ಭೂಮಿ ಕೊಟ್ಟವರಿಗಿಲ್ಲ ಉದ್ಯೋಗ
Team Udayavani, Nov 8, 2019, 5:39 PM IST
ಪಾವಗಡ: ಸೋಲಾರ್ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೇ, ಪ್ರಭಾವಿಗಳಿಂದ ಪತ್ರ ತರುವವರಿಗೆ ಅವಕಾಶ ನೀಡಲಾಗುತ್ತಿದೆ ಎಂದು ರಾಚರ್ಲ ಗ್ರಾಮಸ್ಥರು ಆರೋಪಿಸಿದರು. ಭೂಮಿ ಕೊಟ್ಟ ರೈತರಿಗೆ ಕೆಲಸ ನೀಡದಿದ್ದಲ್ಲಿ ಸೋಲಾರ್ ಕಂಪನಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮದ ರಾಮಾಂಜಿ ಎಚ್ಚರಿಸಿದರು.
ಸೋಲಾರ್ ಹಿತ ರಕ್ಷಣೆ ಸಮಿತಿಯ ಅಕ್ಕಲಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಇದ್ದಾಗ ಮಾಜಿ ಸಚಿವ ಡಿ.ಕೆ. ಶಿವಕುಮಾರ್ “ಭೂಮಿ ಕೊಟ್ಟವರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ಅವರ ಮಾತು ನಂಬಿ ಕಡಿಮೆ ದರಕ್ಕೆ ಗುತ್ತಿಗೆ ನೀಡಿದ್ದೇವು. ಆದರೆ ಅಧಿಕಾರಿಗಳು, ಕಂಪನಿ ಮುಖ್ಯಸ್ಥರು ರೈತರಿಗೆ ಮೋಸ ಮಾಡಿದ್ದಾರೆ ಎಂದು ಹೇಳಿದರು. ಮುಖಂಡ ಮಾರುತಿ ಮಾತನಾಡಿ, ಸರ್ಕಾರದ ನಿಯಮ ಗಾಳಿಗೆ ತೂರಿ ಭೂಮಾಲೀಕರನ್ನು ವಂಚಿಸುತ್ತಿರುವ ಸೋಲಾರ್ ಕಂಪನಿಗಳ ವಿರುದ್ಧ ದೂರು ನೀಡಿದರೂ ಕೆಎಸ್‌ಪಿಡಿಸಿಎಲ್ ಕ್ರಮ ಕೈಗೊಂಡಿಲ್ಲ ಎಂದರು.
ರೈತರು, ಅಧಿಕಾರಿಗಳು, ಕಂಪನಿ ನೌಕರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಿರುಮಣಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ನ್
ಸರ್ಕಾರದ ನಿಯಮದನ್ವಯ ಭೂಮಾಲೀಕರಿಗೆ ಉದ್ಯೋಗ ನೀಡುವುದು ಕಡ್ಡಾಯ. ಎಲ್ಲಾ ಕಂಪನಿಗಳಿಗೂ ನೋಟಿಸ್ ನೀಡಲಾಗುವುದು. ಕೆಲಸದ ಸಮಯ 12ರಿಂದ 8 ನಿಗದಿ ಮಾಡುವಂತೆ ತಿಳಿಸಲಾಗುವುದು. –ಮಹೇಶ್, ಕೆಎಸ್‌ಪಿಡಿಸಿಎಲ್ ಎಇಇ
ರೈತರು ಪ್ರತಿಭಟನೆ ನಡೆಸಿರುವ ಕುರಿತು ಕಂಪನಿ ಮೇಲಧಿಕಾರಿಗಳೊಂದಿಗೆ ಮಾತನಾಡಿದ್ದು, ಆದೇಶ ನೀಡಿದಲ್ಲಿ ಕೆಲಸಕ್ಕೆ ನೇಮಿಸಿ ಕೊಳ್ಳಲಾಗುವುದು. –ನಂದೀಶ್, ರಿನ್ಯೂ ಸೋಲಾರ್ ಕಂಪನಿ ಅಡ್ಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.