19 ಏಜಿನ ಆವೇಗಕ್ಕೆ ಸೆನ್ಸಾರ್ ಮಂಡಳಿಯ ಮೆಚ್ಚುಗೆ!
Team Udayavani, Nov 9, 2019, 7:40 PM IST
ಕಳೆದ ಒಂದಷ್ಟು ದಿನಗಳಿಂದ ಹೊಸಬರೇ ಸೇರಿ ರೂಪಿಸಿರುವ 19 ಏಜ್ ಈಸ್ ನಾನ್‌ಸೆನ್ಸ್ ಚಿತ್ರ ಭಾರೀ ಸೌಂಡು ಮಾಡುತ್ತಿದೆ. ಹೇಳಿಕೇಳಿ ಇದೀಗ ಕನ್ನಡ ಚಿತ್ರರಂಗ ಹೊಸ ಅಲೆಯ ಚಿತ್ರಗಳಿಂದ ಸಮೃದ್ಧಗೊಂಡಿದೆ. ಈ ಘಳಿಗೆಯಲ್ಲಿ ಹೊಸಾ ತಂಡವೊಂದು ಎಂಟ್ರಿ ಕೊಟ್ಟಿತೆಂದರೆ ಪ್ರೇಕ್ಷಕರ ಚಿತ್ತ ತಾನೇ ತಾನಾಗಿ ಅದರತ್ತ ನೆಟ್ಟುಕೊಳ್ಳುತ್ತದೆ. 19 ಏಜ್ ಈಸ್ ನಾನ್‌ಸೆನ್ಸ್ ಚಿತ್ರದತ್ತ ಪ್ರೇಕ್ಷಕರು ಹೊರಳಿ ನೋಡುತ್ತಿರೋದೂ ಕೂಡಾ ಈ ಕಾರಣದಿಂದಲೇ. ಹೊಸಬರೇ ಸೇರಿ ರೂಪಿಸಿರೋ ಈ ಸಿನಿಮಾ ಸೆನ್ಸಾರ್ ಅನ್ನೂ ಇದೀಗ ಮುಗಿಸಿಕೊಂಡಿದೆ. ವಿಶೇಷವೆಂದರೆ ಈ ಚಿತ್ರ ಖುದ್ದು ಸೆನ್ಸಾರ್ ಅಧಿಕಾರಿಗಳಿಂದಲೇ ಮೆಚ್ಚುಗೆ ಪಡೆದುಕೊಂಡಿದೆ.
ಸೆನ್ಸಾರ್ ಅಧಿಕಾರಿಗಳು ತಿಂಗಳೊಂದಕ್ಕೆ ಹತ್ತಾರು ಚಿತ್ರಗಳನ್ನು ನೋಡುತ್ತಾರೆ. ಆದರೆ ಅವರ ಕಡೆಯಿಂದಲೇ ಮೆಚ್ಚುಗೆ ಪಡೆದುಕೊಳ್ಳೋ ಸಿನಿಮಾಗಳು ವಿರಳ. 19 ಏಜ್ ಈಸ್ ನಾನ್‌ಸೆನ್ಸ್ ಚಿತ್ರ ಅಂಥಾ ವಿರಳ ಸಿನಿಮಾಗಳ ಸಾಲಿನಲ್ಲಿ ಸೇರಿಕೊಂಡಿದೆ. ಈ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಕೊಟ್ಟಿರೋ ಸೆನ್ಸಾರ್ ಮಂಡಳಿ ಅಧಿಕಾರಿಗಳು ಚಿತ್ರತಂಡದ ಶ್ರಮವನ್ನು, ಕ್ರಿಯೇಟಿವಿಟಿಗಳನ್ನು ಮೆಚ್ಚಿಕೊಂಡಿದ್ದಾರೆ. ಈ ಉತ್ತೇಜಕ ಮಾತುಗಳಿಂದ ಇಡೀ ಚಿತ್ರತಂಡ ಖುಷಿಗೊಂಡಿದೆ. ಈ ಮೂಲಕವೇ ಹೊಸಬರ ತಂಡಕ್ಕೆ ಗೆಲುವು ಸಿಗೋದು ಗ್ಯಾರೆಂಟಿ ಎಂಬಂಥಾ ನಂಬಿಕೆಯೂ ಹುಟ್ಟಿಕೊಂಡಿದೆ.
ಇದು ಲೋಕೇಶ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ. ಇಲ್ಲಿ ಲೋಕೇಶ್ ಅವರ ಪುತ್ರ ಮನುಷ್ ನಾಯಕನಾಗಿ ನಟಿಸಿದ್ದಾನೆ. ಈ ಸಿನಿಮಾದ ಕಥೆ ಹತ್ತೊಂಬತ್ತರ ಹರೆಯದ ಸುತ್ತ ಗಿರಕಿ ಹೊಡೆಯುವಂಥಾದ್ದು. ಆದ್ದರಿಂದಲೇ ಅದೇ ವಯೋಮಾನದ ಮನುಷ್‌ನನ್ನು ನಾಯಕನನ್ನಾಗಿಸಲಾಗಿದೆ. ಹಾಗೆಂದು ಇದೀಗ ತಾನೇ ಬಿಕಾಂ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರೋ ಮನುಷ್ ಏಕಾಏಕಿ ನಾಯಕನಾಗಿಲ್ಲ. ನಿರ್ಮಾಪಕ ಲೋಕೇಶ್ ಆತನಿಗೆ ಸೂಕ್ತವಾದ ತರಬೇತಿ ಕೊಡಿಸಿದ್ದಾರೆ. ಈ ಬಲದಿಂದಲೇ ಮನುಷ್ ಚೆಂದಗೆ ನಟಿಸಿದ್ದಾನಂತೆ. ಇದೆಲ್ಲ ಅಂಶಗಳು ಸೇರಿಕೊಂಡು ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾಗೆ ಶಹಬ್ಬಾಸ್‌ಗಿರಿ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.