ರಣಭೂಮಿಯಲ್ಲಿ ಗೆಲುವಿನ ನಿರೀಕ್ಷೆ
ಸಸ್ಪೆನ್ಸ್-ಥ್ರಿಲ್ಲರ್ ಸಿನ್ಮಾ
Team Udayavani, Nov 8, 2019, 4:47 AM IST
“ಸಿನಿಮಾ ಚೆನ್ನಾಗಿದ್ದರೆ ಜನ ಬರುತ್ತಾರೆಂದು ನಂಬಿದವನು ನಾನು. ಹಾಗಾಗಿ, ಒಳ್ಳೆಯ ಸಿನಿಮಾ ಮಾಡಿದ್ದೇನೆ’
-ಹೀಗೆ ಹೇಳಿಕೊಂಡರು ನಿರ್ದೇಶಕ ಚಿರಂಜೀವಿ ದೀಪಕ್. ಈ ಹಿಂದೆ “ಜೋಕಾಲಿ’ ನಿರ್ದೇಶಿಸಿದ್ದ ಚಿರಂಜೀವಿ ದೀಪಕ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಅವರ ಅಕ್ಕ-ಪಕ್ಕದಲ್ಲಿ ಚಿತ್ರದ ಕಲಾವಿದರು ಇರಲಿಲ್ಲ. ಚಿತ್ರದಲ್ಲಿ ನಟಿಸಿದ ಡ್ಯಾನಿ ಕುಟ್ಟಪ್ಪ ಬಿಟ್ಟರೆ ಮಿಕ್ಕಂತೆ ಆ ಚಿತ್ರದ ನಟ-ನಟಿಯರು ಗೈರಾಗಿದ್ದರು. ಹಾಗಂತ ನಿರ್ದೇಶಕ ದೀಪಕ್ ಅವರ ಮೇಲೆ ಆರೋಪ ಮಾಡುವ ಗೋಜಿಗೆ ಹೋಗಲಿಲ್ಲ. “ಕಲಾವಿದರು ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಅವರ ಸಹಕಾರ ಇದ್ದೇ ಇರುತ್ತದೆ. ಮುಖ್ಯವಾಗಿ ಸಿನಿಮಾ ಚೆನ್ನಾಗಿರಬೇಕು. ಸಿನಿಮಾ ಚೆನ್ನಾಗಿಲ್ಲದೇ ಯಾರು ಏನು ಮಾತನಾಡಿದರೂ ಪ್ರಯೋಜನವಿಲ್ಲ’ ಎಂದರು ದೀಪಕ್.
ಚಿತ್ರದಲ್ಲಿ ನಿರಂಜನ್ ಒಡೆಯರ್, ಕಾರುಣ್ಯ ರಾಮ್, ಶೀತಲ್ ಶೆಟ್ಟಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದಲ್ಲಿ ನಟಿಸಿದ ಡ್ಯಾನಿ ಕುಟ್ಟಪ್ಪ ಇಲ್ಲಿ ಮತ್ತೂಮ್ಮೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಹಾಗೂ ಪಾತ್ರ ಜನರಿಗೆ ಇಷ್ಟವಾಗುವ ವಿಶ್ವಾಸ ಅವರದು. ಚಿತ್ರಕ್ಕೆ ಪ್ರದೀಪ್ ವರ್ಮಾ ಸಂಗೀತವಿದ್ದು, ಕಲಾವಿದರ ಧ್ವನಿಗೆ ಪೂರಕವಾಗಿ ಹಿನ್ನೆಲೆ ಸಂಗೀತ ನೀಡಿದ್ದಾರಂತೆ.
ಇನ್ನು, ಚಿತ್ರದಲ್ಲಿ ನಿರಂಜನ್ ಒಡೆಯರ್ ಹಾಗು ಕಾರುಣ್ಯರಾಮ್ ಇಬ್ಬರೂ ಸಾಫ್ಟ್ವೇರ್ ಕ್ಷೇತ್ರದವರಾಗಿದ್ದು, ಕೆಲ ಅನಿರೀಕ್ಷಿತ ಘಟನೆಗಳಿಗೆ ಅವರು ಸಿಲುಕುತ್ತಾರೆ. ಅದರಿಂದ ಅವರ ಹೊರಬರುತ್ತಾರೋ, ಇಲ್ಲವೋ ಅನ್ನೋದು ಕಥೆ. ಇಲ್ಲಿ ಸಸ್ಪೆನ್ಸ್ ಜೊತೆ ಥ್ರಿಲ್ಲರ್ ಕೂಡ ಇದೆ. ಹಾಗೆಯೇ ಹಾರರ್ ಕೂಡ ಚಿತ್ರದ ಇನ್ನೊಂದು ಅಂಶ. ಸಿನಿಮಾ ಮುಗಿಯುವ ಹೊತ್ತಿಗೆ, ಇದು ಹಾರರ್ ಸಿನಿಮಾನಾ ಎಂಬಷ್ಟರ ಮಟ್ಟಿಗೆ ಚಿತ್ರ ಮೂಡಿಬಂದಿದ್ದು, ವಿಎಫೆಕ್ಸ್ ಇಡೀ ಚಿತ್ರವನ್ನು ಆವರಿಸಿಕೊಂಡಿದೆ. ಇನ್ನು, ಚಿತ್ರದ ಶೀರ್ಷಿಕೆಗೆ “ಹುಟ್ಟು ಅನಿವಾರ್ಯ ಆದ್ರೆ ಸಾವು ಚರಿತ್ರೆ ಆಗಬೇಕು’ ಎಂಬ ಅಡಿಬರಹವಿದೆ. ಇಲ್ಲಿ ಹೋರಾಟದ ಹಾದಿ ಕುರಿತ ವಿಷಯವಿದೆ. ಬದುಕಿನ ಮೌಲ್ಯಗಳಿವೆ. ಚಿತ್ರವನ್ನು ಅಕ್ಷರ ಫಿಲಂಸ್ ವಿತರಣೆ ಮಾಡುತ್ತಿದ್ದು, “ಭಜರಂಗಿ’ ಲೋಕಿ ಅವರೂ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಅವರದೂ ಒಂದು ವಿಶೇಷತೆ ಇಲ್ಲಿದೆಯಂತೆ. ಚಿತ್ರಕ್ಕೆ ನಾಗಾರ್ಜುನ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವಿಕ್ರಮ್ ಸಾಹಸವಿದೆ, “ಕರ್ವ’ ಖ್ಯಾತಿಯ ವೆಂಕಿ ಸಂಕಲನ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.