ಕೃಷಿ ವಿವಿಯಲ್ಲಿ ನಿರ್ಮಾಣವಾಗಲಿದೆ ಆಕರ್ಷಕ ಮುಖ್ಯದ್ವಾರ
Team Udayavani, Nov 6, 2019, 4:15 PM IST
ರಾಯಚೂರು: ಇಷ್ಟು ದಿನ ಕೇವಲ ನಾಮಫಲಕದಿಂದ ಕಂಡು ಬರುತ್ತಿದ್ದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಇನ್ನು ಮುಂದೆ ತನ್ನದೇಯಾದ ಭಿನ್ನ ಕಲಾಕೃತಿಯೊಂದಿಗೆ ಸೆಳೆಯಲಿದೆ. ವಿವಿ ಮುಖ್ಯ ದ್ವಾರಬಾಗಿಲಿನಲ್ಲಿ ವಿಶೇಷ ಕಲಾಕೃತಿಗಳನ್ನು ನಿರ್ಮಿಸಲು ಆಡಳಿತ ಮಂಡಳಿ ಮುಂದಾಗಿದೆ.
ಕೃಷಿ ವಿವಿ ರೈತಪರ ಚಟುವಟಿಕೆಗಳನ್ನು ಆಧರಿಸಿ ಕಾರ್ಯನಿರ್ವಹಿಸುತ್ತಿದೆ. ಅನೇಕ ಸಂಶೋಧನೆಗಳು, ಹೊಸ ಹೊಸ ತಳಿಗಳ ಆವಿಷ್ಕಾರಗಳನ್ನು ಮಾಡುತ್ತಲೇ ಬಂದಿದೆ. ಅದರ ಜತೆಗೆ ಪ್ರತಿ ವರ್ಷ ಕೃಷಿಮೇಳ ನಡೆಸುವ ಮೂಲಕ ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮವೂ ನಡೆಯುತ್ತಿದೆ. ಈಗ ನಾಮಫಲಕಗಳ ಹೊರತಾಗಿಸಿ ಕೃಷಿ ವಿವಿಯ ಸಾಂಕೇತಿಕ ಚಿತ್ರಣಗಳಾಗಲಿ, ಕಲಾಕೃತಿಗಳಾಗಲಿ ಇಲ್ಲ. ಇದನ್ನು ಮನಗಂಡ ಕುಲಪತಿ ಕೆ.ಎನ್.ಕಟ್ಟಿಮನಿ ಅಂದಾಜು 14 ಲಕ್ಷ ರೂ. ವೆಚ್ಚದಲ್ಲಿ ವಿಭಿನ್ನ ಕಲಾಕೃತಿ ರಚನೆಗೆ ಮುಂದಾಗಿದ್ದಾರೆ. ಈಗಾಗಲೇ ಟೆಂಡರ್ ಹಂತದವರೆಗೆ ಪ್ರಕ್ರಿಯೆ ಮುಂದುವರಿದಿದ್ದು, ಏನೇನು ರಚಿಸಬೇಕು ಎಂಬ ನೀಲನಕ್ಷೆಯನ್ನು ಕೂಡ ತಯಾರಿಸಲಾಗಿದೆ.
