ಮೀನುಗಾರರಿಗೆ 2,200 ಮನೆ
ಈ ಬಾರಿ ಇಲಾಖೆಯಿಂದಲೇ ವಿತರಣೆ: ಕೋಟ
Team Udayavani, Nov 9, 2019, 6:00 AM IST
ಮಂಗಳೂರು: ಮೀನುಗಾರರಿಗೆ ಈ ಬಾರಿ ರಾಜೀವ್ ಗಾಂಧಿ ವಸತಿ ನಿಗಮದ ಬದಲು ಮೀನುಗಾರಿಕಾ ಇಲಾಖೆಯಿಂದಲೇ ನೇರವಾಗಿ ಮನೆಗಳನ್ನು ವಿತರಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಬಾರಿ 2,200 ಮನೆಗಳನ್ನು ವಿತರಿಸಲಾಗುವುದು. ಈ ಹಿಂದೆ ರಾಜೀವ್ ಗಾಂಧಿ ವಸತಿ ನಿಗಮದಡಿ ನೀಡಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಪ್ರಗತಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಇಲಾಖೆಯಿಂದಲೇ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಮನೆಗಳನ್ನು ನೀಡುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಮೀನುಗಾರ ಮಹಿಳೆಯರ 50,000 ರೂ. ವರೆಗಿನ ಸಾಲವನ್ನು ಮರುಪಾವತಿಗೆ ಒತ್ತಡ ಹೇರದಿರಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದರು.
ದೇವರ ಹೆಸರು: ಗೊಂದಲ ಬೇಡ
ಕೆಲವು ಬಾರ್ ಹಾಗೂ ವೈನ್ ಶಾಪ್‌ಗ್ಳಿಗೆ ದೇವರ ಹೆಸರನ್ನಿಟ್ಟಿರುವ ಬಗ್ಗೆ ಧಾರ್ಮಿಕ ಇಲಾಖೆಯ ಸಭೆಗಳಲ್ಲಿ ಆಕ್ಷೇಪಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಾನೂನು, ಅಬಕಾರಿ ಹಾಗೂ ಮುಜರಾಯಿ ಇಲಾಖೆಗಳ ಅಧಿಕಾರಿ ಜತೆ ಚರ್ಚಿಸಿ ಟಿಪ್ಪಣಿ ನೀಡುವಂತೆ ಸೂಚಿಸಲಾಗಿದೆ. ಯಾವುದೇ ಆದೇಶ ಆಗಿಲ್ಲ. ಈ ಬಗ್ಗೆ ಗೊಂದಲ ಬೇಡ ಎಂದರು.
ಭಕ್ತರ ಕಾಣಿಕ ಹಣ ದೇಗುಲ ಅಭಿವೃದ್ಧಿಗೆ
ಇ- ಹುಂಡಿ ವ್ಯವಸ್ಥೆಯನ್ನು ಎ ದರ್ಜೆಯ ದೇವಾಲಯಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಇ-ಹುಂಡಿ ಜಾರಿಗೆ ಬಂದ ಬಳಿಕ ದಿನದಲ್ಲಿ ಸಂಗ್ರಹವಾಗುವ ಕಾಣಿಕೆ ಹಣದ ನಿಖರ ಲೆಕ್ಕ ಪ್ರತಿದಿನ ಸಂಜೆಯ ವೇಳೆ ಇಲಾಖೆಗೆ ಲಭ್ಯವಾಗಲಿದೆ. ಭಕ್ತರು ನೀಡುವ ಕಾಣಿಕೆ ಹಣ ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆಯಾಗಲಿದೆ. ಈ ಕುರಿತು ಭಕ್ತರಲ್ಲಿ ತಪ್ಪು ತಿಳಿವಳಿಕೆ ಬೇಡ. ಕಾಣಿಕೆ ಮೊತ್ತ ಹಿಂದೂಗಳ ಅನಾಥಾಲಯ ಹಾಗೂ ಸಂತ್ರಸ್ತರಿಗೂ ಬಳಕೆಯಾಗಲಿದೆ ಎಂದು ಸಚಿವ ಕೋಟ ಹೇಳಿದರು.
ಧಾರ್ಮಿಕ ಪರಿಷತ್‌ಗೆ ನೇಮಕ ಪ್ರಕ್ರಿಯೆ ನಾಲ್ಕು ದಿನಗಳಲ್ಲಿ ಆರಂಭವಾಗಲಿದೆ. ರಾಜ್ಯ ಧಾರ್ಮಿಕ ಪರಿಷತ್ ರಚನೆ, ಬಳಿಕ ಜಿಲ್ಲಾ ಧಾರ್ಮಿಕ ಪರಿಷತ್ತು ಹಾಗೂ ಅನಂತರ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ರಚಿಸಲಾಗುವುದು ಎಂದರು.
ದೇವಾಲಯಗಳಲ್ಲಿ ಸಾಮೂಹಿಕ ವಿವಾಹ
ರಾಜ್ಯದಲ್ಲಿ 191 ಎ ದರ್ಜೆಯ ದೇವಾಲಯಗಳಿದ್ದು ಇದರಲ್ಲಿ ಆಯ್ದ 100 ದೇವಾಲಯಗಳಲ್ಲಿ ಈ ವರ್ಷ 1,000 ಸಾಮೂಹಿಕ ವಿವಾಹಗಳನ್ನು ನಡೆಸಲು ನಿರ್ಧರಿಸಲಾಗಿದೆ. ವಧುವಿಗೆ 1 ಪವನ್ ಚಿನ್ನ, 10,000 ರೂ. ಬೆಲೆಯ ಧಾರೆ ಸೀರೆ, ವರನಿಗೆ 5,000 ರೂ. ಮೊತ್ತದ ವಸ್ತ್ರಗಳನ್ನು ನೀಡಲಾಗುವುದು. ಇದರಲ್ಲಿ ಚಿನ್ನವನ್ನು ಸರಕಾರವೇ ನೀಡಲಿದೆ. ಸೀರೆ ಹಾಗೂ ವಸ್ತ್ರಗಳ ಮೊತ್ತವನ್ನು ಆರ್‌ಟಿಜಿಎಸ್ ಮೂಲಕ ವಧುವರರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.