ತ್ವರಿತ ನ್ಯಾಯದಾನ ರಾಜ್ಯಕ್ಕೆ 6ನೇ ಸ್ಥಾನ

ನ್ಯಾಯಿಕ ವರದಿ ಬಿಡುಗಡೆ: ಮಹಾರಾಷ್ಟ್ರ ಮುಂಚೂಣಿಯಲ್ಲಿ

Team Udayavani, Nov 10, 2019, 4:26 AM IST

ss-31

ಕಾನೂನು ಮತ್ತು ನ್ಯಾಯ ಸುವ್ಯವಸ್ಥೆ ಸಮಾಜದ ಪ್ರಮುಖ ಅಂಶ. ಇದು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದೀಗ 2019ನೇ ಸಾಲಿನ ಭಾರತದ ನ್ಯಾಯಿಕ ವರದಿ ಬಿಡುಗಡೆಯಾಗಿದ್ದು, ದೇಶದಲ್ಲಿ ತ್ವರಿತವಾಗಿ ನ್ಯಾಯದಾನವನ್ನು ನೀಡುವುದರಲ್ಲಿ ಯಾವ ರಾಜ್ಯ ಮುಂಚೂಣಿಯಲ್ಲಿದೆ ಎಂಬ ಮಾಹಿತಿ ಸಹಿತ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಅಂಶಗಳನ್ನು ಸಮೀಕ್ಷೆ ತಿಳಿಸಿದೆ.

ಏನಿದು ವರದಿ?
ನ್ಯಾಯವನ್ನು ಕೇಳಿ ಪಡೆಯುವುದು ಸಾರ್ವಜನಿಕರ ಹಕ್ಕಾಗಿದ್ದು, ಸಮಾಜದ ಪ್ರಜೆಗಳ ಹಿತಾಸಕ್ತಿ ಕಾಯ್ದುಕೊಳ್ಳುವುದು ಆಯಾ ದೇಶ-ರಾಜ್ಯದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ರಾಜ್ಯಗಳ ನ್ಯಾಯಾಂಗ ವ್ಯವಸ್ಥೆ ಪರಿಣಾಮಕಾರಿ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಈ ಸಮೀಕ್ಷೆ ನಡೆಸಲಾಗಿದೆ.

ಇದೇ ಮೊದಲು
ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗುವ ಬೆಳವಣಿಗೆಗೆ ಸಂಬಂಧಪಟ್ಟಂತೆ ಇದೇ ಮೊದಲ ಬಾರಿಗೆ ಇಂಥ ವರದಿ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದಲ್ಲಿನ ಶಾಂತಿ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳಲು ಈ ಸಮೀಕ್ಷೆ ನೆರವಾಗಲಿದೆ.

ಟಾಟಾ ಟ್ರಸ್ಟ್‌ನ ನೆರವು
ಸರಕಾರ ನೀಡಿರುವ ಅಂಕಿ-ಅಂಶ, ಉದ್ದೇಶ ಮತ್ತು ವರದಿಗಳನ್ನಿಟ್ಟುಕೊಂಡು ಟಾಟಾ ಟ್ರಸ್ಟ್‌ ಈ ಒಂದು ಸಮೀಕ್ಷೆಯನ್ನು ಸಿದ್ಧಪಡಿಸಿದ್ದು, ಸೆಂಟರ್‌ ಫಾರ್‌ ಸೋಶಿಯಲ್‌ ಜಸ್ಟೀಸ್‌, ಕಾಮನ್‌ ಕಾಸ್‌, ಕಾಮನ್ವೆಲ್ತ… ಹ್ಯೂಮನ್‌ ರೈಟ್ಸ್‌ ಇನಿಶಿಯೇಟಿವ್‌, ಡಿಎಕೆಎಸ್‌, ಟಿಐಎಸ್‌ಎಸ್‌-ಪ್ರಯಾಸ್‌ ಮತ್ತು ವಿಧಿ ಸೆಂಟರ್‌ ಫಾರ್‌ ಲೀಗಲ್‌ ಪಾಲಿಸಿ ಎಂಬ ಸಂಸ್ಥೆಗಳು ಇದಕ್ಕೆ ಸಾಥ್‌ ನೀಡಿವೆ.

ಮಾನದಂಡಗಳೇನು
ಪೊಲೀಸ್‌ – ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ?
ಕಾರಾಗೃಹಗಳು – ಜೈಲಿನಲ್ಲಿನ ಜನಸಂದಣಿ ಮತ್ತು ಸಮರ್ಪಕ ಮಾನವ ಸಂಪನ್ಮೂಲ
ಹೊಂದಿರುವ ಬಗ್ಗೆ
ನ್ಯಾಯಾಂಗ – ನ್ಯಾಯಾಧೀಶರ ಲಭ್ಯತೆ, ಪ್ರಕರಣಗಳ ನಿರ್ಣಯ ಬಗ್ಗೆ
ಕಾನೂನು ಸಹಾಯ – ಅವಶ್ಯರಿಗೆ ಕಾನೂನು ಸಹಾಯ ಒದಗಿಸುವುದರಲ್ಲಿ ರಾಜ್ಯಗಳ ಕಾರ್ಯಕ್ಷಮತೆ.

