ಬೀದಿನಾಯಿಗಳ ಹಾವಳಿಯಿಂದ ಜನತೆಗೆ ಆತಂಕ
Team Udayavani, Nov 7, 2019, 3:00 AM IST
ಕೊಳ್ಳೇಗಾಲ: ಪಟ್ಟಣದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಎಲ್ಲಿ ಜನರ ಮೇಲೆ ಬೀಳುತ್ತದೆಯೋ ಎಂದು ಭಯಭೀತರಾಗಿದ್ದಾರೆ. ನಗರಸಭೆಯ ಅಧಿಕಾರಿಗಳು ಬೀದಿನಾಯಿಗಳ ಹಾವಳಿಯನ್ನು ತಪ್ಪಿಸಿ, ಭಯಭೀತರಾಗಿರುವ ಸಾರ್ವಜನಿಕರು ಧೈರ್ಯದಿಂದ ಸಂಚಾರಿಸುವಂತೆ ಮಾಡಬೇಕಾಗಿದೆ.
ಪಟ್ಟಣದ ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು, ಎಲ್ಲಾ ವಾರ್ಡ್‌ಗಳಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಬೀದಿ, ಬೀದಿಯಲ್ಲಿ ನಾಯಿಗಳ ಕಾಟ ತಾಳಲಾರದೇ ಹಲವರು ಭಯಭೀತರಾಗಿದ್ದಾರೆ. ಮತ್ತೆ ಕೆಲವರು ರಸ್ತೆಯಲ್ಲಿ ಸೈಕಲ್ ಮತ್ತು ಬೈಕ್, ಇನ್ನಿತರ ವಾಹನಗಳಲ್ಲಿ ಚಲಿಸುವಾಗಲೂ ನಾಯಿಗಳು ಅಡ್ಡ ಬರುವುದೆ ಎಂದು ಭಯದಿಂದಲೇ ಓಡಾಡಿಸುವಂತೆ ಆಗಿದೆ.
ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು: ಕಳೆದ ಐದಾರು ವರ್ಷಗಳಿಂದ ಬೀದಿನಾಯಿಗಳ ಉಪಟಳ ಉಲ್ಬಣದಿಂದಾಗಿ ಎಲ್ಲೆಲ್ಲೂ ನಾಯಿಗಳು ಹೆಚ್ಚಾಗಿದೆ. ಇದರ ನಿಯಂತ್ರಣವನ್ನು ಅಧಿಕಾರಿಗಳು ಮಾಡದೇ ಕಣ್ಣಿದ್ದು, ಕುರುಡರಂತೆ ನಾಯಿಗಳ ದಂಡನ್ನು ವೀಕ್ಷಿಸುತ್ತಾ ನಿಯಂತ್ರಣ ಮಾಡುವಲ್ಲಿ ಮೀನಾಮೇಷ ಎಸಗುತ್ತಿದ್ದಾರೆ.
ಕಾಡಿಗೆ ನಾಯಿಗಳು: ಹಲವಾರು ವರ್ಷಗಳ ಹಿಂದೆ ನಗರಸಭೆಯ ಅಧಿಕಾರಿಗಳು ನಾಯಿಯನ್ನು ಹಿಡಿದು ಚುಚ್ಚು ಮದ್ದು ನೀಡಿ ಕೊಲ್ಲುತ್ತಿದ್ದರು. ನಂತರ ಪ್ರಾಣಿಗಳ ಮೇಲೆ ದಯ ಇಟ್ಟ ಅಧಿಕಾರಿಗಳು ಹಿಡಿದು ರಾಶಿ ರಾಶಿ ನಾಯಿಗಳನ್ನು ಕಾಡಿಗೆ ಬಿಡುವ ಮೂಲಕ ನಿಯಂತ್ರಣ ನಡೆಯುತ್ತಿತ್ತು. ಆದರೆ, ಈ ಕಾರ್ಯ ಸಂಪೂರ್ಣ ನೆಲೆಕಚ್ಚಿದೆ.
ರಾತ್ರಿ ನಿದ್ದೆಗೆ ತೊಂದರೆ: ಪಟ್ಟಣದಲ್ಲೆಡೆ ನಾಯಿಗಳ ಸಂಖ್ಯೆ ಉಲ್ಬಣಗೊಂಡಿದ್ದು, ಇಡೀ ರಾತ್ರಿಯ ಹೊತ್ತು ಬೊಗಳುವುದರಿಂದ ವೃದ್ಧರು, ಹೃದಯ ಖಾಯಿಲೆಗೆ ಒಳಗಾದವರು ಮತ್ತು ಸಣ್ಣ ಮಕ್ಕಳು ನಿದ್ರೆಯಿಂದ ಎದ್ದಿ, ಇಡೀ ರಾತ್ರಿ ನಿದ್ರೆ ಮಾಡದೇ ಪರಿತಪಿಸುವಂತಹ ವಾತವರಣ ನಾಯಿಗಳಿಂದ ನಿರ್ಮಾಣವಾಗಿದೆ.