ಹೀಗಿರಲಿದೆ ಮುಖ್ಯ ದ್ವಾರ: ಈಗ ದೊಡ್ಡ ದೊಡ್ಡ ಗೋಡೆಗಳು, ಅದರ ಮೇಲೆ ಒಂದೆಡೆ ಕನ್ನಡದಲ್ಲಿ ಮತ್ತೂಂದೆಡೆ ಇಂಗ್ಲಿಷ್‌ನಲ್ಲಿ ನಾಮಫಲಕಗಳಿವೆ. ಆದರೆ, ಈಗ ರೂಪುಗೊಂಡ ನೀಲನಕ್ಷೆ ಪ್ರಕಾರ ಕಿಲಾರಿ ತಳಿಯ ಎರಡು ಎತ್ತುಗಳಿಂದ ಜಮೀನು ಬಿತ್ತನೆ ಮಾಡುತ್ತಿರುವ ರೈತ. ಆತನ ಹಿಂದೆ ಸಾಗುತ್ತಿರುವ ರೈತ ಮಹಿಳೆ ಮಾದರಿ ನಿರ್ಮಿಸಲಾಗುತ್ತಿದೆ. ತಕ್ಷಣಕ್ಕೆ ನೋಡಿದರೆ ನೈಜವಾಗಿ ಕೆಲಸ ನಡೆದಿದೆಯೋ ಎನ್ನುವ ಭಾವ ಬರಬೇಕು ಎಂಬುದು ಅವರ ಅಭಿಪ್ರಾಯ. ಅದರ ಜತೆಗೆ ಎರಡು ಗೇಟ್‌ಗಳ ಬಳಿ ಹಳೇ ಪದ್ಧತಿಯಲ್ಲಿ ಸುಗ್ಗಿ ಮಾಡುತ್ತಿರುವ ರೈತರ ಕಲಾಕೃತಿಗಳು, ಆಧುನಿಕ ಕೃಷಿ ಪರಿಕರಗಳನ್ನು ನಿರ್ಮಿಸಲಾಗುತ್ತಿದೆ.
ಒಂದು ಬದಿ ತುಂಗಭದ್ರಾ, ಮತ್ತೂಂದು ಬದಿ ಕೃಷ್ಣೆ ಹೆಸರು ಬರೆಯಿಸಿ ನದಿಗಳ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಕೊನೆಯದಾಗಿ ಎರಡು ಬದಿಯ ತುದಿಗಳಲ್ಲಿನ ಗೋಡೆಗಳಿಗೆ ಕೃಷಿ ವಿವಿ ಸಂಶೋಧಿಸಿದ ಎಲ್ಲ ತಳಿಗಳ ಚಿತ್ರಗಳನ್ನು ಬಿಡಿಸಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ಆ ದೀಪಗಳು ಸೋಲಾರ್ ಶಕ್ತಿಯಿಂದ ಉರಿಯುವ ವ್ಯವಸ್ಥೆ ಮಾಡಲಿದ್ದು, ರಾತ್ರಿಯಾಗುತ್ತಿದ್ದಂತೆ ತನ್ನಿಂತಾನೆ ದೀಪಗಳು ಹೊತ್ತಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ರಾತ್ರಿ ಹೊತ್ತಿನಲ್ಲಿಯೂ ಈ ಕಲಾಕೃತಿ ನೋಡುಗರನ್ನು ಆಕರ್ಷಿಸಬೇಕು ಎಂಬುದು ಅವರ ಅನಿಸಿಕೆ.
14 ಲಕ್ಷ ರೂ. ವೆಚ್ಚ: ಒಂದೊಂದು ಕೆಲಸ ಬೇರೆ ಬೇರೆ
ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಚಿಂತನೆಯಿದ್ದು, ಟೆಂಡರ್ ಪ್ರಕ್ರಿಯೆ ನಡೆದಿದೆ. ಕಲಾಕೃತಿಗಳ ರಚನೆಗೆ ಒಂದು ಸಂಸ್ಥೆ, ಚಿತ್ರಗಳನ್ನು ಬಿಡಿಸಲು ಮತ್ತೂಂದು ಸಂಸ್ಥೆಗೆ ನೀಡಲಾಗುತ್ತಿದೆ. ಟೆಂಡರ್ ಕರೆಯಲಾಗಿದೆ. ಗುಡಿಕೋಟೆ ಕಲಾವಿದರು, ಸ್ಥಳೀಯ ಕಲಾವಿದರು, ಆಂಧ್ರ ಮೂಲದ ಕಲಾವಿದರಿಗೆ ಮಾಹಿತಿ ನೀಡಲಾಗಿದೆ. ಕಡಿಮೆ ದರದಲ್ಲಿ ಉತ್ತಮ ಕಲಾಕೃತಿ ನೀಡುವವರಿಗೆ ಆದ್ಯತೆ ನೀಡಲಾಗುವುದು ಎನ್ನುತ್ತಾರೆ ಕುಲಪತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.