28 ರಾಜ್ಯಗಳಲ್ಲಿ ಸಮೀಕ್ಷೆ
ದೇಶದ 28 ರಾಜ್ಯಗಳನ್ನು ಸಮೀಕ್ಷೆಗೆ ಒಳಪಡಿಸಿದ್ದು, ದೊಡ್ಡ ಹಾಗೂ ಮಧ್ಯಮ ವಿಭಾಗದಲ್ಲಿ 18 ರಾಜ್ಯಗಳಿದ್ದು, ಸಣ್ಣ ಪ್ರದೇಶಗಳ ಗುಂಪಿನಲ್ಲಿ 6 ರಾಜ್ಯಗಳಿವೆ.
ಮಹಾರಾಷ್ಟ್ರ ಮೊದಲು ನ್ಯಾಯೋಚಿತವಾಗಿ ಮತ್ತು ತ್ವರಿತವಾಗಿ ನ್ಯಾಯವನ್ನು ನೀಡುವುದರಲ್ಲಿ 28 ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನಗಳಿಸಿದ್ದು, 10 ಅಂಕಗಳಲ್ಲಿ 5.92 ಅಂಕಗಳಿಸಿದೆ.

ರಾಜ್ಯಕ್ಕೆ 6ನೇ ಸ್ಥಾನ
ನಾಲ್ಕು ಮಾನದಂಡಗಳಲ್ಲಿ ಮಧ್ಯಮ ಪ್ರದರ್ಶನ ನೀಡಿರುವ ಕರ್ನಾಟಕ ನ್ಯಾಯೋಚಿತವಾಗಿ ಮತ್ತು ತ್ವರಿತವಾಗಿ ನ್ಯಾಯವನ್ನು ನೀಡುವುದರಲ್ಲಿ 5.11 ಅಂಕಗಳಿಸುವ ಮೂಲಕ 6ನೇ ಸ್ಥಾನವನ್ನು ಪಡೆದುಕೊಂಡಿದೆ.

ರಾಜ್ಯದ ಒಟ್ಟು ಸ್ಥಿತಿ
ಪೊಲೀಸ್‌: ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ರಾಜ್ಯ 5.81 ಅಂಕಗಳಿಸಿದ್ದು, 6ನೇ ಸ್ಥಾನದಲ್ಲಿದೆ.
ಕಾರಾಗೃಹಗಳು : ಜೈಲಿನಲ್ಲಿನ ಜನಸಂದಣಿ ಮತ್ತು ಸಮರ್ಪಕ ಮಾನವ ಸಂಪನ್ಮೂಲ ಮಾನದಂಡದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, 6.31 ಅಂಕವನ್ನು ಗಳಿಸಿದೆ.
ನ್ಯಾಯಾಂಗ: ನ್ಯಾಯಾಧೀಶರ ಲಭ್ಯತೆ, ಪ್ರಕರಣಗಳ ನಿರ್ಣಯ ದದಲ್ಲಿ 16ನೇ ಸ್ಥಾನದಲ್ಲಿರುವ ರಾಜ್ಯ ಕೇವಲ 3,76 ಅಂಕ ಗಳಿಸಿದೆ. ಕಾನೂನು ಸಹಾಯ: ಅವಶ್ಯರಿಗೆ ಕಾನೂನು ಸಹಾಯ ಒದಗಿಸು ವುದರಲ್ಲಿ 7ನೇ ಸ್ಥಾನದಲ್ಲಿರುವ ಕರ್ನಾಟಕ 5.22 ಅಂಕಗಳನ್ನು ಪಡೆದಿದೆ.

67.7 ಶೇ. ವಿಚಾರಣಾಧೀನ ಕೈದಿಗಳು
2016 ರ ಅಂಕಿ-ಅಂಶದ ಪ್ರಕಾರ ಭಾರತದ ಜೈಲಿನಲ್ಲಿ ಶೇ.67.7 ರಷ್ಟು ವಿಚಾರಣಾಧೀನ ಕೈದಿಗಳಿದ್ದಾರೆ.

2.8 ಕೋಟಿ ಪ್ರಕರಣಗಳು ಬಾಕಿ
ದೇಶದ ಅಧೀನ ನ್ಯಾಯಾಲಯಗಳಲ್ಲಿ 2.8 ಕೋಟಿ ಪ್ರಕರಣಗಳ ವಿಚಾರಣೆ ಬಾಕಿ ಇದ್ದು, ಮುಂದಿನ 5 ವರ್ಷಗಳು ಕಳೆದರೂ ಇದರ ಪ್ರಮಾಣದಲ್ಲಿ ಶೇ.24ರಷ್ಟು ಬಾಕಿ ಉಳಿಯಲಿದೆ.

621 ಅಧಿಕಾರಿಗಳು
ದೇಶದ ಒಟ್ಟು 1,412 ಕಾರಾಗೃಹಗಳಿಗೆ ಕೇವಲ 621 ಜೈಲು ಅಧಿಕಾರಿಗಳಿದ್ದಾರೆ.

68 ನೇ ಸ್ಥಾನ
ಕಾನೂನು ನಿಯಮ ಸೂಚ್ಯಂಕದಲ್ಲಿ ವಿಶ್ವದ 126 ದೇಶಗಳ ಪೈಕಿ ಭಾರತ 68ನೇ ಸ್ಥಾನದಲ್ಲಿದೆ.

59 ನೇ ಸ್ಥಾನ
ಹಿಂಸಾಕೃತ್ಯದಿಂದ ಆರ್ಥಿಕ ಪರಿಣಾಮದ ಕುರಿತ ಸೂಚ್ಯಂಕದಲ್ಲಿ ವಿಶ್ವದ 163 ದೇಶಗಳ ಪೈಕಿ ಭಾರತ 59ನೇ ಸ್ಥಾನ ಪಡೆದುಕೊಂಡಿದೆ.

ಟಾಪ್ ನ್ಯೂಸ್

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

missing

ಬರಿಮಾರು ವ್ಯಕ್ತಿ ನಾಪತ್ತೆ; ನದಿ ಕಿನಾರೆಯಲ್ಲಿ ಪಾದರಕ್ಷೆ, ಮೇವಿನ ಕಟ್ಟು ಪತ್ತೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.