ರಸ್ತೆ ಅಪಘಾತ: ಬೀದಿನಾಯಿಗಳ ಹಿಂಡು ರಸ್ತೆಯಲ್ಲೇ ಹೆಚ್ಚಾಗಿ ಇರುವುದರಿಂದ ರಸ್ತೆಯಲ್ಲಿ ಬರುವ ವಾಹನಗಳಿಗೂ ದಾರಿ ಬಿಡುತ್ತಿಲ್ಲ. ಗುಂಪು ಗುಂಪಾಗಿ ನಿಲ್ಲುವುದರಿಂದ ಹಲವು ಬೈಕ್ ಸವಾರರು ನಾಯಿಗಳಿಗೆ ಗುದ್ದಿಸಿ, ರಸ್ತೆಯಲ್ಲಿ ಬಿದ್ದು, ತೀವ್ರಗಾಯಗೊಂಡಿದ್ದು, ಹಲವು ಘಟನೆಗಳು ಜರುಗಿರುವ ನಿರ್ದೇಶನ ಪಟ್ಟಣದಲ್ಲಿ ಇದೆ.
ಭಯಪಡುವ ವಿದ್ಯಾರ್ಥಿಗಳು: ಮುಖ್ಯ ರಸ್ತೆಗಳಲ್ಲಿ ಶಾಲೆ, ಕಾಲೇಜಿಂದ ನಡೆದು ಬರುವ ವಿದ್ಯಾರ್ಥಿಗಳು, ನಾಯಿಗಳ ಹಿಂಡು ಕಂಡು ಎಲ್ಲಿ ಕಚ್ಚಿ ಬಿಡುತ್ತದೆಯೋ ಎಂದು ಭಯಭೀತರಾಗಿ, ನಾಯಿಗಳಿಗೆ ರಸ್ತೆಯನ್ನು ಬಿಟ್ಟು, ರಸ್ತೆ ಬದಿಯಲ್ಲಿ ಅಂಜಿ ಹೋಗುವಂತಹ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಎದುರಾಗಿದೆ.
ಇನ್ನು ಮುಂದೆಯಾದರೂ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು, ವಿವಿಧ ಬಡಾವಣೆಗಳಲ್ಲಿ ಹೆಚ್ಚಿರುವ ನಾಯಿಗಳ ಉಪಟಳವನ್ನು ನಿಯಂತ್ರಣ ಮಾಡಿ ಭಯಭೀತರಾಗಿರುವ ಸಾರ್ವಜನಿಕರಿಗೆ, ಮಕ್ಕಳಿಗೆ ಮತ್ತು ವಾಹನ ಸವಾರರಿಗೆ ಅನುಕೂಲ ಕಲ್ಪಿಸುವರೇ ಎಂದು ಕಾದು ನೋಡಬೇಕಾಗಿದೆ.
ಬೀದಿನಾಯಿಯನ್ನು ಬೇರೆಡೆ ಸಾಗಿಸಲಾಗದ ದುಸ್ಥಿತಿ: ಈ ಹಿಂದೆ ನಗರಸಭೆ ವತಿಯಿಂದ ಬೀದಿನಾಯಿಗಳಿಗೆ ಚುಚ್ಚು ಮದ್ದುಗಳನ್ನು ಹಾಕಿ, ಕೊಲ್ಲಲಾಗುತ್ತಿತ್ತು. ನಂತರ ನಾಯಿಗಳನ್ನು ಹಿಡಿದು ಕಾಡಿಗೆ ಬಿಡಲಾಗುತ್ತಿತ್ತು. ಇದನ್ನು ಕಂಡ ಪ್ರಾಣಿ ದಯಾಳು ಸಂಘದವರು, ನಗರಸಭೆಯ ಅಧಿಕಾರಿಗಳ ಮೇಲೆ ದೂರುಗಳನ್ನು ಸಲ್ಲಿಸಿ, ನಾಯಿಗಳನ್ನು ಕೊಲ್ಲದಿರಲು ಮತ್ತು ಹಿಡಿದು ಬೇರೆಡೆಗೆ ಸಾಗಿಸಬಾರದು ಎಂದು ನ್ಯಾಯಾಲಯಗಳಲ್ಲಿ ಮೊಕದ್ದಮೆ ನೀಡಿದ ಹಿನ್ನಲೆಯಲ್ಲಿ ಬೀದಿನಾಯಿಯನ್ನು ಕೊಲ್ಲಲಾಗದೆ, ಬೇರೆಡೆಗೆ ಸಾಗಿಸಲಾಗದ ದುಸ್ಥಿತಿ ಎದುರಾಗಿದೆ ಎಂದು ನಗರಸಭೆಯ ಪೌರಾಯುಕ್ತ ನಾಗಶೆಟ್ಟಿ ತಿಳಿಸಿದ್ದಾರೆ.
ನಗರಸಭೆಯ ಅಧಿಕಾರಿಗಳು ನಾಯಿಗಳ ಸಂತಾನಹರಣ ಮಾಡಲು ಸೂಚಿಸಿದರೆ, ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪಶು ವೈದ್ಯ ಇಲಾಖೆ ಸಿದ್ಧವಾಗಿದೆ.
-ಡಾ.ವೆಂಕಟರಾಮು, ಸಹಾಯಕ ನಿರ್ದೇಶಕ, ಪಶು ವೈದ್ಯ ಇಲಾಖೆ
* ಡಿ ನಟರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
Cabinet Meeting: ಮೊದಲ ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
Kollegala: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ… ಸೊತ್ತು ಸಮೇತ ಆರೋಪಿ ಬಂಧನ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.