ಪಂಚ ಮಹಿಳಾ ಕಲಾ ಪ್ರಪಂಚ
Team Udayavani, Nov 9, 2019, 5:01 AM IST
ವರ್ಣ ಆರ್ಟ್ಸ್ ಗ್ರೂಪ್ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ “ಪಂಚ ಮಹಿಳಾ ಕಲಾವಿದರ ಕಲಾಪ್ರದರ್ಶನ’ ಆಯೋಜನೆಗೊಂಡಿದೆ. ಈಗಾಗಲೇ ಆರಂಭವಾಗಿರುವ ಪ್ರದರ್ಶನದಲ್ಲಿ, ಕಿಟಕಿಯಿಂದ ಏನನ್ನೋ ವೀಕ್ಷಿಸುತ್ತಿರುವ ಮಗುವಿನ ಚಿತ್ರ, ಕೈಯಲ್ಲಿ ಹೂವಿನ ಗುಚ್ಛ ಹಿಡಿದು ಆನಂದಿಸುವ ಮಗು, ಕೊಡದಲ್ಲಿ ನೀರನ್ನು ತುಂಬಿಕೊಂಡು ಹಸನ್ಮುಖೀಯಾಗಿ ಸಾಗುತ್ತಿರುವ ಮಹಿಳೆ, ನರ್ತಿಸುತ್ತಿರುವ ಬಾಲೆಯ ಚಿತ್ರಗಳು ಕಲಾರಸಿಕರ ಕಣ್ಮನವನ್ನು ತಣಿಸುತ್ತಿವೆ.
ಹಾಗೆಯೇ, ಕೃಷ್ಣ- ರಾಧೆಯರ ನೃತ್ಯ, ಮುಂಜಾನೆಯ ಸೂರ್ಯನ ಕಿರಣಗಳಿಂದ ಪ್ರಕಾಶಿಸುತ್ತಿರುವ ನಿಸರ್ಗ, ಬೆಣ್ಣೆ ಕದಿಯುತ್ತಿರುವ ಕೃಷ್ಣ…. ಹೀಗೆ ಹತ್ತಾರು ವರ್ಣಚಿತ್ರಗಳು ವಿಭಿನ್ನತೆಯನ್ನು ಮರೆದಿವೆ. ಕಲಾವಿದೆಯರಾದ ಬಿ.ಎಚ್. ಜಕ್ಕಳ್ಳಿ, ಸುಧಾ ನಾಗರಾಜ್, ಸವಿತಾ ಕಣ್ಣೂರ್, ರೇಖಾ ಪ್ರಶಾಂತ್, ಸ್ವೀಂಟಿ, ಕ್ಯಾಥರಿನ್ ಅವರು ರಚಿಸಿದ ಕಲಾಕೃತಿಗಳು, ವಿಭಿನ್ನ ನೋಟಗಳನ್ನು ಪರಿಚಯಿಸುತ್ತಿವೆ.
ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಪಾರ್ಕ್ ಸಮೀಪ
ಯಾವಾಗ?: ನ.9- 10, ಶನಿವಾರ- ಭಾನುವಾರ, ಬೆಳಗ್ಗೆ 10.30- 6.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.