ಅಯೋಧ್ಯೆ ತೀರ್ಪು ಶನಿವಾರವೇ ಯಾಕೆ ?
Team Udayavani, Nov 9, 2019, 2:50 PM IST
ನವದೆಹಲಿ: ಅಯ್ಯೋಧ್ಯೆಯಲ್ಲಿನ ರಾಮ ಜನ್ಮಭೂಮಿ- ಬಾಬರಿ ಮಸೀದಿ ಸಂಬಂಧಿಸಿ ಸುವರ್ಣ ವರ್ಷದ ವಿವಾದಕ್ಕೆ ತೆರೆ ಬಿದ್ದಿದ್ದು, ಶನಿವಾರ ತೀರ್ಪು ಘೋಷಣೆಯಾಗಿದೆ.
ಆದರೆ ಶನಿವಾರವೇ ಯಾಕೆ ಎಂಬ ಪ್ರಶ್ನೆ ಇದೀಗ ಟ್ರೆಂಡ್ ಸೃಷ್ಟಿಸುತ್ತಿದ್ದು, ಇದರ ಹಿಂದಿರುವ ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ.
ನವೆಂಬರ್ ಮಧ್ಯಾಂತರದಲ್ಲಿ ಅಯೋಧ್ಯೆ ವಿವಾದಕ್ಕೆ ಸಂಬಂಧಪಟ್ಟಂತೆ ತೀರ್ಪು ಹೊರಬರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಶುಕ್ರವಾರ ರಾತ್ರಿ ಅಯೋಧ್ಯೆ ಪ್ರಕರಣದ ತೀರ್ಪನ್ನು ಶನಿವಾರ ಬೆಳಿಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಘೋಷಿಸಲಾಯಿತು. ಈ ದಿಢೀರ್ ಬೆಳವಣಿಗೆ ದೇಶದೆಲ್ಲಡೆ ಸಂಚಲನ ಮೂಡಿಸಿದಲ್ಲದೇ ಕಸಿವಿಸಿ ವಾತಾವರಣವು ಸೃಷ್ಟಿಯಾಗಿತ್ತು. ಆದರೆ ಈ ನಿರ್ಧಾರ ಸಾಮಾಜಿಕ ವಿರೋಧಿ ಶಕ್ತಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಕಾರ್ಯತಂತ್ರದ ನಿಲುವಾಗಿದ್ದು, ಯಾವುದೇ ರೀತಿಯಲ್ಲೂ ಧಾರ್ಮಿಕ ಸೂಕ್ಷ್ಮ ಭಾವನೆಗಳಿಗೆ ದಕ್ಕೆ ಉಂಟಾಗದಂತೆ, ಗಲಭೆ ,ಪಿತೂರಿಗೆ ಅವಕಾಶ ನೀಡದಂತೆ ನಿರ್ವಹಿಸುವುದು ಇದರ ಉದ್ದೇಶವಾಗಿತ್ತು.
ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಹಾಗೂ ರಾಮ್‌ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್ ಹೈಕೋರ್ಟ್ ಆದೇಶಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಆಗಸ್ಟ್ 6ರಿಂದ ಸುಪ್ರೀಂಕೋರ್ಟ್ ನಿತ್ಯ ವಿಚಾರಣೆ ನಡೆಸಿ 40 ದಿನಗಳ ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ಇಂದು ತೀರ್ಪು ನೀಡಿದೆ.
ಮರುಪರಿಶೀಲನೆಗೆ ಅನುಕೂಲವಾಗುವಂತೆ
ಸಾಮಾನ್ಯವಾಗಿ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿದರೆ, ಮರುದಿನ ಫಿರ್ಯಾದಿ ಅಥವಾ ಪ್ರತಿವಾದಿಗಳಲ್ಲಿ ಒಬ್ಬರು ನಿರ್ಧಾರವನ್ನು ಮತ್ತೂಮ್ಮೆ ಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರುತ್ತಾರೆ. ಈ ಪ್ರಕ್ರಿಯೆಯು ಒಂದು ಅಥವಾ ಎರಡು ದಿನ ತೆಗೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಮರುವಿಚಾರಣೆಗೆ ಅನೂಕೂಲವಾಗಲಿ ಎಂದು ನಿರೀಕ್ಷೆ ಮಾಡಿದ ಅವಧಿಗಿಂತ ಮೊದಲ್ಲೇ ತೀರ್ಪುನ್ನು ನೀಡಲಾಗಿದೆ.
ಗೊಗೊಯ್ ನಿವೃತ್ತಿಯೂ ಒಂದು ಕಾರಣ
ನ್ಯಾಯಮೂರ್ತಿ ಗೊಗೊಯ್ ಅವರು ನವೆಂಬರ್ 17ರಂದು ನಿವೃತ್ತರಾಗಲಿದ್ದು, ನ್ಯಾಯಾಲಯವು ಯಾವುದೇ ದಿನ ವಿಚಾರಣೆ ನಡೆಸಿ, ಪ್ರಕರಣವನ್ನು ಅದಕ್ಕೆ ಸಂಬಂಧಿಸಿದ ತೀರ್ಪು ಸಹ ನೀಡಬಹುದಿತ್ತು. ಆದರೆ, ಪ್ರಮುಖವಾದ ಪ್ರಕರಣದ ತೀರ್ಪನ್ನು ರಜಾ ದಿನಗಳಲ್ಲಿ ಘೋಷಿಸಲು ಆಗುವುದಿಲ್ಲ. ನ್ಯಾಯಾಧೀಶರು ನಿವೃತ್ತರಾಗುವ ಒಂದು ದಿನ ಮೊದಲು ತೀರ್ಪುಗಳನ್ನು ನೀಡುವಂತಿಲ್ಲ. ಹೀಗಾಗಿ, ನವೆಂಬರ್ 16 ಕೂಡ ಶನಿವಾರ ಬಂದಿದ್ದು. ಇದಲ್ಲದೇ ನ್ಯಾಯಮೂರ್ತಿ ಗೊಗೊಯ್ ಅವರ ಕೊನೆಯ ಕೆಲಸದ ದಿನ ನವೆಂಬರ್ 15 ಆಗಿದೆ. ಈ ಹಿನ್ನಲೆ ಅಯೋಧ್ಯೆ ಪ್ರಕರಣದ ತೀರ್ಪನ್ನು ನವೆಂಬರ್ 14 ಅಥವಾ ನವೆಂಬರ್ 15 ಕ್ಕಿಂತ ಮುನ್ನವೇ ಘೋಷಿಸಿದ್ದು, ನ್ಯಾಯಮೂರ್ತಿ ಗೊಗೊಯಿ ನಿವೃತ್ತಿ ಮೊದಲು ಪ್ರಕರಣ ಇತ್ಯರ್ಥವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.