತುಗಳು ಮತ್ತು ಹೃದಯದ ಮಾಂಸಖಂಡಗಳು ಭಯದಲ್ಲಿ ಭಾಗವಹಿಸುತ್ತವೆ. ಭಯವನ್ನು ಚೋದಿಸುವಾಗ ಮತ್ತು ಶರೀರದ ಮೂಲಕ ಆಂಗಿಕವಾಗಿ ಅಭಿವ್ಯಕ್ತಿಸುವಾಗ ಪ್ರಮುಖವಾಗಿ ಪಾತ್ರ ವಹಿಸುತ್ತವೆ.

-ಸ್ತ್ರೀಯರ ದೇಹವು ವಯಸ್ಸಿಗನುಗುಣವಾಗಿ ನಿರಂತರ ಬದಲಾಗುತ್ತದೆ. ಪರಿಣಾಮವು ಹೃದಯದ ಮೇಲಾಗುತ್ತದೆ. ಇದು ಭಯವೆಂಬ ತೀವ್ರಪ್ರತಿಕ್ರಿಯೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

-ಸ್ತ್ರೀಯರ ದೇಹರಚನೆ, ಅಂಗಾಂಗಗಳ ವ್ಯವಸ್ಥೆಯು ಅವುಗಳ ಕಾರ್ಯಗಳಿಗೆ ತಕ್ಕಂತೆ ರೂಪುಗೊಂಡಿರುತ್ತದೆ. ನಿರ್ನಾಳಗ್ರಂಥಿಗಳು, ಹಾರ್ಮೋನು, ರಕ್ತದ ಗುಣಾಂತರಗಳು, ಗರ್ಭಾಶಯದ ಬೆಳವಣಿಗೆ, ಋತುಚಕ್ರದ ಆರಂಭ, ಗರ್ಭಧಾರಣೆ, ಪ್ರಸವ, ಮುಟ್ಟುನಿಲ್ಲುವಿಕೆ ಎಲ್ಲವೂ ಸ್ತ್ರೀಯರ ದೈನಂದಿನ ಆಹಾರ, ನಿದ್ರೆ, ಚಟುವಟಿಕೆಗಳ ಪರಿಣಾಮ.

-ಆರೋಗ್ಯ, ಅನಾರೋಗ್ಯಗಳು ಮಾಸಿಕಚಕ್ರದಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಪ್ರತೀ ಅವಸ್ಥೆಯಲ್ಲೂ, ಋತುಚಕ್ರ ನಿಲ್ಲುವಾಗಲೂ, ನಂತರದ ವಯಸ್ಸಿನಲ್ಲೂ ಹಲವು ರೀತಿಯ ದೈಹಿಕಬದಲಾವಣೆಯಿಂದಾಗಿ ಮಾನಸಿಕ ಭಾವಪಲ್ಲಟವಾಗಿ ಕಾಡುತ್ತದೆ.

ಭಯದ ಲಕ್ಷಣಗಳು
-ಉಸಿರಾಟ ತೀವ್ರವಾಗುವುದು.
-ಕಣ್ಣಿನೊಳಗಿನ ಪಾಪೆ ಹಿಗ್ಗುವುದು.
-ಮುಖದೆಡೆಗೆ ರಕ್ತದ ಹರಿವು ತೀವ್ರವಾಗಿ ಮುಖದ ಬಣ್ಣ ವ್ಯತ್ಯಾಸವಾಗುವುದು.
-ರಕ್ತದೊತ್ತಡದಲ್ಲಿ ಏರಿಳಿತ.
– ದೇಹವು ಬಿಸಿಯಾಗುವುದು, ಬೆವರುವುದು.
-ಹೃದಯದ ಬಡಿತ ಹೆಚ್ಚುವುದು.
-ಎದೆಯು ಸೆಳೆಯುವುದು.
-ಮೈ ಚಳಿ- ನಡುಗುವುದು.
-ಕುಸಿದು ಬೀಳುವುದು.
-ಮೂರ್ಛೆ ತಪ್ಪುವುದು.
-ಸತತವಾಗಿ ಭಯದಿಂದ ಪೀಡಿತರಾದ ಸ್ತ್ರೀಯರ ಕೌಟುಂಬಿಕ, ಸಾಮಾಜಿಕ ವರ್ತನೆಗಳು ಬದಲಾಗುತ್ತವೆ. ಆತಂಕ, ತಲ್ಲಣ, ನಿರಾಸಕ್ತಿ, ಖನ್ನತೆಯೂ ಜೊತೆಗೆ ಕಾಡಬಹುದು.

