ಅಭಿಮಾನಿಯ ಸೆಲ್ಫೀ ಮನವಿಗೆ ಗರಂ ಆಗಿದ್ದೇಕೆ ರಾನು ಮೊಂಡಲ್
Team Udayavani, Nov 6, 2019, 6:58 PM IST
ಮುಂಬಯಿ: ಸಾಮಾಜಿಕ ಜಾಲತಾಣದ ಪ್ರಭಾವದಿಂದ ರಾತೋರಾತ್ರಿ ಸ್ಟಾರ್ ಪಟ್ಟಕ್ಕೇರಿದ ಪ್ಲ್ಯಾಟ್ ಫಾರಂ ಸಿಂಗರ್ ರಾನು ಮೊಂಡಲ್ ಅವರು ಇದೀಗ ವಿವಾದ ಒಂದರಿಂದ ಸುದ್ದಿಯಲ್ಲಿದ್ದಾರೆ. ತಮ್ಮ ಜೊತೆ ಸೆಲ್ಫೀ ತೆಗೆಸಿಕೊಳ್ಳಲು ಅಪೇಕ್ಷಿಸಿದ ಮಹಿಳೆಯೊಬ್ಬರೊಂದಿಗೆ ರಾನು ಗರಂ ಆಗಿ ವರ್ತಿಸುತ್ತಿರುವ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿರುವಂತೆ ರಾನು ಅವರ ಈ ವರ್ತನೆಗೆ ನೆಟ್ಟಿಗರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಲಾರಂಭಿಸಿದೆ.
ಇಷ್ಟಕ್ಕೂ ಆಗಿದ್ದೇನೆಂದರೆ, ರಾನು ಮೊಂಡಲ್ ಅವರು ಶಾಪಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಹಿಂಭಾಗದಿಂದ ಬಂದ ಮಹಿಳೆಯೊಬ್ಬರು ಅವರನ್ನು ಗುರುತಿಸಿ ಅವರ ಭುಜವನ್ನು ತಟ್ಟಿ ಸೆಲ್ಫೀ ತೆಗೆಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಮಹಿಳೆಯ ಈ ವರ್ತನೆಗೆ ಸಿಟ್ಟುಗೊಂಡ ರಾನು ಅವರು ಆ ಮಹಿಳಾ ಅಭಿಮಾನಿಯತ್ತ ತಿರುಗಿ ‘ಹೀಗಂದರೇನು? ಇಸ್ ಕಾ ಮತ್ ಲಬ್ ಕ್ಯಾ ಹೈ?’ ಎಂದು ಆ ಮಹಿಳೆಯ ಭುಜವನ್ನು ಮುಟ್ಟುತ್ತಾ ಸಿಟ್ಟಿನಿಂದ ಪ್ರಶ್ನಿಸಿದ್ದಾರೆ.
ಇಷ್ಟಕ್ಕೂ ರಾನು ಅವರನ್ನು ಗುರುತಿಸಿ ಅವರೊಂದಿಗೆ ಸೆಲ್ಫೀ ತೆಗೆಸಿಕೊಳ್ಳಬೇಕೆಂಬ ಖುಷಿಯಲ್ಲಿದ್ದ ಆ ಮಹಿಳೆಗೆ ರಾನು ಅವರ ಈ ಅನಿರಿಕ್ಷಿತ ವರ್ತನೆ ಮುಜುಗರ ಉಂಟುಮಾಡಿದೆ. ಈ ಘಟನೆಯ ವಿಡಿಯೋ ಕ್ಲಿಪ್ಪಿಂಗ್ ವೈರಲ್ ಆಗುತ್ತಿರುವಂತೆ ಹಲವರು ರಾನು ಅವರ ಈ ವರ್ತನೆಯನ್ನು ಖಂಡಿಸಿ ಕಮೆಂಟ್ ಮಾಡುತ್ತಿದ್ದಾರೆ.
‘ಶಿಕ್ಷಣದ ಮೂಲಕ ನೀವು ಜಗತ್ತನ್ನೇ ಬದಲಾಯಿಸಬಹುದು. ಸುಶಿಕ್ಷಿತ ವ್ಯಕ್ತಿಗೂ ಇಂತವರಿಗೂ ಇರುವ ವ್ಯತ್ಯಾಸವೇ ಇದು. ಸುಶಿಕ್ಷಿತ ವ್ಯಕ್ತಿ ಮಾತ್ರವೇ ಅಭಿಮಾನಿಗಳ ಮತ್ತು ತನಗೆ ಬಂದಿರುವ ಖ್ಯಾತಿಯ ಮೌಲ್ಯವನ್ನು ತಿಳಿದಿರುತ್ತಾರೆ’ ಎಂದು ಒಬ್ಬರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
‘ಈ 2 ತಿಂಗಳ ಖ್ಯಾತಿ ಗಳಿಸಿದ ಮಹಿಳೆಯ ವರ್ತನೆಯನ್ನು ನೋಡಿದಾನ ನನಗೆ ರಾಹುಲ್ ದ್ರಾವಿಡ್ ಅವರ ಮೇಲಿನ ಗೌರವ ದುಪ್ಪಟ್ಟಾಗುತ್ತಿದೆ. ತನ್ನ ವೃತ್ತಿ ಜೀವನದುದ್ದಕ್ಕೂ ಮತ್ತು ಈಗಲೂ ದ್ರಾವಿಡ್ ಅವರು ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಇವರಿಗೆಲ್ಲಾ ಮಾದರಿ’ ಎಂದು ಇನ್ನೊಬ್ಬರು ತನ್ನ ಟ್ವೀಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.