108 ವರ್ಷಗಳ ಇತಿಹಾಸದೊಂದಿಗೆ ಮುನ್ನಡೆಯುತ್ತಿರುವ ಸರಕಾರಿ ಕನ್ನಡ ಶಾಲೆ

ಅತ್ಯಂತ ಗ್ರಾಮೀಣ ಭಾಗದ ಶಿರ್ಲಾಲು ಸೂಡಿ ಸರಕಾರಿ ಹಿ. ಪ್ರಾ. ಶಾಲೆ

Team Udayavani, Nov 8, 2019, 5:44 AM IST

0711AJKE01

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಅಜೆಕಾರು: ಕಾರ್ಕಳ ತಾಲೂಕಿನ ಅತ್ಯಂತ ಗ್ರಾಮೀಣ ಭಾಗವಾದ ಶಿರ್ಲಾಲು ಸೂಡಿ ಸರಕಾರಿ ಹಿ.ಪ್ರಾ. ಶಾಲೆ ಯಶಸ್ವಿಯಾಗಿ 108 ವರ್ಷಗಳನ್ನು ಕಳೆದು ಮುನ್ನಡೆಯುತ್ತಿದೆ. ಶಿರ್ಲಾಲು ಪರಿಸರದ ಆಸುಪಾಸಿನಲ್ಲಿ ಶಾಲೆಗಳಿಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗಂಡ ಸ್ಥಳಿಯರು ಗ್ರಾಮಸ್ಥರ ಸಹಕಾರದೊಂದಿಗೆ
ಶಿರ್ಲಾಲು ಸೂಡಿ ಮನೆತನದ ಚೆಲುವಯ್ಯ ಹೆಗ್ಡೆಯವರು ದಾನವಾಗಿ ನೀಡಿದ ಸ್ಥಳದಲ್ಲಿ 1911ರಲ್ಲಿ ಬೋರ್ಡ್‌ ಪ್ರಾಥಮಿಕ ಶಾಲೆ ಆರಂಭಿಸಿ ಅನಂತರದ ದಿನಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತ್ತು.

ಶಾಲೆ ಆರಂಭವಾದ ದಿನಗಳಲ್ಲಿ ಮುಂಡ್ಲಿ, ಕೆರ್ವಾಶೆ ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. ಈಗ ಈ ವ್ಯಾಪ್ತಿಯಲ್ಲಿ ಇತರ 7 ಶಾಲೆಗಳು ಆರಂಭಗೊಂಡಿದ್ದರೂ ಸೂಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಕೊರತೆ ಇಲ್ಲ.

ಪ್ರಸ್ತುತ 94 ವಿದ್ಯಾರ್ಥಿಗಳು
ಆರಂಭದ ವರ್ಷಗಳಲ್ಲಿ ಪಂಗ್ಲಬೆಟ್ಟುವಿನ ಜಾಣ ಹೆಗ್ಡೆಯವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಮುಖ್ಯ ಶಿಕ್ಷಕಿಯಾಗಿ ಆಶಾಬಾನು ಕಾರ್ಯನಿರ್ವಹಿಸುತ್ತಿದ್ದು ಸಹಶಿಕ್ಷಕರು 4 ಮಂದಿ ಜತೆಗೆ ಇಬ್ಬರು ಗೌರವ ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 94 ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುತ್ತಿದ್ದು ಶಾಲೆಯು 2016-17ನೇ ಸಾಲಿನಲ್ಲಿ ಉತ್ತಮ ಶಾಲೆ ಪ್ರಶಸ್ತಿ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ಶಾಲೆಯ ಶಿಕ್ಷಕ ಲಕ್ಷ್ಮಣ್‌ ಸಾಳ್ವಣ್‌ಕರ್‌ ಜಿಲ್ಲಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ ಹಿಂದೆ ಉತ್ತಮ ಶಾಲಾಭಿವೃದ್ಧಿ ಸಮಿತಿ ಎಂಬ ಪ್ರಶಸ್ತಿಗೂ ಶಾಲೆ ಪಾತ್ರವಾಗಿತ್ತು.

ಸಾಧಕ ಹಳೆವಿದ್ಯಾರ್ಥಿಗಳು
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಇಲ್ಲಿನ ಹಳೆ ವಿದ್ಯಾರ್ಥಿಗಳಲ್ಲಿ ಹಲವರು ಡಾಕ್ಟರ್, ಇಂಜಿನಿಯರ್, ನೂರಾರು ಮಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಬಹಳಷ್ಟು ಮಂದಿ ಮುಂಬಯಿ ಸೇರಿದಂತೆ ದೇಶದ ಬೃಹತ್‌ ನಗರಗಳಲ್ಲಿ ಹೊಟೇಲ್‌ ಹಾಗೂ ಇತರ ಉದ್ಯಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದು ಖ್ಯಾತ ಉದ್ಯಮಿಗಳಾಗಿದ್ದಾರೆ.

