ಆಕರ್ಷಣೀಯ ಗಣೇಶ ಕಲಾಕೃತಿ ಪ್ರದರ್ಶನ
Team Udayavani, Nov 8, 2019, 3:36 AM IST
ಕಲಾವಿದ ಪ್ರವೀಣಕುಮಾರ ಗಣೇಶ ಚೌತಿ ಸಂದರ್ಭ ಒಂದು ದಿನದ ಏಕವ್ಯಕ್ತಿ ಕಲಾ ಪ್ರದರ್ಶನ ಏರ್ಪಡಿಸಿ, ವಿವಿಧ ಮಾಧ್ಯಮಗಳನ್ನು ಬಳಸಿ ಗಣೇಶ ಕಲಾಕೃತಿಗಳನ್ನು ರಚಿಸಬಹುದೆಂದು ತೋರಿಸಿಕೊಟ್ಟರು. ಆಕರ್ಷಕ ಭಂಗಿಯ ಗಣೇಶ ಕಲಾಕೃತಿಗಳು ಒಂದರಿಂದ ನಾಲ್ಕು ಇಂಚು ಎತ್ತರಕ್ಕೆ ಸೀಮಿತಗೊಂಡಿದ್ದುವು.
ಸೂಕ್ಷ್ಮವಾಗಿ ಕೈಚಳಕದಿಂದ ಉತ್ತಮವಾಗಿ ಕಲಾಕೃತಿಗಳನ್ನು ರಚಿಸಿರುವುದನ್ನು ಕಣ್ತುಂಬಿಕೊಂಡು ಕಲಾಸಕ್ತರು ವೀಕ್ಷಿಸಿ, ಪ್ರಶಂಶಿಸಿದರು. ಇಂತಹ ಕಲಾಕೃತಿಗಳನ್ನು ರಚಿಸುವಾಗ ಏಕಾಗ್ರಚಿತ್ತ, ಸಾಧನೆ, ಪರಿಶ್ರಮಕ್ಕೆ ತಕ್ಕಂತೆ ಸಮಯಾವಕಾಶವೂ ಬೇಕು. ಪುತ್ತೂರು ಪ್ರಧಾನ ರಸ್ತೆಯಲ್ಲಿರುವ ಕೆ.ಪಿ.ಕಾಂಪ್ಲೆಕ್ಸ್ 2ನೇ ಮಹಡಿಯ ವರ್ಣಕುಟೀರ ಕಲಾಶಾಲೆಯಲ್ಲಿ ಸೆ.2ರಂದು ಪ್ರದರ್ಶನ ಏರ್ಪಟ್ಟಿತು. ಬಿದಿರು, ಬೆಂಕಿಪೊಟ್ಟಣ ಕಡ್ಡಿ, ಇಲೆಕ್ಟ್ರಾನಿಕ್ ಬಿಡಿಭಾಗಗಳಾದ ಕಂಡಕ್ಟರ್, ಐಸ್‌ಕ್ಯಾಂಡಿ ಕಡ್ಡಿಗಳನ್ನು ಆಯ್ದುಕೊಂಡು ವಿವಿಧ ಗಣೇಶ ಕಲಾಕೃತಿಗಳ ರಚನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ವಿವಿಧ ಭಂಗಿಯ ಗಣೇಶ ರೂಪಗಳನ್ನು ರಚಿಸುವ ಯೋಚನೆ ಹೊಳೆದಿತ್ತೆಂದು ಪ್ರವೀಣಕುಮಾರರು ಥರ್ಮಕೋಲ್-ಫೋಮ್ ಬಳಸಿಯೂ ಆಕೃತಿ ರಚನೆ ಸುಲಭವಾಗಿತ್ತಾದರೂ ಆಕರ್ಷಕ ಶೈಲಿಗೆ ಸಮಯ ಬೇಕು ಎಂದು ತಿಳಿಸುತ್ತಾರೆ.
ಪ್ರವೀಣಕುಮಾರ್ ಜಲವರ್ಣ, ತೈಲವರ್ಣ ಕಲಾವಿದರಾಗಿಯೂ ಅನೇಕ ಕಡೆ ವಾರ್ಲಿ ಚಿತ್ರ ಬಿಡಿಸಿಯೂ ಕಲಾಭಿರುಚಿ ಬೆಳೆಯುವಂತೆ ಪ್ರೇರೇಪಿಸುತ್ತಿದ್ದಾರೆ. ಜತೆಗೆ ಕೀಬೋರ್ಡ್‌ನ ಸಂಗೀತಸಾಧನದ ಕಲಿಕೆಯನ್ನು ಹೇಳಿಕೊಡುತ್ತಿರುವರು.
ಬಹುರೂಪಿ ಗಣೇಶ ಕಲಾಕೃತಿಗಳು ಕಲಾಸಕ್ತರಿಗೂ, ವಿದ್ಯಾರ್ಥಿವೃಂದದವರಿಗೂ ಮೆಚ್ಚುಗೆಯಾಗಿತ್ತು. ಪ್ರಸ್ತುತ ಕಲಾವಿದ ಪ್ರವೀಣಕುಮಾರರು ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ಕಲಾಶಿಕ್ಷಕರಾಗಿದ್ದಾರೆ.
ಡಾ| ಎಸ್.ಎನ್.ಅಮೃತ ಮಲ್ಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.