ಕೀರ್ತನಾರ ಸುಮಧುರ ಕೀರ್ತನೆ
Team Udayavani, Nov 8, 2019, 3:00 AM IST
ಸಂಗೀತ ಪರಿಷತ್ ಮಂಗಳೂರು ಮತ್ತು ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ಜೆ.ಬಿ. ಕೀರ್ತನಾ ಭಾರಧ್ವಾಜ್ ಅವರ ಸಂಗೀತ ಕಛೇರಿಯನ್ನು ಶಾರದಾ ವಿದ್ಯಾಲಯದಲ್ಲಿ ಅಕ್ಟೋಬರ್ ತಿಂಗಳ ಕಾರ್ಯಕ್ರಮದಲ್ಲಿ ಆಯೊಜಿಸಲಾಗಿತ್ತು. ಸುಮಾರು 3 ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಆರಂಭದಿಂದ ಅಂತ್ಯದವರೆಗೂ ಆತ್ಮವಿಶ್ವಾಸದಿಂದ ಕೂಡಿದ ಮುಕ್ತ ಕಂಠದ ಘನ ಕಛೇರಿಯನ್ನು ಆಲಿಸುವ ಸೌಭಾಗ್ಯ ರಸಿಕರದಾಯಿತು.
ಕಲ್ಯಾಣಿ ಅಟ್ಟತಾಳ ವರ್ಣ ಸರಾಗವಾಗಿ ಮೂಡಿ ಬಂದು ಅಣ್ಣ ಸ್ವಾಮಿ ಶಾಸ್ತ್ರಿ ಅವರ ಅಸಾವೇರಿ ರಾಗದ ಶ್ರೀ ಕಾಂಚಿ ನಾಯಿಕೆ ಕಛೇರಿಗೆ ಗಟ್ಟಿಯಾದ ಬುನಾದಿ ಎನಿಸಿತು. ಸಾರವತ್ತಾದ ಬಿಲಹರಿಯ ಆಲಾಪನೆ ಉತ್ತಮವಾದ ಸ್ವರ ಕಲ್ಪನೆಗಳೊಂದಿಗೆ ದೀಕ್ಷಿತರ ಕಾಮಾಕ್ಷಿ ಶ್ರೀ ವರಲಕ್ಷ್ಮಿಯನ್ನು ಉತ್ಕೃಷ್ಟವಾಗಿ ಪ್ರಸ್ತುತಪಡಿಸಿದರು.
ಶಾಮಾಶಾಸ್ತ್ರಿಗಳ ಲಲಿತಾ ರಾಗದ ನನು ಬ್ರೋವು ಲಲಿತಾವನ್ನು ಭಾವಪೂರ್ಣವಾಗಿ ಹಾಡಿದ ಕೀರ್ತನಾ, ನಂತರ ಲಘು ಆಲಾಪನೆಯೊಂದಿಗೆ ಮುತ್ತಯ್ಯ ಭಾಗವತರ ಸಾರಂಗ ಮಲ್ಹಾರ್‌ನ ಶ್ರೀ ಮಹಾಬಲಗಿರಿ ನಿವಾಸಿನಿಯ ಸಾರಸಾಕ್ಷಿ ಹರಿಕೇಶ ಮನೋಹರಿಯಲ್ಲಿ ನೆರವಲ್ ಮತ್ತು ಸುಂದರ ಸಂಗತಿಗಳಿಂದ ನಿರೂಪಿಸಿ ರಂಜಿಸಿದರು. ಶಾಮಾಶಾಸ್ತ್ರಿಗಳ ಪರಸ್‌ನ ನೀಲಯದಾಕ್ಷಿ ನೀವೆ ಜಗತ್ಸಾಕ್ಷಿಯ ನಂತರ ಎರಡು ಸ್ತರದ ವಿದ್ವತ್‌ಪೂರ್ಣ ಹಂಸಾನಂದಿಯ ರಾಗಸಂಚಾರ, ಆಕರ್ಷಕ ತಾನಂ ಮತ್ತು ಪಲ್ಲವಿ ನಿನ್ನೆ ನಮ್ಮಿತಿ ನೀವೆ ಗತಿ ನೀರಜದಳ ನೇತ್ರೆಯಲ್ಲಿ ಚುರುಕಾದ ನಾಟಕಪ್ರಿಯ, ಚಾರುಕೇಶಿ ಮತ್ತು ಲಲಿತ ರಾಗಮಾಲಿಕೆಗಳ ಪ್ರಸ್ತುತಿ ಅನನ್ಯ ಮತ್ತು ಅನುಕರಣೀಯ.
ಪುರಂದರದಾಸರ ಮುಖಾರಿಯ ಪಾಲಿಸೆಮ್ಮ ಮುದ್ದು ಶಾರದೆ, ಮುತ್ತಯ್ಯ ಭಾಗವತರ ನಿರೋಷ್ಠ ರಾಗದ ರಾಜ ರಾಜ ರಾಧಿತೆ ಹಾಡುಗಳು ನವರಾತ್ರಿಯ ಸಂದರ್ಭದಲ್ಲಿ ಭಕ್ತಿ ಭಾವದಲ್ಲಿ ತೇಲಾಡುವಂತೆ ಮಾಡಿದವು. ಮಧುರೈ ಟಿ ಶ್ರೀನಿವಾಸನ್ ಅವರ ಸುರುಟಿ ರಾಗದ ತಿಲ್ಲಾನವನ್ನು ಸುಶ್ರಾವ್ಯವಾಗಿ ಹಾಡಿ ಈ ಕಛೇರಿಯನ್ನು ಸಂಪನ್ನಗೊಳಿಸಿದರು.
ಪಿಟೀಲಿನಲ್ಲಿ ವೈಭವ್ ರಮಣಿ ಗಾಯಕರನ್ನು ಸೂಕ್ಷ್ಮವಾಗಿ ಅನುಸರಿಸಿದರೂ ಇನ್ನೂ ಪಕ್ವತೆ ಬೇಕೆನಿಸಿತು. ತುಮಕೂರು ರವಿಶಂಕರ್ ಲಯಪೂರ್ಣ ವಾದನದೊಂದಿಗೆ ಮನಗೆದ್ದರು.
ಕೃತಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.