ಎಕ್ಸ್-ರೇ ಹಣೆಯಲ್ಲಿ ಭವಿಷ್ಯ
Team Udayavani, Nov 7, 2019, 3:19 AM IST
ಚೀಟಿ ತೆರೆಯದೆಯೇ ಅದರೊಳಗೇನಿದೆ ಎನ್ನುವುದನ್ನು ಹೇಳುವ ಮ್ಯಾಜಿಕ್ ಇದು.
ಪ್ರದರ್ಶನ:
ಸಭೆಯಲ್ಲಿ ಹತ್ತು ಮಂದಿ ಪ್ರೇಕ್ಷಕರಿಗೆ ಒಂದೊಂದು ಚೀಟಿ ಮತ್ತು ಒಂದೊಂದು ಖಾಲಿ ಕವರನ್ನು ಕೊಟ್ಟು ಯಾವುದಾದರೂ ಪ್ರಶ್ನೆಯನ್ನು ಬರೆದು ಚೀಟಿಯನ್ನು ಮಡಚಿ ಕವರಿನಲ್ಲಿ ಇಡಲು ಹೇಳುತ್ತಾನೆ. ಅವನು ಚೀಟಿ ನೋಡದೆಯೇ ಆ ಪ್ರಶ್ನೆಗಳಿಗೆ ಉತ್ತರವನ್ನು ಹೇಳುತ್ತಾನೆ.
ತಂತ್ರ:
ಈ ಹತ್ತು ಮಂದಿಯಲ್ಲಿ ಒಬ್ಟಾತ ನಿಮ್ಮ ಸಹಾಯಕನೇ ಆಗಿರಬೇಕು (ಇದು ನಿಮ್ಮ ಪ್ರೇಕ್ಷಕರಾರಿಗೂ ಗೊತ್ತಾಗಬಾರದು) ಮತ್ತು ಆತ ಬರೆಯುವ ಪ್ರಶ್ನೆಯನ್ನು ನೀವು ಮೊದಲೇ ತಿಳಿದಿರಬೇಕು. ಉದಾಹರಣೆಗೆ ಆತನ ಪ್ರಶ್ನೆ “ನಾನು ಈ ವರ್ಷ ಪಾಸಾಗುತ್ತೇನೋ, ಇಲ್ವೋ?’ ಎಂದಿಟ್ಟುಕೊಳ್ಳಿ. ನೀವು ಪ್ರೇಕ್ಷಕರಿಂದ ಕವರುಗಳನ್ನು ಸಂಗ್ರಹಿಸುವಾಗ ನಿಮ್ಮ ಸಹಾಯಕನ ಕವರನ್ನು ಕೆಳಗಡೆ ಇಟ್ಟು ಉಳಿದವನ್ನು ಅದರ ಮೇಲೆ ಜೋಡಿಸಬೇಕು. ನೀವು ಸ್ಟೇಜಿನ ಮೇಲೆ ಬಂದು ಎಲ್ಲಾ ಕವರುಗಳನ್ನು ಮೇಜಿನ ಮೇಲೆ ಇಡಿ. ಈಗ ನಿಮ್ಮ ಸಹಾಯಕನ ಕವರು ಕೆಳಗಡೆ ಇರುತ್ತದೆ. ಮೇಲಿನ ಕವರನ್ನು ತೆಗೆದು ನಿಮ್ಮ ಹಣೆಯ ಹತ್ತಿರ ಹಿಡಿಯಿರಿ. ಧ್ಯಾನ ಮಾಡುತ್ತಿರುವವರಂತೆ ನಟಿಸಿ, ಇದರ ಒಳಗೆ ಇರುವ ಪ್ರಶ್ನೆ “ನಾನು ಈ ವರ್ಷ ಪಾಸಾಗುತ್ತೇನೋ, ಇಲ್ವೋ?’ ಅಂತ ನಿಮ್ಮ ಸಹಾಯಕ ಬರೆದಿಟ್ಟ ಪ್ರಶ್ನೆಯನ್ನು ಹೇಳಿ ಕವರಿನ ಒಳಗಿರುವ ಚೀಟಿಯನ್ನು ನೋಡಿ “ಯೆಸ್, ಕರೆಕ್ಟ್. ಯಾರು ಈ ಪ್ರಶ್ನೆ ಕೇಳಿದ್ದು?’ ಅಂತ ಹೇಳುತ್ತಾ ಚೀಟಿಯನ್ನು ಕವರಿನ ಒಳಗೆ ಹಾಕಿ ಕಿಸೆಗೆ ಹಾಕಿಕೊಳ್ಳಿ. ನಿಮ್ಮ ಸಹಾಯಕ ಎದ್ದು ನಿಲ್ಲುತ್ತಾನೆ. “ಅವನು ಚೆನ್ನಾಗಿ ಓದಿದ್ರೆ ಪಾಸ್ ಆಗೋದು ಗ್ಯಾರೆಂಟಿ’ ಅಂತ ತಮಾಷೆಯ ಉತ್ತರ ಕೊಟ್ಟು ಎರಡನೆಯ ಕವರನ್ನು ನಿಮ್ಮ ಹಣೆ ಹತ್ತಿರ ಇಟ್ಟು ಮೊದಲು ಮಾಡಿದಂತೆಯೇ ನಟನೆಯನ್ನು ಮಾಡುತ್ತಾ ಮೊದಲನೇ ಕವರಿನ ಚೀಟಿಯಲ್ಲಿ ನೀವು ನೋಡಿದ ಪ್ರಶ್ನೆಯನ್ನು ಓದಿ ಹೇಳಿ. ನಂತರ ಆ ಕವರಿನ ಚೀಟಿಯನ್ನು ನೋಡಿ ಯೆಸ್ ಕರೆಕ್ಟ್. ಯಾರು ಈ ಪ್ರಶ್ನೆ ಕೇಳಿದ್ದು ಅಂತ ಹೇಳಿ ನಿಮಗೆ ತೋಚಿದ ಯಾವುದಾದರೂ ಗಮ್ಮತ್ತಿನ ಉತ್ತರವನ್ನು ಕೊಡಿ. ಅಂದರೆ ಪ್ರತಿ ಬಾರಿಯೂ ಹಣೆಯ ಹತ್ತಿರ ಕವರನ್ನು ಇಟ್ಟು ಉತ್ತರ ಹೇಳುವಾಗ ಹಿಂದಿನ ಕವರಿನಲ್ಲಿದ್ದ ಚೀಟಿಯ ಪ್ರಶ್ನೆಯನ್ನು ಹೇಳಬೇಕು. ಕೊನೆಯ ಕವರು ಅಂದರೆ ನಿಮ್ಮ ಸಹಾಯಕನ ಕವರಿನಲ್ಲಿರುವ ಪ್ರಶ್ನೆಯನ್ನು ಹೇಳುವಾಗ ಅದರ ಹಿಂದಿನ, ಅಂದರೆ ಒಂಭತ್ತನೇ ಕವರಿನ ಚೀಟಿಯಲ್ಲಿದ್ದ ಪ್ರಶ್ನೆಯನ್ನು ಹೇಳಬೇಕು. ನೀವು ಮಾತಿನಲ್ಲಿ ಜಾಣರಾದರೆ ತಮಾಷೆಯ ಉತ್ತರಗಳನ್ನು ಕೊಡುತ್ತಾ ಪ್ರೇಕ್ಷಕರನ್ನು ಅಚ್ಚರಿಯ ಜತೆಗೆ ನಗೆಗಡಲಲ್ಲಿ ತೇಲಿಸಬಹುದು.
– ಉದಯ್ ಜಾದೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.