ಬಸಳೆ ತಂಬುಳಿ
Team Udayavani, Nov 9, 2019, 4:00 AM IST
ಆರೋಗ್ಯ ಎನ್ನುವುದು ಪ್ರತಿಯೊಬ್ಬರಿಗೂ ಬೇಕಾದದ್ದು, ಮಾಡುವ ಅಡುಗೆಗಳು ಆರೋಗ್ಯ ಹೆಚ್ಚಿಸುವುದಕ್ಕಿಂತ ಆರೋಗ್ಯ ಕುಂಠಿತಗೊಳಿಸುತ್ತವೆ ಹಾಗಾಗಿ ಆದಷ್ಟು ಒಳ್ಳೆಯ ಅಡುಗೆಗಗಳನ್ನು ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ.
ಬೇಕಾಗುವ ಸಾಮಗ್ರಿ
ಬಸಳೆ ಸೊಪ್ಪು-10 ಎಲೆ
ಮೊಸರು ಅಥವಾ ಮಜ್ಜಿಗೆ- 1/2 ಕಪ್
ತೆಂಗಿನ ತುರಿ-1/2 ಕಪ್
ಹಸಿ ಮೆಣಸಿನಕಾಯಿ-3
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಸ್ವಲ್ಪ
ಒಗ್ಗರಣೆಗೆ- ಸಾಸಿವೆ ಕರಿಬೇವು
ಜೀರಿಗೆ- ಅರ್ಧ ಚಮಚ
ಶುಂಠಿ- ಚೂರು
ಮಾಡುವ ವಿಧಾನ
ಬಸಳೆ ಸೊಪ್ಪನ್ನು ತೊಳೆದು ಅನಂತರ ಕತ್ತರಿಸಿಕೊಂಡು, 1 ಚಮಚ ಎಣ್ಣೆಯಲ್ಲಿ ಬಾಡಿಸಿಕೊಳ್ಳಿ. ಅನಂತರ ಬಸಳೆ ಸೊಪ್ಪು, ಜೀರಿಗೆ, ಶುಂಠಿ, ತೆಂಗಿನ ಕಾಯಿ, ಹಸಿ ಮೆಣಸಿನ ಕಾಯಿ ಸೇರಿಸಿ ರುಬ್ಬಿಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆ ಹಾಕಿಕೊಳ್ಳಿ. ಈ ಒಗ್ಗರಣೆಗೆ ರುಬ್ಬಿದ ಮಿಶ್ರಣವನ್ನು ಹಾಕಿ ಮಿಕÕ… ಮಾಡಿ . ಇದಕ್ಕೆ ಅರ್ಧ ಕಪ್ ಮಜ್ಜಿಗೆ ಅಥವಾ ಮೊಸರು ಸೇರಿಸಿದರೆ ಬಸಳೆ ಸೊಪ್ಪಿನ ತಂಬುಳಿ ಸವಿಯಲು ಸಿದ್ಧ.
ಬಸಳೆ ಬೋಂಡ
ಬೇಕಾಗುವ ಸಾಮಗ್ರಿ
ಬಸಳೆ ಸೊಪ್ಪಿನ ಎಲೆ-25
ಕಡಲೆ ಹಿಟ್ಟು-ಕಾಲು ಕೆ.ಜಿ.
ಒಣ ಮೆಣಸಿನ ಪುಡಿ-2 ಚಮಚ
ಅಡುಗೆ ಸೋಡಾ ಪುಡಿ-ಅರ್ಧ ಚಮಚ
ಅರಿಶಿನ ಪುಡಿ-1 ಚಮಚ
ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಬಸಳೆ ಎಲೆಗಳನ್ನು ತೊಳೆದು ಬಟ್ಟೆಯಲ್ಲಿ ಚೆನ್ನಾಗಿ ಒರೆಸಿಡಿ. ಅನಂತರ ಬೋಂಡ ಮಸಾಲೆ ಮಾಡಿಕೊಳ್ಳಬೇಕು. ಕಡಲೆ ಹಿಟ್ಟಿಗೆ ಒಣ ಮೆಣಸಿನ ಪುಡಿ, ಅಡುಗೆ ಸೋಡಾ, ಉಪ್ಪು, ಅರಶಿನ ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ ಹತ್ತು ನಿಮಿಷ ಹಾಗೆಯೇ ಇಡಿ. ಅನಂತರ ಒಂದೊಂದು ಬಸಳೆ ಎಲೆಗಳನ್ನು ಈ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಬಸಳೆ ಬೋಂಡ ಸವಿಯಲು ಸಿದ್ಧ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tragedy: ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್ಗಳು!
Rainy Season: ಮೊಬೈಲ್ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Jammu; ವೈಷ್ಣೋದೇವಿ ರೋಪ್ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.