ಕೊಣ್ಣೂರು ಹೆದ್ದಾರಿಯಲ್ಲಿ ಸರ್ಕಸ್!
Team Udayavani, Nov 9, 2019, 1:28 PM IST
ನರಗುಂದ: ರಸ್ತೆ ತುಂಬೆಲ್ಲ ತಗ್ಗುದಿನ್ನೆ ಎದುರಿನ ವಾಹನದ ಮಾರ್ಗ ನೋಡಿಕೊಂಡು ಮತ್ತೂಂದೆಡೆವಾಲದಂತೆ ಸಾಗಬೇಕು.. ಬೈಕ್ ಸವಾರರ ತಾಪತ್ರಯ ಹೇಳತೀರದು.. ಒಟ್ಟಾರೆ ಧೂಳಿನಿಂದ ಕೂಡಿದ ಹೆದ್ದಾರಿಯಲ್ಲಿ ವಾಹನಗಳು ಸಂಚಾರಕ್ಕೆ ಸರ್ಕಸ್ ಮಾಡುವಂತಾಗಿದೆ.
ನಿತ್ಯ ಸಾವಿರಾರು ವಾಹನಗಳ ದಟ್ಟಣೆ ಹೊಂದಿದ ನಂ. 218ರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ತಾಲೂಕಿನ ಕೊಣ್ಣೂರ ಬಳಿಯ ಮಲಪ್ರಭಾ ನದಿ ಸೇತುವೆ ಅಕ್ಕಪಕ್ಕ ಈ ಪರಿಸ್ಥಿತಿಯಿದೆ.
ಭಾರೀ ವಾಹನಗಳ ಪರದಾಟ: 400 ಮೀಟರ್‌ನಷ್ಟು ಸಂಚಾರ ತೀರಾ ಕಡಿದಾಗಿದ್ದು, ಭಾರೀ ವಾಹನಗಳ ಪಾಡು ಹೇಳತೀರದು. ವಾಹನಗಳು ತಗ್ಗು ದಿನ್ನೆಗಳಲ್ಲಿ ಎತ್ತಲಾದರೂ ವಾಲಿದರೆ ನೆಲಕಚ್ಚುವುದು ನಿಶ್ಚಿತ.
ಹೀಗಾಗಿ ಭಾರೀ ವಾಹನಗಳ ಸವಾರರು ಮೈಯೆಲ್ಲ ಕಣ್ಣಾಗಿ ವಾಹನ ಚಲಾಯಿಸಬೇಕು. ಇನ್ನು ಬೆಲೆಬಾಳುವ ಕಾರುಗಳು ನೆಲದಿಂದ ಒಂದಡಿಯಷ್ಟೇ ಎತ್ತರ ಇರುವುದರಿಂದ ತಗ್ಗು ದಿನ್ನೆಗಳಲ್ಲಿ ಎಲ್ಲಿ ವಾಹನ ಮುಂಭಾಗ ನಜ್ಜುಗುಜ್ಜಾಗುತ್ತದೋ ಎಂಬ ಆತಂಕದಲ್ಲೇ ಸಾಗಬೇಕು. ಬೈಕ್ ಸವಾರರು ನಿಧಾಗತಿಯಲ್ಲಿ ಸಾಗಿದರೂ ಮೇಲೆ ಕುಂತವರು ಎದ್ದು ಕೂಡುತ್ತಲೇ ಸಾಗಬೇಕು.
ಒಟ್ಟಾರೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸರ್ಕಸ್‌ನಂತೆ ಗೋಚರಿಸುತ್ತಿದೆ. ಎರಡು ತಿಂಗಳ ಅವಧಿಯಲ್ಲಿ ಮೂರು ಬಾರಿ ಬಂದ ಮಲಪ್ರಭಾ ನದಿ ಪ್ರವಾಹದಿಂದ ಈ ಸಮಸ್ಯೆ ಎದುರಾಗಿದೆ. ಸೇತುವೆಯಿಂದ ಕೊಣ್ಣೂರು ಕಡೆಗಿನ ಸಂಪರ್ಕ ರಸ್ತೆಯನ್ನು ಪ್ರವಾಹ ಸಂದರ್ಭದಲ್ಲಿ 2-3 ಕಡೆಗೆ ಜೆಸಿಬಿಯಿಂದ ಕೊರೆದ ಪರಿಣಾಮ ಇಂದಿಗೂ ತಾತ್ಕಾಲಿಕ ಸಂಚಾರಕ್ಕೆ ಅನುವಿರುವ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಸಂಚಕಾರ ತರುವಂತಿದೆ. ಹೆಜ್ಜೆಗೊಂದು ಕಂದಕಗಳು ಸಂಚಾರಕ್ಕೆ ಮಾರಕವಾಗಿದೆ. ಇಲ್ಲಿನ ಧೂಳು ಪ್ರಯಾಣಿಕರ ನಿದ್ದೆಗೆಡಿಸಿದೆ.
