ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ನಗರದ ಆದ್ಯತೆಯಾಗಲಿ


Team Udayavani, Nov 10, 2019, 5:03 AM IST

dd-27

ಪ್ಲಾಸ್ಟಿಕ್‌ ಜಗತ್ತನ್ನು ಕಾಡುತ್ತಿರುವ ಜಟಿಲವಾದ ಸಮಸ್ಯೆ. ಮಾನವನ ನಿತ್ಯದ ಬಳಕೆಗೆ ಕಂಡುಹಿಡಿಯಲಾದ ಪ್ಲಾಸ್ಟಿಕ್‌ ಇಂದು ಇಡೀ ಜಗತ್ತಿಗೆ ಹೆಮ್ಮಾರಿಯಾಗಿ ಪರಿಣಮಿಸಿದೆ. ಇದರಿಂದ ಉದ್ಭವಿಸಿರುವ ಸಮಸ್ಯೆಗಳು ಕೂಡ ಹಲವು. ದೀರ್ಘ‌ಕಾಲಿಕ ಬಾಳಿಕೆ ಬರುವಂತ ಪ್ಲಾಸ್ಟಿಕ್‌ಗಿಂತ ಬಳಸಿ ಎಸೆಯುವ -ಪ್ಲಾಸ್ಟಿಕ್‌ನಿಂದ ಇಂದು ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಲ್ಲೂ ದಿನನಿತ್ಯ ಸಾವಿರಾರು ಟನ್‌ ಲೆಕ್ಕದಲ್ಲಿ ಕಸದ ರಾಶಿ ಸೃಷ್ಟಿಯಾಗುತ್ತಿದೆ. ಹೀಗೆ ಸೃಷ್ಟಿಯಾದ ತ್ಯಾಜ್ಯದ ಸಮರ್ಪಕ ಮರುಬಳಕೆ ಮತ್ತು ಸಂಸ್ಕರಣೆಯ ಕೊರತೆಯಿಂದಾಗಿ ಪರಿಸರಕ್ಕೆ ತೀವ್ರತರವಾದ ಹಾನಿಯಾಗುತ್ತದೆ.

ಅದರಲ್ಲಿ ಭಾರತದಂತಹ ದೇಶಗಳಲ್ಲಿ ಸ್ವತ್ಛತೆಯ ಅರಿವಿನ ಕೊರತೆಯಿಂದಾಗಿ ಎಲ್ಲೆಂದರಲ್ಲಿ ಕಸದ ರಾಶಿ ಹಾಕಿ ಅದು ಮಣ್ಣಿನಡಿಯಲ್ಲಿ ಸೇರಿ ಮಣ್ಣು ತನ್ನ ಫ‌ಲವತ್ತೆತೆ ಕಳೆದುಕೊಂಡು ವಿಷಕಾರಿಯಾಗುತ್ತಿದೆ. ಮಳೆಗಾಲದಲ್ಲಿ ತೊರೆ, ಹಳ್ಳ, ನದಿ ಸಾಗರಗಳೊಡಲೊಳಗೆ ಸೇರಿ ಅಲ್ಲಿರುವ ಜಲಚರ ಜೀವರಾಶಿಗಳ ಬದುಕಿಗೂ ಕಂಟಕವಾಗಿದೆ. ಇದರಿಂದಾಗುತ್ತಿರುವ ಈ ಎಲ್ಲ ಹಾನಿಯನ್ನು ತಡೆಯಲು ಪ್ಲಾಸ್ಟಿಕ್‌ ರಸ್ತೆಗಳ ನಿರ್ಮಾಣ ಅತ್ಯಂತ ಪರಿಣಾಮಕಾರಿಯಾದ ಪರಿಹಾರವಾಗಿದೆ ಎನ್ನಬಹುದು. ಈ ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಮೊದಲಬಾರಿಗೆ ಸಂಶೋಧನೆಯಲ್ಲಿ ತೊಡಗಿಕೊಂಡವರು ಮಧುರೈನ ತಿಯಾಗರಾಜರ್‌ ಎಂಜಿನಿಯರಿಂಗ್‌ ಕಾಲೇಜಿನ ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರದಾ ರಾಜಗೋಪಾಲನ್‌ ವಾಸುದೇವನ್‌. ಇವರನ್ನು “ಪ್ಲಾಸ್ಟಿಕ್‌ ಮ್ಯಾನ್‌ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ.

ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ಹೇಗೆ?
ದಿನನಿತ್ಯ ಸೃಷ್ಟಿಯಾಗುತ್ತಿರುವ ಪ್ಲಾಸ್ಟಿಕ್‌ ತಾಜ್ಯ ಬಳಸಿಕೊಂಡು ರಸ್ತೆಗಳನ್ನು ನಿರ್ಮಾಣ ಮಾಡುವುದನ್ನು ಇತ್ತೀಚೆಗೆ ಸಂಶೋಧಿಸಲಾಗಿದ್ದು ಪ್ಲಾಸ್ಟಿಕ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಸಂಶೋಧನೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಪ್ಲಾಸ್ಟಿಕ್‌ ತಾಜ್ಯವನ್ನು ಸಂಗ್ರಹಿಸಿ ಅದನ್ನು ಒಣಗಿಸಿ, ಚೂರು ಚೂರು ಮಾಡಿ ಅನಂತರ 170ಡಿಗ್ರಿ ಸೆಲ್ಸಿಯಸ್‌ ನಷ್ಟು ಶಾಖದಲ್ಲಿ ಕಾಯಿಸಿದ ಡಾಮರಿನೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಅನಂತರ ಇದನ್ನು ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತದೆ.

ಎಲ್ಲಲ್ಲಿ ರಸ್ತೆಗಳ ನಿರ್ಮಾಣ
ನೆದರ್‌ಲ್ಯಾಂಡ್‌ ಸಹಿತ ಇಂದು ವಿಶ್ವದ ಅನೇಕ ರಾಷ್ಟ್ರಗಳು ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ಮಾಡಲು ಉತ್ಸುಕತೆ ತೊರಿಸುತ್ತಿವೆ. ಇದಕ್ಕೆ ಭಾರತವೂ ಹೊರತಾಗಿಲ್ಲ . ಜಗತ್ತಿನಲ್ಲೆ ಭಾರತ ಎರಡನೇ ಅತಿ ಅತಿದೊಡ್ಡ ರಸ್ತೆ ಸಂಪರ್ಕಜಾಲವನ್ನು ಹೊಂದಿದೆ. ಇದು ನಮ್ಮ ದೇಶಕ್ಕೆ ಇನ್ನಷ್ಟು ಸಹಕಾರಿಯಾಗಬಲ್ಲದು. ದಿನನಿತ್ಯ ಭಾರತದಲ್ಲಿ 15,000 ಟನ್‌ ಪ್ಲಾಸ್ಟಿಕ್‌ ತಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ 9,000 ಟನ್‌ಗಳಷÒನ್ನು ಮಾತ್ರ ಮರುಬಳಕೆಗೆ ಬಳಸಲಾಗುತ್ತಿದ್ದು ಉಳಿದ ತ್ಯಾಜ್ಯ ಸುಡುವುದು, ಜಲಮೂಲ, ಮಣ್ಣಿನ ಪದರದಲ್ಲಿ ಸೇರುತ್ತಿದೆ. ಭಾರತದಲ್ಲಿ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡುವಲ್ಲಿ ಮುಂಚೂಣಿಯಲ್ಲಿದೆ 2011 ರಿಂದ ಇದುವರೆಗೆ 1,600 ಟನ್‌ ಪ್ಲಾಸ್ಟಿಕೆ ಬಳಸಿಕೊಂಡು 1,0345.23 ಕಿ.ಮೀ ರಸ್ತೆ ನಿರ್ಮಾಣ ಮಾಡಿದೆ. ಮಹಾರಾಷ್ಟ್ರ 3,343 ಕಿಲೊ ಪ್ಲಾಸ್ಟಿಕ್‌ ಬಳಸಿ 1,430 ಕಿ. ಮೀ ರಸ್ತೆ ನಿರ್ಮಿಸಿದೆ. ಇಂದೋರ್‌ ಕಳೆದೆರಡು ವರ್ಷಗಳಲ್ಲಿ 5,000 ಕಿಲೋ ಪ್ಲಾಸ್ಟಿಕ್‌ ಬಳಸಿ 45 ಕಿ.ಮೀ ರಸ್ತೆ ನಿರ್ಮಿಸಿದೆ. ಭಾರತ ಸರಕಾರ ಒಂದು ಲಕ್ಷ ಕಿಮೀ ರಸ್ತೆಯನ್ನು ನಿರ್ಮಿಸುವ ಗುರಿ ಹೊಂದಿದೆ.

