ಕರಾವಳಿ ಕಡಲ ಕಿನಾರೆಯಲ್ಲಿ ಫಿಲ್ಮ್ ಸಿಟಿ ರೂಪುಗೊಳ್ಳಲಿ

ಬಹುಭಾಷಾ ನಟ ಸುಮನ್‌ ತಲ್ವಾರ್‌ ಮನದಾಳ ಮಾತು

Team Udayavani, Nov 10, 2019, 5:00 AM IST

dd-25

ಮಹಾನಗರ: “ತುಳು ಚಲನಚಿತ್ರ ರಂಗ ಬೆಳೆಯುತ್ತಿದ್ದು, ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಮಂಗಳೂರಿನ ಸಮುದ್ರ ಕಿನಾರೆಯಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕು. ಇದರಿಂದ ಬೀಚ್‌ ಪ್ರವಾಸೋದ್ಯಮ ಹಾಗೂ ತುಳು ಚಿತ್ರೋದ್ಯಮಕ್ಕೆ ಹೊಸ ಭವಿಷ್ಯ ದೊರೆಯಲು ಸಾಧ್ಯ’ ಎಂದು “ಸುದಿನ’ಕ್ಕೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಹುಭಾಷಾ ನಟ ಸುಮನ್‌ ತಲ್ವಾರ್‌. ಮಂಗಳೂರಿನ ಅತ್ತಾವರ ಮೂಲದ ಸುಮನ್‌ ಅವರು ಬೆಳೆದದ್ದೆಲ್ಲ ಚೆನ್ನೈನಲ್ಲಿ. ಕರಾವಳಿ ಬಗ್ಗೆ ಅವರಿಗೆ ಅಭಿಮಾನವಿದೆ. ಕಾರ್ಯಕ್ರಮವೊಂದರ ನಿಮಿತ್ತ ಮಂಗಳೂರಿಗೆ ಆಗಮಿಸಿದ ಸುಮನ್‌ ಅವರು “ಉದಯವಾಣಿ ಸುದಿನ’ ಜತೆ ಮನದಾಳದ ಮಾತು ಹಂಚಿಕೊಂಡಿದ್ದು ಹೀಗೆ…

ಚಲನಚಿತ್ರ ರಂಗಕ್ಕೆ ನಿಮ್ಮ ಎಂಟ್ರಿ ಹೇಗಾಯ್ತು?
ಚಿತ್ರರಂಗದಲ್ಲಿ ನನಗೆ ಗಾಡ್‌ಫಾದರ್‌ ಯಾರೂ ಇರಲಿಲ್ಲ. ಯಾವುದೇ ನಟನೆಯ ಕೋರ್ಸ್‌ ಕೂಡ ಮಾಡಿಲ್ಲ. ನಾನು ಚೆನ್ನೈನಲ್ಲಿ ಪದವಿ ಕಲಿಯುತ್ತಿರುವ ವೇಳೆ ತಮಿಳು ಚಲ ನಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. “ಸ್ವಿಮ್ಮಿಂಗ್‌ ಫೂಲ್‌’ ಎಂಬ ಚಲನಚಿತ್ರಕ್ಕೆ ನಾಯಕ ನಟನಾಗಿ ಎಂಟ್ರಿ ಮಾಡಿದೆ. “ಜಾಕಿ ಜಾನ್‌’ ಎಂಬ ಚಿತ್ರದ ಮುಖೇನ ಕನ್ನಡ ಭಾಷೆಗೆ ಪಾದಾರ್ಪಣೆ ಮಾಡಿದೆ. 40 ವರ್ಷಗಳಲ್ಲಿ 9 ಭಾಷೆಯ 450ಕ್ಕೂ ಮಿಕ್ಕಿ ಚಲನಚಿತ್ರಗಳಲ್ಲಿ ನಟಿಸುವ ಭಾಗ್ಯ ದೊರಕಿದೆ.

ನೀವು ಕರಾವಳಿ ಮೂಲದವರಾಗಿ ಬೇರೆ ಭಾಷೆ ಚಿತ್ರದಲ್ಲಿ ನಟಿಸಿದ ಅನುಭವ?
ನಾನು ಈಗಾಗಲೇ ಸುಮಾರು 9 ಭಾಷೆಗಳಲ್ಲಿ ನಾನು ನಟಿಸಿದ್ದು, ಇದಕ್ಕೆ ನನ್ನ ಊರಿನ ದೈವ-ದೇವರ ಆಶೀರ್ವಾದವೇ ಕಾರಣ. ತೆಲುಗು ಚಿತ್ರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುವುದು ಸುಲ ಭವಲ್ಲ. ಅಭಿಮಾನಿಗಳು ನನ್ನ ನಟನೆಯನ್ನು ಒಪ್ಪಿಕೊಂಡಿದ್ದಾರೆ. ಅವರಿಗೆ ನಾನು ಚಿರರುಣಿ.

ಕರಾವಳಿಯ ಹೊಸ ಪ್ರತಿಭೆಗಳಿಗೆ ನಿಮ್ಮ ಸಲಹೆ?
ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಮಯ ಪಾಲನೆ ಅತೀ ಮುಖ್ಯ. ಜತೆಗೆ ಅವರ ನಡವಳಿಕೆ ಕೂಡ ಉತ್ತಮ ವಾಗಿರಬೇಕು. ನಿರ್ದೇಶಕ, ನಿರ್ಮಾಪಕರ ಮಾತಿಗೆ ಬೆಲೆ ಕೊಟ್ಟು ಕೆಲಸ ಮಾಡಬೇಕು. ಚಿತ್ರೀಕರಣಕ್ಕೂ ಮುನ್ನ ಅಭ್ಯಾಸ ಅತೀ ಮುಖ್ಯ.