ಭಯಕ್ಕೆ ಕಾರಣಗಳು
-ಸ್ವಾಸ್ಥ್ಯ ಎಂಬುದು ದೈಹಿಕ, ಮಾನಸಿಕ, ಇಂದ್ರಿಯ, ಚೈತನ್ಯಗಳ ಸ್ಥಿರ ಪ್ರಸನ್ನತೆ. ಸ್ವಾಸ್ಥ್ಯಕ್ಕೆ ನಿತ್ಯವೂ ಸೇವಿಸುವ ಆಹಾರ, ನಿದ್ರೆ ಮತ್ತು ದೈನಂದಿನ ಎಲ್ಲಾ ಚಟುವಟಿಕೆಗಳು ಪೂರಕ ಅಥವಾ ಮಾರಕ. ಸತತವಾಗಿ ಕಾಡುವ ಭಯಕ್ಕೆ ನಮ್ಮದೇ ಆಹಾರ, ನಿದ್ರೆಯ, ಸಹವಾಸ, ನಡವಳಿಕೆಯ ಪ್ರಬಲವಾದ ಪ್ರಭಾವವಿದೆ.

-ಯಾವಾಗಲೂ ತಂಗಳು ಆಹಾರ, ಫ್ರಿಡ್ಜ್ನಲ್ಲಿಟ್ಟು ಮತ್ತೆ ಬಿಸಿ ಮಾಡಿದ ಆಹಾರ, ರುಬ್ಬಿದ ದೋಸೆ, ಇಡ್ಲಿ ಹಿಟ್ಟು, ಚಪಾತಿ ಹಿಟ್ಟುಗಳನ್ನು ಫ್ರಿಡ್ಜ್ನಲ್ಲಿ ಕಾದಿಟ್ಟು ಸೇವಿಸುವ ಅಭ್ಯಾಸ, ಅತಿಯಾಗಿ ಖಾರ, ಉಪ್ಪು, ಹುಳಿ ರುಚಿಯ ಆಹಾರಗಳ ಸೇವನೆ ಇಂತಹ ಹಲವು ಅಹಿತ ಆಹಾರಗಳು ಮುಖ್ಯವಾಗಿ ಹೃದಯ, ರಕ್ತ, ಋತುಚಕ್ರ, ಗ್ರಂಥಿಗಳ ಕಾರ್ಯ, ಹಾರ್ಮೋನ್‌ ಸ್ರವಿಸುವಿಕೆಯ ಮೇಲೆ ಬಹಳವಾಗಿ ದುಷ್ಪರಿಣಾಮ ಬೀರುತ್ತವೆ. ಸ್ವಭಾವತಃ ಇವು ರಾಜಸಿಕ, ತಾಮಸಿಕ ಆಹಾರಗಳಾಗಿವೆ. ಇವು ಮಾನಸಿಕ ಅಸ್ವಸ್ಥತೆ ಮತ್ತು ತೀವ್ರವಾದ ಭಯವೆಂಬ ಲಕ್ಷಣಕ್ಕೂ ಕಾರಣ.

-ತಡರಾತ್ರಿಯವರೆಗೂ ಜಾಗರಣೆ, ರಾತ್ರಿಪಾಳಿಯ ಕೆಲಸ, ಹಗಲಿನಲ್ಲೂ ನಿದ್ರಿಸುವ ಅಭ್ಯಾಸದಂಥ ನಿದ್ರಾವ್ಯತ್ಯಯವು ವಿಶೇಷವಾಗಿ ಹೃದಯದ ರಚನೆ ಮತ್ತು ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಸುಖನಿದ್ರೆಯು ಮನಸ್ಸಿನ ಪ್ರಸನ್ನತೆಗೆ ಪ್ರಾಥಮಿಕ ಅಗತ್ಯ.