ಆದರೆ ಕರ್ನಾಟಕ ಈ ವಿಚಾರದಲ್ಲಿ ಹಿಂದೆ ಬಿದ್ದಂತಿದೆ. ಸ್ಮಾರ್ಟಯಾಗುವತ್ತು ಹೆಜ್ಜೆ ಇಟ್ಟಿರುವ ಬೆಂಗಳೂರು, ಮಂಗಳೂರುಗಳಲ್ಲಿ ಇದನ್ನು ಅಳವಡಿಸಿಕೊಂಡರೆ ಪ್ಲಾಸ್ಟಿಕ್‌ ಸಮಸ್ಯೆಗೆ ಒಂದು ರೀತಿ ಪರಿಹಾರ ಮತ್ತು ಸ್ವತ್ಛ ಭಾರತ ಯೋಜನೆಯನ್ನು ಸಹ ಸಮರ್ಪಕವಾಗಿ ಜಾರಿಗೆ ತಂದಾಗುತ್ತದೆ.

ಪ್ಲಾಸ್ಟಿಕ್‌ ರಸ್ತೆಯಿಂದಾಗುವ ಲಾಭಗಳು
· ಪ್ಲಾಸ್ಟಿಕ್‌ ಸಮಸ್ಯೆಯನ್ನು ಹೊಗಲಾಡಿಸಬಹುದು.
· ಪರಿಸರ ಮಾಲಿನ್ಯ ತಡೆಗೆ ಸಹಕಾರಿ.
· ಧಾರಾಕಾರ ಮಳೆ, ಪ್ರವಾಹಗಳಂತ ಸಮಯದಲ್ಲಿ ಬೇಗನೆ ಹಾಳಗುವದಿಲ್ಲ.
· ಕಡಿಮೆ ವೆಚ್ಚ ತಗುಲುತ್ತದೆ.
· ಕಾಂಕ್ರಿಟ್‌ ರಸ್ತೆಗಿಂತ ಸುರಕ್ಷತೆ ಹೆಚ್ಚು, ಗುಂಡಿಗಳು ಉಂಟಾಗುವುದು ವಿರಳ ಮತ್ತು ನಿರ್ವಹಣಾ ವೆಚ್ಚವು ಕಡಿಮೆ.
· ಸುಧೀರ್ಘ‌ ಬಾಳಿಕೆ ಬರುತ್ತದೆ.
· ಆರ್ಥಿಕ ಸ್ನೇಹಿ ಯೋಜನೆಯಾಗಿದೆ.

-  ಶಿವಾನಂದ ಎಚ್‌.

ಟಾಪ್ ನ್ಯೂಸ್

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

75752

Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್‌ʼ ರಿಲೀಸ್‌ ಡೇಟ್..‌ ಫ್ಯಾನ್ಸ್‌ ಖುಷ್

Revanna

Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

15-uv-fusion

UV Fusion: ಶ್ರೇಷ್ಠನಾಗುವುದಕ್ಕಿಂತ ಉತ್ತಮನಾಗುವುದೇ ಲೇಸು

13-

Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.