ನಿಮ್ಮ ಮುಂದಿನ ಪ್ರೊಜೆಕ್ಟ್?
ಕನ್ನಡದಲ್ಲಿ “ಪ್ರೇಮಪೂಜ್ಯಂ’ ಎಂಬ ಚಲನಚಿತ್ರ ಚಿತ್ರೀಕರಣ ನಡೆಯುತ್ತಿದೆ. ತಮಿಳು-ಕನ್ನಡ ಭಾಷೆಯಲ್ಲಿ ತೆರೆಕಾಣ ಲಿರುವ ಹೊಸ ಚಿತ್ರವೊಂದರಲ್ಲೂ ನಟಿಸು ತ್ತಿದ್ದು ಇದೇ ತಿಂಗಳು ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಉಳಿದಂತೆ ತಮಿಳು, ತೆಲುಗು ಚಿತ್ರಕ್ಕೆ ಸಹಿ ಹಾಕಿದ್ದೇನೆ.

ತುಳು ಚಲನಚಿತ್ರ ಕ್ಷೇತ್ರ ಬೆಳೆಯುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ?
ತುಳು ಚಿತ್ರರಂಗದ ವ್ಯಾಪ್ತಿ ಮತ್ತಷ್ಟು ಪಸರಿಸಬೇಕು. ಇದಕ್ಕೆ ರಾಜ್ಯ ಸರಕಾರ ಪ್ರೋತ್ಸಾಹ ನೀಡಬೇಕು. ತುಳು ಚಿತ್ರಕ್ಕೆ ಬೇರೆ ಜಿಲ್ಲೆಗಳಲ್ಲಿ ಚಿತ್ರ ಮಂದಿರದ ಸಮಸ್ಯೆ ಇದೆ. ತುಳು ಚಲನಚಿತ್ರಕ್ಕೆ ಬೇರೆ ಭಾಷೆಯ ನಟರನ್ನು ಪರಿಚಯಿಸಬೇಕು. ಆಗ ಡಬ್ಬಿಂಗ್‌ ಕಲಾವಿದರಿಗೆ ಕೆಲಸ ಸಿಗುತ್ತದೆ. ಗುಣ ಮಟ್ಟದ ಚಿತ್ರ ಬಂದರೆ ಅಭಿಮಾನಿಗಳು ಕೈಬಿಡುವುದಿಲ್ಲ.

ತುಳು ಚಿತ್ರರಂಗದಲ್ಲಿ ನೀವು ನಟಿಸುವ ಬಗ್ಗೆ?
ಖಂಡಿತವಾಗಿಯೂ ಆಸೆ ಇದೆ. ಫೈಟ್‌ ಸೀನ್‌, ಹಾಡು ಒಳಗೊಂಡ ಕಥೆಯಲ್ಲಿ ಗಟ್ಟಿತನ ಇದ್ದರೆ ಖಂಡಿತವಾಗಿಯೂ ನಟಿಸುತ್ತೇನೆ. ಕೆಲವು ಆಫರ್‌ ಬಂದಿತ್ತು. ಆದರೆ ಕೆಲವು ಕಾರಣದಿಂದ ನಟಿಸಲು ಸಾಧ್ಯವಾಗಲಿಲ್ಲ. ತುಳು ಚಿತ್ರದ ನಿರ್ದೇಶನ, ನಿರ್ಮಾಣ ಮಾಡುವ ಯೋಚನೆ ಇದೆ. ಈ ಚಿತ್ರದಲ್ಲಿ ತುಳು, ತಮಿಳು, ಕನ್ನಡ, ತೆಲುಗು, ಮಲಯಾಳ ಕಲಾವಿದರು ನಟಿಸುತ್ತಾರೆ. ಬೇರೆ ಭಾಷೆಗೆ ಅದು ಡಬ್‌ ಆಗಬೇಕು ಎಂಬ ಕನಸಿದೆ.

ಕಾರ್ಗಿಲ್‌ ಹುತಾತ್ಮ ಯೋಧರ ಕುಟುಂಬಕ್ಕೆ 175 ಎಕರೆ ಭೂಮಿ !
ಹೈದರಾಬಾದ್‌ ನಗರದಿಂದ ಹೊರವಲಯದಲ್ಲಿ ಸ್ಟುಡಿಯೋ ನಿರ್ಮಾಣಕ್ಕಾಗಿ 175 ಎಕರೆ ಜಾಗ ತೆಗೆದುಕೊಂಡಿದ್ದೆ. ಇದನ್ನು ಕಾರ್ಗಿಲ್‌ ವಾರ್‌ ಹೀರೋಸ್‌ಗಳಿಗೆ ನೀಡಿದ್ದೇನೆ. ಇದರಲ್ಲಿ ಹುತಾತ್ಮ ಯೋಧರ ಕುಟುಂಬ ಮನೆ ಕಟ್ಟಬಹುದು. ಸದ್ಯ ಈ ಜಾಗದಲ್ಲಿ ಕೆಲವೊಂದು ತೊಡಕುಗಳಿದ್ದು, ಡಿಸೆಂಬರ್‌ ಅಂತ್ಯದ ವೇಳೆ ಪ್ರಧಾನಿ ಮುಖೇನ ಜಾಗ ಹಸ್ತಾಂತರಿಸುತ್ತೇನೆ. ದೇಶಕ್ಕೆ ಇದು ನನ್ನ ಸೇವೆ. ಸೈನಿಕ ಕುಟುಂಬಕ್ಕೆ ಸಹಾಯ ಮಾಡಲು ಎಲ್ಲರೂ ಮುಂದೆ ಬರಬೇಕು.

- ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.