ಬೇಡಿಕೆಗಳು
ಶಾಲೆಯು 2017ನೇ ಸಾಲಿನಲ್ಲಿ ಶತಮಾನೋತ್ಸವ ಆಚರಿಸಿದ್ದು ಈ ಸಂದರ್ಭ ಶತಸ್ಮತಿ ಶಾಲಾ ಸಭಾಭವನ, ಧ್ವಜಕಟ್ಟೆ, ಶಾಲಾ ಮುಂಭಾಗ ಇಂಟರ್‌ಲಾಕ್‌ ಅಳವಡಿಕೆ, ಶಾಲಾ ಬಳಿಯಲ್ಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ ತಂಗುದಾಣ ಒದಗಿಸಲಾಗಿದೆ. ಎಜುಸ್ಯಾಟ್‌, ಕುಡಿಯುವ ನೀರಿನ ವ್ಯವಸ್ಥೆ ಶಾಲೆ ಒಳಗೊಂಡಿದ್ದು ಕಂಪ್ಯೂಟರ್‌ ಶಿಕ್ಷಣ ನೀಡಲು ಕಂಪ್ಯೂಟರ್‌ ಅವಶ್ಯಕತೆ ಶಾಲೆಗಿದೆ.

ಪ್ರಸಕ್ತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜತೆಗೆ ಪಠ್ಯೇತರ ವಿಷಯಗಳಾದ ವಾಚನಾಲಯ, ಕ್ರೀಡಾ ಉಪಕರಣಗಳು ಈ ಶಾಲೆಯಲ್ಲಿದ್ದು ವಿದ್ಯಾರ್ಥಿಗಳ ಭವಿಷ್ಯದ ಉಜ್ವಲಕ್ಕಾಗಿ, ಭಾರತ ಸೇವಾದಳ, ಯೋಗಾಭ್ಯಾಸಗಳನ್ನು ಕಲಿಸಲಾಗುತ್ತಿದೆ. ಶಾಲೆಯಲ್ಲಿ ಇಂಗ್ಲಿಷ್‌ ನ್ಪೋಕನ್‌ ತರಗತಿ ನಡೆಸಲಾಗುತ್ತಿದೆ.

ಶಾಲೆಯು ಕಟ್ಟಡ ಇರುವಲ್ಲಿ 60 ಸೆಂಟ್ಸ್‌ ಹಾಗೂ ಕೆಲವೇ ಮೀಟರ್‌ ಅಂತರದಲ್ಲಿ 2.75 ಎಕ್ರೆ ವಿಶಾಲ ಜಾಗ ಒಳಗೊಂಡಿದೆ. ಈ ಪ್ರದೇಶದಲ್ಲಿ ಶಾಲಾವನ ನಿರ್ಮಾಣ , ಸುಸಜ್ಜಿತ ಆಟದ ಮೈದಾನ ಹೊಂದಿದೆ.

ಶಿರ್ಲಾಲು ಸೂಡಿ ಶಾಲೆ ಶತಮಾನ ಕಂಡಿದ್ದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಿಗೆ ಮನೆಯ ವಾತಾವರಣದಂತೆ ಶಿಕ್ಷಣ ನೀಡಲಾಗುತ್ತಿದ್ದು ಗ್ರಾಮಸ್ಥರ ಸಹಕಾರ, ಕೊಡುಗೆಗಳಿಂದ ಶಾಲೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ.
-ಆಶಾಭಾನು, ಮುಖ್ಯ ಶಿಕ್ಷಕರು

ಅತ್ಯಂತ ಗ್ರಾಮೀಣ ಭಾಗವಾದ ಶಿರ್ಲಾಲುವಿ ನಲ್ಲಿ ಶಿಕ್ಷಣದ ಕೊರತೆ ನೀಗಿಸಲು ಗ್ರಾಮಸ್ಥರು ಶಾಲೆಯನ್ನು ನಿರ್ಮಾಣ ಮಾಡಿದ್ದು ಶಿರ್ಲಾಲು ಸೇರಿದಂತೆ ಪರಿಸರದ ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಿ ಈ ಶಾಲೆ ರೂಪುಗೊಂಡಿತ್ತು. ಶಿಕ್ಷಕರ ಗುಣಮಟ್ಟದ ಶಿಕ್ಷಣ ಜತೆಗೆ ಗ್ರಾಮಸ್ಥರ ನಿರಂತರ ಪ್ರೋತ್ಸಾಹ ದೊಂದಿಗೆ ಶತಮಾನ ಕಳೆದು ಮುನ್ನಡೆಯುತ್ತಿದೆ.
-ಅನಂತ್ರಾಜ್‌ ಪೂವಣಿ,
ಮಾಜಿ ಅಧ್ಯಕ್ಷರು, ಮಂಡಲ ಪಂಚಾಯತ್‌, ಅಜೆಕಾರು

- ಜಗದೀಶ ಅಜೆಕಾರು

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEW-SCHOOL

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್‌ ಪ್ರೌಢಶಾಲೆಗೆ 121ರ ಸಂಭ್ರಮ

430514561342IMG-20191203-WA0023

ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ

sx-22

ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ

ds-24

112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ds-35

ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.