-ಮದ್ಯಪಾನ, ತಂಬಾಕು, ಅಡಿಕೆ, ಅಮಲು ಪದಾರ್ಥಗಳು, ಸಿಗರೇಟ್‌, ಡ್ರಗ್ಸ್ ಮೊದಲಾದ ಮಾದಕವಸ್ತುಗಳು ನರಮಂಡಲ, ಹೃದಯದ ಮೇಲೆ ಬೀರುವ ದುಷ್ಪರಿಣಾಮವಾಗಿ ಅಕಾರಣಭಯವು ಕಾಣಿಸಿಕೊಳ್ಳಬಹುದು. ಸ್ತ್ರೀಯರಿಗೆ ಈ ಎಲ್ಲಾ ಪದಾರ್ಥಗಳ ಸೇವನೆಯಿಂದ ದೇಹ, ಮನಸ್ಸಿನ ಮೇಲೆ ತ್ವರಿತವಾಗಿ ದುಷ್ಪರಿಣಾಮ ಆಗುತ್ತದೆ.

-ಸದಾ ಯಾರೊಟ್ಟಿಗೆ ನಾವು ಒಡನಾಡುತ್ತೇವೆ ಮತ್ತು ಹೇಗೆ ಬದುಕಿನ ವೃತ್ತಿ, ಪ್ರವೃತ್ತಿಗಳನ್ನು ಆಯ್ದುಕೊಂಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಉದ್ಯೋಗ ಮತ್ತು ಮನೆಯನ್ನು ಒಟ್ಟಿಗೇ ನಿರ್ವಹಿಸುವ ಮಹಿಳೆಯರ ದೈಹಿಕ, ಮಾನಸಿಕ ಸ್ಥಿತಿ ಮತ್ತು ಒಬ್ಬಂಟಿ ಗೃಹಿಣಿಯರ ಪರಿಸ್ಥಿತಿ ಬೇರೆ ಬೇರೆ. ಇವುಗಳಲ್ಲಿ ಒಂಟಿತನ, ಸಾಮಾಜಿಕ ಅಭದ್ರತೆ, ಮಾನಸಿಕ ತೊಳಲಾಟಗಳ ಅಸಮರ್ಪಕ ನಿರ್ವಹಣೆ ಮತ್ತು ಸಂಕೀರ್ಣತೆ ಭಯದ ತೀವ್ರತೆಗೆ ಕಾರಣವಾಗಬಹುದು.

“ಭಯ’ವು ಸಹಜವ್ಯಕ್ತಿತ್ವವೇ?: ಸಹಜವಾಗಿ ಎಲ್ಲರೂ ಭಯ ಪಡುತ್ತೇವೆ. ಭಯವು ಕ್ಷಣಿಕವಾಗಿದ್ದು, ನಿವಾರಣೆಯಾದರೆ ಋಣಾತ್ಮಕ ಪರಿಣಾಮ ಬೀರುವುದಿಲ್ಲ. ಕೆಲವು ದೈಹಿಕ, ಮಾನಸಿಕ ಸ್ವಭಾವದ ವ್ಯಕ್ತಿಗಳು ಕದಿಯಬಲ್ಲರು, ಸುಳ್ಳು ಹೇಳುವರು, ಅಸಮಂಜಸ ವಿಷಯಕ್ಕೂ ಭಯಪಡುವರು, ಚಿಂತನೆಗಳ ಅಸ್ಥವ್ಯಸ್ತತೆ ಉಳ್ಳವರು. ಇಂತಹವರನ್ನು ವಾತಪ್ರಕೃತಿಯವರೆಂದೂ, ರಾಜಸಿಕಕಾಯದವರೆಂದೂ ಆಯುರ್ವೇದವು ಗುರುತಿಸುತ್ತದೆ. ಇಂತಹ ಸ್ವಭಾವವು ತೀವ್ರತೆಗೆ ಹೋಗಬಹುದು. ಹುಟ್ಟುತ್ತಲೇ ಬರುವ ಈ ಸ್ವಭಾವಗಳ ನಿರ್ವಹಣೆಗೆ ಸತತ ಪ್ರಯತ್ನ ಅವಶ್ಯ.

