ಸಂತೆ ಮೈದಾನ ಬಳಕೆಯೇ ಆಗ್ತಿಲ್ಲ !
ಲಕ್ಷ್ಮೀಸಾಗರ ಗ್ರಾಮದಲ್ಲಿ ಸಂತೆ ಮೈದಾನ ನಿರ್ಮಿಸಿ ನಾಲ್ಕು ವರ್ಷವಾದ್ರೂ ಜನರೇ ಬರ್ತಿಲ್ಲ
Team Udayavani, Nov 6, 2019, 3:31 PM IST
ಎಚ್.ಬಿ. ನಿರಂಜನಮೂರ್ತಿ
ಭರಮಸಾಗರ: ಲಕ್ಷ್ಮೀಸಾಗರ ಗ್ರಾಮದಿಂದ ಎರಡು ಕಿಮೀ ದೂರದಲ್ಲಿ ಆರು ಲಕ್ಷ ರೂ. ವ್ಯಯಿಸಿ ಸುಸಜ್ಜಿತವಾದ ಸಂತೆ ಮೈದಾನದ ವ್ಯವಸ್ಥೆ ಮಾಡಿಕೊಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರದ ಬಳಿ ಕಟ್ಟಿ ನಾಲ್ಕು ವರ್ಷಗಳು ಕಳೆದರೂ ಬಳಕೆಯೇ ಆಗುತ್ತಿಲ್ಲ.
2016-17 ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಲಕ್ಷ್ಮೀಸಾಗರ ಗ್ರಾಮದ ಸಂತೆ ಮೈದಾನವನ್ನು ಚಿತ್ರದುರ್ಗ ನಿರ್ಮಿತಿ ಕೇಂದ್ರದವರು ನಿರ್ಮಾಣ ಮಾಡಿ ಬರೋಬ್ಬರಿ ನಾಲ್ಕು ವರ್ಷಗಳೇ ಕಳೆದರೂ ಸಂತೆ ಮೈದಾನ ಉದ್ಘಾಟನೆ ಭಾಗ್ಯವನ್ನೇ ಕಂಡಿಲ್ಲ. ಗ್ರಾಮದಿಂದ ಬಹು ದೂರ ಇರುವದರಿಂದ ಬಳಕೆಗೆ ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಇಲ್ಲಿನ ಸಂತೆ ಮೈದಾನದ ಬಳಿ ತೆರಳಲು ಸುಸಜ್ಜಿತ ರಸ್ತೆ ಕೂಡ ಇಲ್ಲ. ಈಗಾಗಲೇ ಬಿರುಕು ಬಿಟ್ಟ ಸಂತೆ ಕಟ್ಟೆಯ ಹಲವು ಭಾಗಗಳಲ್ಲಿ ತೇಪೆ ಹಾಕಲಾಗಿದೆ. ಇನ್ನೂ ಈ ಕಾಮಗಾರಿಯ ಕುರಿತು ಮಾಹಿತಿ ನೀಡಬೇಕಾದ ನಾಮಫಲಕ ಶಕ್ತಿಯಿಲ್ಲದೆ ನೆಲಕ್ಕುರುಳಿ ಬಿಟ್ಟಿದೆ. ಸಂತೆ ಕಟ್ಟೆಯ ಸುತ್ತಲೂ ಮಳೆ ನೀರು ನಿಂತು ಸುತ್ತಲ ವಾತಾವರಣ ಸಂತೆ ಕಟ್ಟೆಗೇ ಎಷ್ಟು ಸೂಕ್ತ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.
ಇಲ್ಲಿನ ಸಂತೆ ಮೈದಾನ ಹತ್ತಿರದ ನಾಲ್ಕಾರು ಹಳ್ಳಿಗಳಿಗೆ ಪ್ರಯೋಜನವಾಗಬಹುದು ಎಂಬ ದೂರದೃಷ್ಟಿ ಇದ್ದಿರಬಹುದು ಎನ್ನುವದಾದರೆ ಈಗಾಗಲೇ ಇದರ ಬಳಕೆಗೆ ಸಂಬಂ ತರು ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಸ್ಥಳೀಯರು ಆರೋಪಿಸುತ್ತಾರೆ.
ಊರ ಹತ್ತಿರ ಕಟ್ಟಿದ್ದರೆ ನಮಗೆ ಒಂದಲ್ಲ ಒಂದು ಕಾಲಕ್ಕೆ ಬಳಕೆಯಾಗುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಹೈವೇ ದಾಟುವುದೇ ದೊಡ್ಡ ಸಾಹಸವಾಗಿತ್ತು. ಇದೀಗ ಕೆಳ ಸೇತುವೆ ಕಾಮಗಾರಿ ನಡೆದಿದೆ. ಹೈವೇ ದಾಟಿ ಇನ್ನೊಂದು ಬದಿಯಲ್ಲಿರುವ ಸಂತೆಕಟ್ಟೆಗೆ ಸುಲಭವಾಗಿ ಬರಬಹುದು ಎನ್ನಲಾಗುತ್ತಿದೆ.
ಅಧಿಕಾರಿಗಳು ಇಚ್ಚಾಶಕ್ತಿ ಪ್ರದರ್ಶಿಸಿದರೆ ಇದರ ಬಳಕೆಗೆ ಕ್ರಮ ಕೈಗೊಳ್ಳಬಹುದು ಎಂಬುದು ಸ್ಥಳೀಯ ಅಭಿಪ್ರಾಯ.
ರಸ್ತೆ ಬದಿಯಿಂದ ಸುಮಾರು 200 ಮೀಟರ್ ದೂರದ ಕಟ್ಟೆ ತಲುಪುವ ಸ್ಥಳ ತೀರ ಹದಗೆಟ್ಟಿದೆ. ಜೌಗು ಭೂಮಿ ಇದಾಗಿರುವುದರಿಂದ ಇಲ್ಲಿ ಮಳೆ ನೀರು ಬಸಿಯುತ್ತಿರುತ್ತದೆ. ಇಲ್ಲಿನ ಸ್ಥಳವನ್ನು ಅದ್ಯಾವ ಅಧಿಕಾರಿಗಳು ಇತರರು ಸೇರಿ ಆಯ್ಕೆ ಮಾಡಿದರೋ, ಇದೊಂದು ಮೇಲ್ನೋಟಕ್ಕೆ ಕಾಟಾಚಾರದ ಕಾಮಗಾರಿಯಾಗಿಬಿಟ್ಟಿದೆ. ಇದರಿಂದ ಜನರು ಕಟ್ಟಿದ ತೆರಿಗೆ ಹಣದಲ್ಲೇ ಕಟ್ಟಿದ ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿಯೊಂದು ಬಳಕೆಯಿಲ್ಲದೆ ವ್ಯರ್ಥವಾಗುತ್ತಿರುವದು ಮಾತ್ರ ವಿಪರ್ಯಾಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.