ಮಲನ್-ಮಾರ್ಗನ್ ಅಬ್ಬರ: ಇಂಗ್ಲೆಂಡ್‌ಗೆ 76 ರನ್ ಜಯ
182ರನ್ ಬೃಹತ್ ಜತೆಯಾಟ
Team Udayavani, Nov 8, 2019, 7:03 PM IST
ನೇಪಿಯರ್: ಮಧ್ಯಮ ಕ್ರಮಾಂಕದ ಆಟಗಾರರಾದ ಡೇವಿಡ್ ಮಲನ್ ಮತ್ತು ನಾಯಕ ಇಯಾನ್ ಮಾರ್ಗನ್ ಅವರ 182 ರನ್‌ಗಳ ಜತೆಯಾಟದ ನೆರವಿನಿಂದ ಇಂಗ್ಲೆಂಡ್ ಅತಿಥೇಯ ನ್ಯೂಜಿಲ್ಯಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭರ್ಜರಿ 76 ರನ್ನುಗಳ ಗೆಲುವು ದಾಖಲಿಸಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ 2-2 ಸಮಬಲ ಸಾಧಿಸಿಕೊಂಡಿದೆ. ಸರಣಿಯ ನಿರ್ಣಾಯಕ ಪಂದ್ಯ ನ. 10 ರಂದು ಆಕ್ಲೆಂಡ್‌ನ ಇಡನ್ ಪಾರ್ಕ್‌ನಲ್ಲಿ ನಡೆಯಲಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಇಂಗ್ಲೆಂಡ್ 3 ವಿಕೆಟಿಗೆ 241 ರನ್ ಗಳಿಸಿದರೆ, ಕಿವೀಸ್ 16.5 ಓವರ್‌ಗಳಲ್ಲಿ 165 ರನ್‌ಗೆ ಆಲೌಟಾಗಿ ಶರಣಾಯಿತು.
ಮಲನ್-ಮಾರ್ಗನ್ ಅಬ್ಬರ
ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಎಡಗೈ ಆಟಗಾರಾದ ಡೇವಿಡ್ ಮಲನ್ ಮತ್ತು ನಾಯಕ ಇಯಾನ್ ಮಾರ್ಗನ್ 76 ಎಸೆಗಳಿಂದ ಭರ್ಜರಿ 182 ರನ್‌ಗಳ ಜತೆಯಾಟ ಗೆಲುವಿನಲ್ಲಿ ಪ್ರಮುಖ ಪಾತ್ರಹಿಸಿತು. ಮೂರನೇ ವಿಕೇಟ್‌ಗೆ ಜತೆಯಾದ ಈ ಜೋಡಿ ಕಿವೀಸ್ ಬೌಲರ್‌ಗಳ ಮೇಲೆ ನಿರ್ದಾಕ್ಷೀಣ್ಯವಾಗಿ ಸವಾರಿ ಮಾಡಿದರು. ಮಲನ್ ಶತಕ ಬಾರಿಸಿ ಮೆರೆದರೆ ಮಾರ್ಗನ್ 9 ರನ್‌ಗಳಿಂದ ಶತಕ ವಂಚಿತರಾದರು. ಮಲನ್ 51 ಎಸೆತಗಳನಷ್ಟೆ ಎದುರಿಸಿ 9 ಬೌಂಡರಿ, 6 ಸಿಕ್ಸರ್ ನೆರವಿನಿಂದ ಅಜೇಯ 103 ರನ್ ಬಾರಿಸಿದರು. ನಾಯಕ ಮಾರ್ಗನ್ 41 ಎಸೆತಗಳಿಂದ 91ರನ್ ಗಳಿಸಿದರು ಸಿಡಿದದ್ದು 7 ಬೌಂಡರಿ, 7 ಸಿಕ್ಸರ್. ಉಳಿದಂತೆ ಆರಂಭಕಾರ ಟಾಮ್ ಬೆನ್‌ಟನ್ 31ರನ್ ಗಳಿಸಿದರು. ಉಳಿದಂತೆ ಆಂಗ್ಲರ ಬೌಲಿಂಗ್ ಕೂಡ ಘಾತಕವಾಗಿತ್ತು ಮ್ಯಾಥ್ಯೂ ಪರ್ಕಿನ್ಸನ್ 4, ಜೋರ್ಡನ್ 2 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಿವೀಸ್‌ಗೆ ಹಿನ್ನಡೆಯಾದ ಕಳಪೆ ಬೌಲಿಂಗ್
ಕಳೆದ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿಯಿಂದ ಜಯಿಸಿದ್ದ ಕಿವೀಸ್ ಈ ಪಂದ್ಯದಲ್ಲಿ ಪ್ರತಿಯೊಬ್ಬ ಬೌಲರ್‌ಗಳು ದುಬಾರಿ ರನ್ ಬಿಟ್ಟುಕೊಡುವ ಮೂಲಕ ಕಳಪೆ ಮಟ್ಟದ ಬೌಲಿಂಗ್ ಪ್ರದರ್ಶಿಸಿದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಅದರಂತೆ ಕಿವೀಸ್ ಬ್ಯಾಟಿಂಗ್ ಕೂಡ ಸಾಧಾರಣ ಮಟ್ಟದಲ್ಲಿತ್ತು ನಾಯಕ ಟೀಮ್ ಸೌಥಿ ಸರ್ವಾಧಿಕ 39ರನ್ ಮಾಡಿ ಕಿವೀಸ್ ಸರದಿಯ ಗರಿಷ್ಠ ಸ್ಕೋರರ್ ಎನಿಸಿದರು.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್- 3 ವಿಕೆಟಿಗೆ 241 ( ಮಲನ್ ಅಜೇಯ 103, ಮಾರ್ಗನ್ 91, ಮಿಚೆಲ್ ಸ್ಯಾಂಟ್ನರ್ 32ಕ್ಕೆ 2. ನ್ಯೂಜಿಲ್ಯಾಂಡ್- 16.3 ಓವರ್‌ಗಳಲ್ಲಿ 165 ( ಸೌಥಿ 39, ಕಾಲಿನ್ ಮನ್ರೊ 30, ಗುಪ್ಟಿಲ್ 27, ಪರ್ಕಿನ್ಸನ್ 47ಕ್ಕೆ 4, ಜೋರ್ಡನ್ 24ಕ್ಕೆ 2.
ಪಂದ್ಯ ಶ್ರೇಷ್ಠ: ಡೇವಿಡ್ ಮಲನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.