“ಭಯ’ ಯಾವ ರೋಗಲಕ್ಷಣ?
-ಋತುಸ್ರಾವದ ಅನಿಯಮಿತ ಹರಿವು.
-ಮಿತಿಮೀರದ ಮುಟ್ಟಿನ ರಕ್ತಸ್ರಾವ.
-ಮಾಸಿಕವಾಗಿ ಪದೇ ಪದೆ ರಕ್ತಸ್ರಾವ.
-ಥೈರಾಯ್ಡ್ ಗ್ರಂಥಿ, ಹಾರ್ಮೋನ್‌ಗಳ ಅನಿಯಮಿತ ಕಾರ್ಯ ಇವು ಕೂಡಾ ಭಯ ಎಂಬ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದು.
-ಹೃದಯದಲ್ಲಿ ಕ್ಷಯಾತ್ಮಕ (degenerative), ಅವರೋಧಾತ್ಮಾಕ(obstructive), ಉರಿಯೂತ(inflammatory) ಬದಲಾವಣೆಗಳು ಹೃದ್ರೋಗವು ವ್ಯಕ್ತವಾಗುವ ಹಂತದಲ್ಲಿ ಅಕಾರಣಭಯ ಎಂಬ ಲಕ್ಷಣವನ್ನು ಕಾಣಿಸುತ್ತವೆ.
-ಉನ್ಮಾದ, ಅಪಸ್ಮಾರಗಳಂತಹ ಮಾನಸಿಕ ವ್ಯಾಧಿಗಳಲ್ಲಿ ಚೋದನೆಗೆ ಯಾವ ಬಾಹ್ಯಕಾರಣವೂ ಇಲ್ಲದೆ ಭಯವಾಗುತ್ತದೆ.

ಔಷಧಗಳಿಂದ ಅಕಾರಣ ಭಯ
-ನರಮಂಡಲ, ಹೃದಯ, ಶ್ವಾಸಕೋಶಗಳ ಹಲವು ಖಾಯಿಲೆಗಳಲ್ಲಿ ಬಳಸುವ ಕೆಲವು ಔಷಧಗಳ ಸತತ ಸೇವನೆಯಿಂದ ಸ್ತ್ರೀಯರಲ್ಲಿ ಅಕಾರಣ ಭಯವು ಕಾಡಬಹುದು.

-ಉತ್ತೇಜಕ ಕೆಫೀನ್‌, ಸ್ಟಿರಾಯ್ಡ, ಗರ್ಭನಿರೋಧಕ ಹಾರ್ಮೋನಲ್‌ ಪಿಲ್ಸ್, ಮುಟ್ಟನ್ನು ಮುಂದೂಡುವ, ಬೇಗನೆ ಆಗುವಂತೆ ಮಾಡುವ ಔಷಧಗಳ ದುಷ್ಪರಿಣಾಮವಾಗಿ ಮಾನಸಿಕ ತೊಂದರೆಗಳು ಕಾಣಿಸಬಹುದು.

-ನಿದ್ರಾಹೀನತೆ, ಖನ್ನತೆ, ಆತಂಕ, ವ್ಯಕ್ತಿತ್ವದ ತೊಂದರೆಗಳಿಗೆ ಸೇವಿಸುವ ಹಲವು ಔಷಧಗಳು ಭಯವನ್ನು ಮೊದಮೊದಲು ಕಡಿಮೆ ಮಾಡಿ ನಂತರ ಅಕಾರಣಭಯಕ್ಕೆ ಕಾರಣವಾಗಬಹುದು.