ಹಳೆ ಸೇತುವೆ ಬಂದ್: ಹೊಸ ಸೇತುವೆ ಪಕ್ಕದಲ್ಲೇ ಹಳೆಯ ಸೇತುವೆ ಸಂಪರ್ಕ ರಸ್ತೆಯೂ ಸ್ಥಗಿತದಿಂದ ಎಲ್ಲ ವಾಹನಗಳೂ ಇದೇ ಎಡರು ತೊಡರಿನ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಹಗಲು ರಾತ್ರಿಯೆನ್ನದೇ ವಾಹನ ದಟ್ಟಣೆಯಷ್ಟೇ ಸಂಚಾರವೂ ಕಷ್ಟಕರವಾಗಿ ಸಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ನರಗುಂದ ಉಪ ವಿಭಾಗ ಈ ಸಮಸ್ಯೆಗೆ ಯಾವಾಗ ಮುಕ್ತಿ ಹಾಡುವುದೋ ಕಾಯ್ದುನೋಡಬೇಕಿದೆ.
ಕಮಾನು ನಿರ್ಮಾಣಕ್ಕೆ ಕ್ರಿಯಾಯೋಜನೆ: ಕೊಣ್ಣೂರ ಗ್ರಾಮದಿಂದ ಸೇತುವೆ ಸಂಪರ್ಕಿಸುವ ಹೆದ್ದಾರಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಇಲ್ಲಿ ಕಮಾನು ನಿರ್ಮಿಸುವ ಕ್ರಿಯಾಯೋಜನೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ತಯಾರಿಸಿದ್ದಾರೆ. ಆ. 8ರಂದು ಪ್ರವಾಹ ಉಕ್ಕಿಹರಿದ ಬಳಿಕ ಹೆದ್ದಾರಿ ದುರಸ್ತಿಗೆ 99 ಲಕ್ಷ ವೆಚ್ಚ ಕ್ರಿಯಾಯೋಜನೆ ಸಲ್ಲಿಸಿ ಸರಕಾರದಿಂದ ಅನುಮೋದನೆ ಪಡೆಯಲಾಗಿತ್ತು. ಬಳಿಕ ಮತ್ತೇ ಎರಡು ಬಾರಿ ಪ್ರವಾಹದಿಂದ ಶಾಶ್ವತ ಪರಿಹಾರಕ್ಕಾಗಿ ಈ ಭಾಗದಲ್ಲಿ 60 ಮೀ. ಉದ್ದ, 4 ಅಡಿ ಎತ್ತರ ಕಮಾನು ಮೂಲಕ ಹೆದ್ದಾರಿ ಸುಧಾರಣೆಗೆ 2.30 ಕೋಟಿ ರೂ. ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಿದ್ದು, ಅನುಮೋದನೆ ದೊರಕಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
99 ಲಕ್ಷ ವೆಚ್ಚದ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗಿತ್ತು. ಶಾಶ್ವತ ಪರಿಹಾರ ದೃಷ್ಟಿಯಿಂದ ಬಾಕ್ಸ್ ಕನ್ವರ್ಟ್ ಕ್ರಿಯಾಯೋಜನೆ ತಯಾರಿಸಿ 2.30 ಕೋಟಿ ವೆಚ್ಚದ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇನ್ನೂ ಅನುಮೋದನೆ ದೊರಕಿಲ್ಲ. – ರಾಜೇಂದ್ರ, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಎಇಇ
-ಸಿದ್ಧಲಿಂಗಯ್ಯ ಮಣ್ಣೂರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.