ಡಬ್ಬಿಂಗ್, ವಾಯ್ಸ ಓವರ್‌ನಲ್ಲಿ ಹಲವು ಅವಕಾಶ
Team Udayavani, Nov 6, 2019, 4:49 AM IST
ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಂಪಾದಿಸುವ ಅನೇಕ ದಾರಿಗಳಿವೆ. ಸ್ವಲ್ಪ ಆದಾಯದ ಜತೆ ಹೊಸ ಅನುಭವಗಳನ್ನು ಪಡೆಯುವ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡಾಗ, ಅವರ ಮುಂದಿನ ಜೀವನಕ್ಕೆ ದಾರಿಗಳು ತೆರೆದುಕೊಳ್ಳುತ್ತವೆ. ಡಬ್ಬಿಂಗ್ ಮತ್ತು ವಾಯ್ಸ… ಓವರ್ ಕ್ಷೇತ್ರ ಅಂತಹ ಒಂದು ದಾರಿ.
ಬೇಡಿಕೆ ಹೆಚ್ಚು
ಹೆಚ್ಚುತ್ತಿರುವ ಮನೋರಂಜನೆ ಬೇಡಿಕೆ, ಹಿಂದೆಂದಿಗಿಂತಲೂ ಜನರನ್ನು ಸಿನೆಮಾ, ಧಾರಾವಾಹಿಗಳ ಕಡೆ ಸೆಳೆಯುತ್ತಿದೆ. ಹೀಗಾಗಿ ಅಲ್ಲಿ ಅವಕಾಶಗಳು ಹೆಚ್ಚು. ಬಹುಪಾಲು ಈ ಬೇಡಿಕೆಗಳನ್ನು ಸೀಮಿತ ಸಂಖ್ಯೆಯ ವಾಯ್ಸ…ಓವರ್ ಕಲಾವಿದರೇ ಪೂರೈಸುತ್ತಿದ್ದು, ವಿದ್ಯಾರ್ಥಿಗಳೂ ತೊಡಗಿಸಿಕೊಳ್ಳಬಹುದು.
ಸಾಮಾನ್ಯವಾಗಿ ಡಬ್ಬಿಂಗ್ ಮತ್ತು ವಾಯ್ಸ… ಓವರ್ ಕಲಾವಿದರು ಎರಡನ್ನೂ ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಹಿನ್ನೆಲೆ ಧ್ವನಿ ನೀಡಿ ಪಳಗಿ ನಂತರ ಡಬ್ಬಿಂಗ್‌ಗೆ ಇಳಿದರೆ ಅನುಭವ ಮತ್ತು ಬೇಡಿಕೆ ಹೆಚ್ಚು. ಈ ಕ್ಷೇತ್ರದಲ್ಲಿ ಸಾರ್ವಕಾಲಿಕ ಉದ್ಯೋಗ ಸಾಧ್ಯವಿಲ್ಲದ್ದರಿಂದ ಹವ್ಯಾಸಿ ಕಲಾವಿದರಾಗಿ ಕೆಲಸ ಮಾಡಬಹುದು. ಸಿನೆಮಾ, ಜಾಹೀರಾತು, ಕಿರುಚಿತ್ರ, ಸಾಕ್ಷ್ಯಚಿತ್ರ, ಧಾರಾವಾಹಿ ಇತ್ಯಾದಿ ಕ್ಷೇತ್ರಗಳಲ್ಲಿ ಡಬ್ಬಿಂಗ್‌ಗೆ ಅವಕಾಶ ಹೆಚ್ಚು.
ವಿದ್ಯಾರ್ಥಿಗಳಿಗೆ ಅವಕಾಶ
ಸಿನೆಮಾ, ಧಾರವಾಹಿಗಳಲ್ಲಿ ಮಕ್ಕಳ ಪಾತ್ರಕ್ಕೆ ಕಂಠದಾನ ಮಾಡಲು ಮಕ್ಕಳ ಕೊರತೆ ಇದ್ದೇ ಇರುತ್ತದೆ. ಹಾಗೆಯೇ, ಕಾಟೂìನ್ ಮತ್ತು ಅನಿಮೇಷನ್‌ಗಳಲ್ಲೂ ಬೇಡಿಕೆ ಹೆಚ್ಚು. ವೆಬ್ ಸೀರೀಸ್‌ಗಳಲ್ಲಂತೂ ಬೇಡಿಕೆ ತೀವ್ರವಾಗಿದೆ.
ಸಂಭಾವನೆ
ಕಂಠದಾನ ಕಲಾವಿದರಿಗೆ ಗಂಟೆ ಲೆಕ್ಕದಲ್ಲಿ ಅಥವಾ ಒಂದು ಅಸೈನ್ಮೆಂಟ್ ಲೆಕ್ಕದಲ್ಲಿ ಹಣ ಸಂದಾಯವಾಗುತ್ತದೆ. ಅನುಭವ ಮತ್ತು ಕೆಲಸದ ವೇಗ, ನೈಪುಣ್ಯ ಹೆಚ್ಚಾದಂತೆ ಸಂಭಾವನೆಯೂ ಹೆಚ್ಚುತ್ತದೆ.
ತರಬೇತಿ
ಕಂಠದಾನ ಕಲಾವಿದರಿಗೆ ತರಬೇತಿ ಕೊಡುವ ಅನೇಕ ಸಂಸ್ಥೆಗಳಿವೆ. ವಿದ್ಯಾರ್ಥಿಗಳಿಗೆ ರಜಾದಿನದ ಕೋರ್ಸ್‌ಗಳೂ ಲಭ್ಯವಿರುತ್ತವೆ. ಈ ಕೋರ್ಸ್ ಗಳಲ್ಲಿ ಮೂಲ ವಿಷಯಗಳ ತರಬೇತಿ ಸಿಗುತ್ತದೆ. ಕೆಲವೊಮ್ಮೆ ಚಿತ್ರ ನಿರ್ದೇಶಕರೇ ತಮ್ಮ ವತಿಯಿಂದ ಇಂತಹ ತರಬೇತಿ ಏರ್ಪಡಿಸಿ ತಮಗೆಬೇಕಾದ ಕಂಠದಾನ ಕಲಾವಿದರನ್ನು ಆಯ್ಕೆ ಮಾಡುತ್ತಾರೆ.
ಅರ್ಹತೆಗಳು
1 ಸ್ವರ ಶುದ್ಧಿ ಇರಬೇಕು
2 ಭಾಷಾ ಜ್ಞಾನ ಚೆನ್ನಾಗಿರಬೇಕು
3 ಸ್ವರ ಏರಿಳಿತದ ಅರಿವಿರಬೇಕು
4 ಭಾಷೆಯ ಬೇರೆ, ಬೇರೆ ಆವೃತ್ತಿಗಳ ಜ್ಞಾನವಿರಬೇಕು.
5 ಲಿಪ್ ಸಿಂಕ್ ಮತ್ತು ತುಟಿ ಓದು ತಿಳಿದಿರಬೇಕು
6 ಮನೋಜ್ಞ ಅಭಿನಯಕ್ಕೆ ಸರಿ ಹೊಂದುವ ಸ್ವರ ತೀವ್ರತೆ ಇರಬೇಕು.
7 ವಾಯ್ಸ… ಓವರ್‌ಗೆ ಸ್ವತಂತ್ರ ಶೈಲಿ ಅಪೇಕ್ಷಣೀಯ.
ಚಿರನ್ಮಯಿ. ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.