“ಭಯ’ವನ್ನು ನಿವಾರಿಸಬಹುದೇ?
-ಭಯವು ಇನ್ಯಾವುದೋ ದೈಹಿಕ, ಮಾನಸಿಕ ಖಾಯಿಲೆಯ ಲಕ್ಷವಾಗಿದ್ದಾಗ ಆಯಾ ಸಮಸ್ಯೆಯ ಚಿಕಿತ್ಸೆಯಲ್ಲಿಯೇ ನಿವಾರಣೆಯಾಗುತ್ತದೆ.

-ಋತುಸ್ರಾವದ ಏರುಪೇರು ಮತ್ತು ನಿರ್ನಾಳಗ್ರಂಥಿಗಳ ಸ್ರವಿಸುವಿಕೆ, ಹಾರ್ಮೋನುಗಳ ನಡುವೆ ಸಂಬಂಧವಿದೆ. ಋತುಸ್ರಾವದ ಸಮಸ್ಯೆಗಳು ಸರಿಯಾದರೆ ಅಕಾರಣವಾಗಿ ಕಾಣಿಸುವ ಹಲವು ಫೋಬಿಯಾಗಳು ನಿವಾರಣೆಯಾಗುತ್ತವೆ.

-ಹೃದ್ರೋಗದ ಚಿಕಿತ್ಸೆಯಲ್ಲಿ ಭಯವೆಂಬ ಲಕ್ಷಣವೂ ಗುಣವಾಗುತ್ತದೆ.

-ಒಳ್ಳೆಯ ಸ್ನೇಹಪರ ವಾತಾವರಣ, ಸಂಬಂಧ, ಕುಟುಂಬ- ಇವು ಮಹಿಳೆಯರ ಭಯದ ತೀವ್ರತೆಯನ್ನು ಸಾಕಷ್ಟು ಕಡಿಮೆ ಮಾಡಬಲ್ಲದು.

-ನಿಯಮಿತ ಆಪ್ತಸಲಹೆಗಳು, ಮಾನಸಿಕ ಚಿಂತನೆಗಳನ್ನು ಕ್ರಮಬದ್ಧಗೊಳಿಸುವ ಪ್ರಯತ್ನಗಳು ಸಹಾಯವಾಗುತ್ತವೆ.

-ಔಷಧಗಳ ದುಷ್ಪರಿಣಾಮವಾಗಿ ಉಂಟಾಗುವ ಭೀತಿ, ಆತಂಕ, ಖನ್ನತೆಗಳನ್ನು ಪರಿಹರಿಸಲು ಮತ್ತೆ ಔಷಧಗಳನ್ನು ಸೇವಿಸುವುದು ಒಂದು ಬಗೆಯ ಸುಳಿಯಲ್ಲಿ ಸಿಕ್ಕಂತೆ. ಆಹಾರ, ನಿದ್ರೆ, ಚಟುವಟಿಕೆಗಳಲ್ಲಿರುವ ಕಾರಣಗಳನ್ನು ಸರಿಪಡಿಸಿಕೊಂಡು ಹಾನಿಕಾರಕ ಔಷಧಗಳ ಸೇವನೆಯಿಂದ ದೂರವಾಗಬಹುದು.

-ಸಕಾಲದಲ್ಲಿ ತಾಜಾಆಹಾರ, ಸಕಾಲದಲ್ಲಿ ರಾತ್ರಿನಿದ್ರೆ, ಹಿತಕರವಾದ ಚಟುವಟಿಕೆಗಳು ಆರೋಗ್ಯಕ್ಕೆ ಮೂಲ. ಹೀಗೆ ವ್ಯವಸ್ಥಿತವಾಗಿ ಬದುಕುವುದರಿಂದ, ತೀವ್ರಭಯವನ್ನು ತರುವ ದೈಹಿಕ, ಮಾನಸಿಕ ಪರಿಸ್ಥಿತಿಯಿಂದ ಪಾರಾಗಬಹುದು.

* ಡಾ. ಪಲ್ಲವಿ ಹೆಗಡೆ, ಆಯುರ್ವೇದ ತಜ್ಞೆ

ಟಾಪ್ ನ್ಯೂಸ್

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.